ಸೀರೆಯಲ್ಲೂ ಯಾಕಿಷ್ಟು ಹಾಟ್; ಶ್ವೇತಾ ಶ್ರೀವಾತ್ಸವ್ ಕಾಲೆಳೆದ ಹೈಕ್ಲು, ಕಾಮೆಂಟ್ ವೈರಲ್!
ಸಖತ್ ವೈರಲ್ ಆಯ್ತು ಶ್ವೇತಾ ಶ್ರೀವಾತ್ಸವ್ ಸೀರೆ ಫೋಟೋ. ಸೀರೆಯಲ್ಲೂ ಹಾಟ್ ಆಗಿ ಕಾಣಿಸಬಹುದು ಎಂದು ತೋರಿಸಿಕೊಟ್ಟ ನಟ.....
2006ರಲ್ಲಿ ಮುಖಾ ಮುಖಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶ್ವೇತಾ ಶ್ರೀವಾತ್ಸವ್ ಈಸ ಬೇಡಿಕೆಯ ನಟಿ.
2013ರಲ್ಲಿ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ಖುಷಿಯಾಗಿ ಕನ್ನಡಿಗರಿಗೆ ಪರಿಚಯವಾಗಿ ಸೂಪರ್ ಹಿಟ್ ಕಂಡು ಜನಪ್ರಿಯತೆ ಪಡೆದರು.
ಇದಾದ ಮೇಲೆ ಫೇರ್ ಆಂಡ್ ಲವ್ಲಿ, ಕಿರಗೂರಿನ ಗಯ್ಯಾಳಿಗಳು, ಹೋಪ್ ಮತ್ತು ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ನಟಿಸಿದ್ದಾರೆ ಶ್ವೇತಾ.
ನಾಲ್ಕು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಶ್ವೇತಾ ಸುಮಾರು 1,461 ಪೋಸ್ಟ್ ಅಪ್ಲೋಡ್ ಮಾಡಿದ್ದಾರೆ. ಅದರಲ್ಲಿ ನೆಟ್ಟಿಗರ ಗಮನ ಸೆಳೆದಿರುವುದು ಸೀರೆ ಲುಕ್.
ಹಬ್ಬ ಅಥವಾ ಯಾವುದೇ ಕಾರ್ಯಕ್ರಮ ಇರಲಿ ಸಿಂಪಲ್ ಆಗಿ ಸೀರೆಯಲ್ಲಿ ಮಿಂಚುವ ನಟಿಯರಲ್ಲಿ ಶ್ವೇತಾ ಕೂಡ ಒಬ್ಬರು. ಸಿನಿಮಾದಲ್ಲೂ ಹೀಗೆ ಸಿಂಪಲ್.
ಅತಿ ಹೆಚ್ಚು ಸಲ ಸೀರೆಯನ್ನು ಆಯ್ಕೆ ಮಾಡಿಕೊಳ್ಳುವ ಶ್ವೇತಾ ಪ್ರತಿ ಸಲವೂ ಡಿಫರೆಂಟ್ ಆಗಿ ಧರಿಸುತ್ತಾರೆ. ಕೆಲವೊಮ್ಮೆ ಸೂಪರ್ ಹಾಟ್ ಕೆಲವೊಮ್ಮೆ ಸಿಂಪಲ್ ಕೂಲ್.
ಹಬ್ಬದ ದಿನ ತೋಳುದ್ದ ಬ್ಲೌಸ್ ಧರಿಸಿ ಹೂ ಮುಡಿದು ಕಾಣಿಸಿಕೊಂಡರೆ....ಕಾರ್ಯಕ್ರಮಕ್ಕೆ ಸ್ಲೀವ್ಲೆಸ್ ಲೂಸ್ ಹೇರ್ ಹಾಟ್ ಲುಕ್ ಆಯ್ಕೆ ಮಾಡಿಕೊಳ್ಳುತ್ತಾರೆ.
ಶ್ವೇತಾ ಶ್ರೀವಾತ್ಸವ್ ಮಾತ್ರವಲ್ಲ ಪುತ್ರಿ ಅಶ್ಮಿತಾ ಕೂಡ ಸೋಷಿಯಲ್ ಮೀಡಿಯಾ ಸ್ಟಾರ್. ತಾಯಿ ಜೊತೆ ಆಗಾಗ ಫೋಟೋಶೂಟ್ ಮತ್ತು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಈ ವಯಸ್ಸಿನಲ್ಲೂ ನೀವು ಇಷ್ಟು ಹಾಟ್ ಆಗಿರುವುದು ಯಾಕೆ? ನನ್ನ ಹೆಂಡ್ತಿಗೂ ಈ ರೀತಿ ಸ್ಟೈಲ್ ಮಾಡಲು ಹೇಳಿ. ನಿಮ್ಮನ್ನು ಒಮ್ಮೆ ನೋಡಿದರೆ ಬಾಲಿವುಟ್ ನಟಿ ರೀತಿ ಕಾಣಿಸುತ್ತೀರಾ ಎಂದು ಪಡ್ಡೆ ಹುಡುಗರು ಮಾಡಿರುವ ಕಾಮೆಂಟ್ ವೈರಲ್ ಆಗಿದೆ.