ಮಕ್ಕಳಿಗೆ ಲೈಂಗಿಕ ಶಿಕ್ಷಣ : ಮಕ್ಕಳು ಏನು ಮತ್ತು ಯಾವಾಗ ಕಲಿಯಬೇಕು?

First Published May 26, 2021, 2:40 PM IST

ಲೈಂಗಿಕ ಶಿಕ್ಷಣ ಎಲ್ಲರಿಗೂ ಮುಖ್ಯ ಎಂಬ ಅಂಶದ ಬಗ್ಗೆ ಯಾವುದೇ ಸಂದೇಹವಿಲ್ಲ. ಅಲ್ಲದೆ, ಎಲ್ಲರಿಗಿಂತ ಹೆಚ್ಚಾಗಿ, ಮಕ್ಕಳು ಮತ್ತು ಯುವ ವಯಸ್ಕರಿಗೆ ಅವರ ಜೀವನದಲ್ಲಿ ಸರಿಯಾದ ಸಮಯದಲ್ಲಿ ಲೈಂಗಿಕ ಶಿಕ್ಷಣವನ್ನು ನೀಡಬೇಕು. ಏಕೆಂದರೆ ಒಂದು ನಿರ್ದಿಷ್ಟ ವಯಸ್ಸಿನಲ್ಲಿ, ಮಕ್ಕಳು ತಮ್ಮ ದೇಹದ ಬದಲಾವಣೆಗಳು ಸೇರಿದಂತೆ ತಮ್ಮ ಸುತ್ತಲೂ ನಡೆಯುತ್ತಿರುವ ಎಲ್ಲದರ ಬಗ್ಗೆ ಹೆಚ್ಚು ಕುತೂಹಲವಿರುತ್ತದೆ.