ನಿಮ್ಮ ಫೋನ್ ಚಾರ್ಜಿಂಗ್ ಅಭ್ಯಾಸ - ಸ್ಮಾರ್ಟ್‌ಫೋನ್‌ಗೆ ಹಾನಿಯಾಗುತ್ತಿದಿಯಾ ತಿಳಿದುಕೊಳ್ಳಿ
ಸ್ಮಾರ್ಟ್‌ಫೋನ್ ಹೊಸದರಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಫೋನ್ ಚೆನ್ನಾಗಿ ಕೆಲಸ ಮಾಡುತ್ತದೆ. ಕ್ರಮೇಣ ಸ್ಟೀಡ್ ಕಡಿಮೆಯಾಗುವುದು, ಬ್ಯಾಟರಿ ಚಾರ್ಜ್ ಬೇಗ ಖಾಲಿಯಾಗುವ ಸಮಸ್ಯೆಗಳನ್ನು ಎದುರಿಸುತ್ತೇವೆ. ಇದಕ್ಕೆ ತಪ್ಪಾಗಿ ಫೋನ್ ಚಾರ್ಜ್ ಮಾಡುವುದು ಸಹ ಕಾರಣವಾಗಿರಬಹುದು. ನಿಮ್ಮ ಈ ಅಭ್ಯಾಸದಿಂದ ಸ್ಮಾರ್ಟ್‌ಫೋನ್‌ಗೆ ಹಾನಿಯಾಗುತ್ತಿದಿಯಾ ತಿಳಿದುಕೊಳ್ಳಿ.
ಫೋನ್ ಅನ್ನು ರಾತ್ರಿಯಿಡೀ, ಚಾರ್ಜ್ ಮಾಡಲು ಬಿಡಬೇಡಿ. ಕೆಲವು ಫೋನ್‌ಗಳು ಹೀಟ್ ಆಗುತ್ತವೆ.
ಕೆಲವು ಫೋನ್‌ಗಳು ಚಾರ್ಜ್ ಪೂರ್ಣಗೊಂಡಾಗ ಆಟೋಮ್ಯಾಟಿಕ್ ಆಗಿ ಚಾರ್ಜಿಂಗ್ ಆಫ್ ಆಗುವ ವ್ಯವಸ್ಥೆಯನ್ನು ಹೊಂದಿಲ್ಲದಿರಬಹುದು.
ಚಾರ್ಜ್ ಮಾಡಲು ಬ್ಯಾಟರಿ ಸಂಪೂರ್ಣವಾಗಿ ಡ್ರೈನ್ ಆಗುವವರೆಗೆ ಕಾಯಬೇಡಿ. ಚಾರ್ಜ್ ಮಾಡುವ ಮೊದಲು ನಿಮ್ಮ ಬ್ಯಾಟರಿ ಸಂಪೂರ್ಣವಾಗಿ ಬರಿದಾಗಲು ನಿರಂತರವಾಗಿ ಕಾಯುತ್ತಿದ್ದರೆ, ಅದು ಬ್ಯಾಟರಿ ಚಾರ್ಜ್ ಸೈಕಲ್ ಮೇಲೆ ಪರಿಣಾಮ ಬೀರುತ್ತದೆ.
ಶೇಕಡಾ 50ಕ್ಕಿಂತ ಕಡಿಮೆ ಇರುವಾಗಲೇ, ನಿಮ್ಮ ಸ್ಮಾರ್ಟ್‌ಫೋನ್‌ಗೆ ಚಾರ್ಜ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ.
ಬೇರೆ ಚಾರ್ಜರ್‌ಗಳನ್ನು ಬಳಸಬಾರದು. ಇದನ್ನು ಖಂಡಿತವಾಗಿಯೂ ಮಾರ್ಕೆಟಿಂಗ್ ಗಿಮಿಕ್ ಎನ್ನಬಹುದು.
ಫೋನ್ ರೀಚಾರ್ಜ್ ಮಾಡಲು ಕಂಪನಿಯ ಚಾರ್ಜರ್‌ಗಳನ್ನು ಬಳಸಲು ಶಿಫಾರಸು ಮಾಡಲಾಗಿದೆ ಎಂದು ಫೋನ್ ಕಂಪನಿಗಳು ಹೇಳುತ್ತವೆ. ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ತಮ್ಮದೇ ಆದ ಚಾರ್ಜರ್‌ನೊಂದಿಗೆ ಬರುತ್ತವೆ ಮತ್ತು ಕೆಲವು ಅವುಗಳನ್ನು ಹೈ-ಸ್ಪೀಡ್ ಚಾರ್ಜರ್‌ಗಳಾಗಿ ಜಾಹೀರಾತು ಮಾಡುತ್ತವೆ.
ನಿಮ್ಮ ಸ್ಮಾರ್ಟ್‌ಫೋನ್‌ಗೆ ಹೊಂದಿಕೆಯಾಗುವ ಯಾವುದೇ ಚಾರ್ಜರ್ ಪಿನ್‌ನೊಂದಿಗೆ ನೀವು ಚಾರ್ಜ್ ಮಾಡಬಹುದು.
ಹೆಚ್ಚು ಮುಖ್ಯವಾದುದು ನಿಮ್ಮ ಫೋನ್‌ಗಳನ್ನು ಅಗ್ಗದ ಅಥವಾ ಕಡಿಮೆ ದರ್ಜೆಯ ಸಾಧನಗಳೊಂದಿಗೆ ಚಾರ್ಜ್ ಮಾಡುಬಾರದು. ವೈರಿಂಗ್ ದೋಷ ಫೋನ್‌ನಲ್ಲಿನ ಸರ್ಕ್ಯೂಟ್‌ಗಳನ್ನು ಹಾಳು ಮಾಡುತ್ತವೆ.
ಚಾರ್ಜ್ ಮಾಡುವಾಗ ಫೋನ್ ಅನ್ನು ಸ್ವಿಚ್ ಆಫ್ ಮಾಡುವುದು ಅತ್ಯಗತ್ಯವಿಲ್ಲ, ಚಾರ್ಜ್ ಸ್ಲೀಪ ಅಥವಾ ಏರೋಪ್ಲೆನ್ ಮೋಡ್‌ನಲ್ಲಿ ಇಡುವುದನ್ನು ಪರಿಗಣಿಸಬಹುದು. ಫೋನ್‌ನಿಂದ ದೂರವಿರುವುದರಿಂದ ಕಣ್ಣಿಗೆ ರೆಸ್ಟ್ ಸಿಗುತ್ತದೆ.
ಫೋನ್ ಚಾರ್ಜ್ ಆಗುತ್ತಿರುವಾಗ ವೈ-ಫೈ ಅಥವಾ ಮೊಬೈಲ್ ಇಂಟರ್ನೆಟ್ ಅನ್ನು ಯೂಸ್ ಮಾಡುವುದು ಬಹಳಷ್ಟು ಬ್ಯಾಟರಿ ಚಾರ್ಜ್ ವೇಸ್ಟ್ ಆಗಲು ಕಾರಣವಾಗಬಹುದು.
ಯಾವುದೇ ಗ್ರಾಫಿಕ್-ತೀವ್ರ ಚಟುವಟಿಕೆಯಿಂದ (ಗೇಮಿಂಗ್, ಯೂಟ್ಯೂಬ್ ವೀಡಿಯೊಗಳು ಇತ್ಯಾದಿ) ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಅದೇ ಡಾಕ್ಯುಮೆಂಟ್ ಮೇಲ್ ಇತ್ಯಾದಿಗಳ ಬಳಕೆಗೆ ಹೆಚ್ಚು ಬ್ಯಾಟರಿ ಖರ್ಚಾಗುವುದಿಲ್ಲ.