ಸಖತ್ ಹಾಟ್ ಮಗಾ.. ಪ್ಯಾರಿಸ್ ಒಲಿಂಪಿಕ್ಸ್ 'ಮೇನಕೆ..' ಸ್ವಿಮ್ಮರ್ ಲುವಾನಾ ಅಲಾನ್ಸೋ ಕ್ರೀಡಾಗ್ರಾಮದಿಂದ ಔಟ್!
ಪ್ರಚೋದನಕಾರಿ ಉಡುಪುಗಳನ್ನು ಧರಿಸುವ ಮೂಲಕ ಪೆರಾಗ್ವೆ ಆಟಗಾರರಿಗೆ ಕಸಿವಿಸಿ ಮಾಡುತ್ತಿದ್ದ ಸ್ವಿಮ್ಮರ್ಅನ್ನು ಪ್ಯಾರಿಸ್ ಕ್ರೀಡಾಗ್ರಾಮದಿಂದ ಹೊರಹಾಕಲಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪೆರಾಗ್ವೆ ಪರವಾಗಿ ಸ್ಪರ್ಧೆ ಮಾಡಬೇಕಿದ್ದ ಸ್ವಿಮ್ಮರ್ ಲುವಾನಾ ಅಲಾನ್ಸೋರನ್ನು ಕ್ರೀಡಾಗ್ರಾಮದಿಂದ ಹೊರಹಾಕಲಾಗಿದೆ.
ಲುವಾನಾ ಅಲಾನ್ಸೋರನ್ನು ಕ್ರೀಡಾಗ್ರಾಮದಿಂದ ಹೊರಹಾಕಲು ಕಾರಣ ಆಕೆಯ ಅತಿಯಾದ ಮಾದಕತೆ ಹಾಗೂ ಪ್ರಚೋದನಕಾರಿ ಡ್ರೆಸ್ಗಳು ಎಂದರೆ ಅಚ್ಚರಿಯಾಗದೇ ಇರದು.
ಪೆರಾಗ್ವೆ ಒಲಿಂಪಿಕ್ ಚೀಫ್ ಹಾಗೂ ಮಾಜಿ ಟೆನಿಸ್ ಆಟಗಾರ್ತಿ ಲಾರಿಸ್ಸಾ ಶೀರರ್ ಈ ಬಗ್ಗೆ ಪ್ರಕಟಣೆ ನೀಡಿದ್ದಾರೆ. ಲುವಾನಾ ಅಲಾನ್ಸೋ ಉಪಸ್ಥಿತಿಯಿಂದ ಪೆರಾಗ್ವೆ ಟೀಮ್ನಲ್ಲಿಯೇ ಕಸಿವಿಸಿ ವಾತಾವರಣ ನಿರ್ಮಾಣವಾಗುತ್ತಿದೆ ಎಂದಿದ್ದಾರೆ.
ಕ್ರೀಡಾಗ್ರಾಮದ ಒಳಗಡೆ ಹಾಗೂ ಪರಾಗ್ವೆ ತಂಡದ ಸಹ ಆಟಗಾರರ ಜೊತೆ ಇರುವ ವೇಳೆ ಲುವಾನಾ ಅಲಾನ್ಸೋ ತುಂಬಾ ಹಾಟ್ ಆದ ಡ್ರೆಸ್ಗಳನ್ನು ಧರಿಸುತ್ತಿದ್ದರು.
ಇದು ದೇಶದ ಸಹ ಆಟಗಾರರಿಗೆ ಮಾತ್ರವಲ್ಲ, ಕ್ರೀಡಾಗ್ರಾಮದಲ್ಲಿರುವ ಇತರ ಅಥ್ಲೀಟ್ಗಳ ಏಕಾಗ್ರತೆಗೆ ಭಂಗವಾಗುತ್ತಿತ್ತು ಎನ್ನುವ ಕಾರಣ ನೀಡಿ ಆಕೆಯನ್ನು ದೇಶಕ್ಕೆ ವಾಪಾಸ್ ಕರೆಸಿಕೊಳ್ಳಲಾಗಿದೆ.
ಪರಾಗ್ವೆ ಒಲಿಂಪಿಕ್ ಸಮಿತಿ ನಿರ್ಧಾರಕ್ಕೂ ಮುನ್ನವೇ ಲುವಾನಾ ಅಲಾನ್ಸೋ ತಮ್ಮ ಸ್ಪರ್ಧೆಯನ್ನು ಮುಗಿಸಿದ್ದರು.100 ಮೀಟರ್ ಬಟರ್ಫ್ಲೈ ವಿಭಾಗದಲ್ಲಿ ಆಕೆ ಸೆಮಿಫೈನಲ್ಗೇರಲು ಕೂಡ ಸಾಧ್ಯವಾಗಿರಲಿಲ್ಲ.
ತನ್ನ ಸ್ಪರ್ಧೆ ಮುಗಿಸಿದ್ದರೂ ಆಕೆ ಪ್ಯಾರಿಸ್ನಲ್ಲಿಯೇ ಉಳಿದುಕೊಂಡಿದ್ದಳು. ಕ್ರೀಡಾಗ್ರಾಮದಲ್ಲಿ ಆಕೆಯ ಉಪಸ್ಥಿತಿ ತಂಡದ ಸಹ ಆಟಗಾರರಿಗೆ ಕಸಿವಿಸಿಗೆ ಕಾರಣವಾಗಿತ್ತು.
20 ವರ್ಷದ ಲುವಾನಾ ಅಲಾನ್ಸೋ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನಿರಾಸೆ ಕಂಡ ಬೆನ್ನಲ್ಲಿಯೇ ಸ್ವಿಮ್ಮಿಂಗ್ ಸ್ಪರ್ಧೆಗೆ ಆಕೆ ದಿಢೀರ್ ವಿದಾಯ ಪ್ರಕಟಿಸಿದ್ದಳು.
ಎದುರಾಳಿ ಸ್ಪರ್ಧಿಗಳೊಂದಿಗೆ ಅತಿಯಾಗಿ ಬೆರೆಯುವ ಮೂಲಕ ಅವರ ಏಕಾಗ್ರತೆಗೆ ಭಂಗ ತರುವಂಥ ಕೆಲಸವನ್ನು ಮಾಡುತ್ತಿದ್ದರು. ಅದಲ್ಲದೆ, ತಮ್ಮ ಒಳುಡುಪುಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ತೋರಿಸುತ್ತಿದ್ದರು ಎನ್ನಲಾಗಿದೆ.
ಅದರೊಂದಿಗೆ ಪರಾಗ್ವೆ ಒಲಿಂಪಿಕ್ ಅಧಿಕಾರಿಗಳ ಸೂಚನೆಯನ್ನು ಕೂಡ ಅವರು ತಿರಸ್ಕಾರ ಮಾಡುತ್ತಿದ್ದರು ಎಂದು ಆರೋಪ ಮಾಡಲಾಗಿದೆ.
ಒಲಿಂಪಿಕ್ ಅಧಿಕಾರಿಗಳ ಸೂಚನೆಯನ್ನು ಧಿಕ್ಕರಿಸಿ ಅವರು ಕ್ರೀಡಾಗ್ರಾಮದ ಹೊರಗೆ ಹೋಗುತ್ತಿದ್ದರು. ಪ್ಯಾರಿಸ್ನ ಡಿಸ್ನಿಲ್ಯಾಂಡ್ನಲ್ಲಿ ತಡರಾತ್ರಿಯವರೆಗೂ ಪಾರ್ಟಿ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಅಮೆರಿಕದಲ್ಲಿಯೇ ವಾಸ್ತವ್ಯದಲ್ಲಿರುವ ಅಲಾನ್ಸೋ, ಒಲಿಂಪಿಕ್ಸ್ಗೂ ಮುನ್ನ ಪ್ಯಾರಿಸ್ನಲ್ಲಿ ತಾವು ಅಮೆರಿಕವನ್ನು ಪ್ರತಿನಿಧಿಸಲು ಇಷ್ಟಪಡುವುದಾಗಿ ಹೇಳಿದ್ದರು.