ಕೆಲ ಜನರು ಬಾತ್‌ರೂಮ್‌ನಲ್ಲೇ ಹೆಚ್ಚಿನ ಸಮಯ ಕಳೆಯೋದೇಕೆ? ಹೊಸ ಅಧ್ಯಯನ ವರದಿ ಹೇಳಿದ್ದಿಷ್ಟು
ಕೆಲ ಜನರು ಬಾತ್‌ರೂಮ್‌ಗೆ ಹೊಕ್ಕರೆ ಬರೋದೇ ಇಲ್ಲ. ಬಾತ್‌ರೂಮ್‌ನಲ್ಲಿ ನಿಂತು ಅದೇನ್ ಮಾಡ್ತಾರೋ ಅಂತಾ ಹೇಳೋದು ಸಾಮಾನ್ಯವಾಗಿ ಹೋಗಿದೆ. ಇದನ್ನು ಕಾರಣವೇನು ಅನ್ನೋದರ ಬಗ್ಗೆ ಹೊಸ ಅಧ್ಯಯನ ಈ ಮಾತನ್ನು ಹೇಳಿದೆ..
ಸ್ನಾನ ಮಾಡೋದು, ಬಟ್ಟೆ ಒಗೆಯೋದು ಹೀಗೆ ಬೇಸಿಕ್ ಕೆಲಸಗಳಿಗೆ ನಾವು ಬಾತ್ರೂಮ್ ಉಪಯೋಗಿಸ್ತೀವಿ. ಆದ್ರೆ ಇವಾಗಿನ ಕಾಲದಲ್ಲಿ ಬಾತ್‌ರೂಮ್ ತಮ್ಮ ಸ್ವರ್ಗ ಅಂತ ನೋಡೋರು ಇದ್ದಾರೆ. ಇವರು ಬಾಥ್‌ರೂಮ್‌ನಲ್ಲೇ ಜಾಸ್ತಿ ಹೊತ್ತು ಕಳೆಯೋದು. ಲೈಫಲ್ಲಿ ಏನಾದ್ರು ಟೆನ್ಷನ್ ಇದ್ರೆ, ಇಲ್ಲಾ ಸ್ವಲ್ಪ ಟೈಮ್ ಸಿಕ್ಕಿದ್ರೆ ಸಾಕು ಬಾತ್‌ರೂಮ್‌ನಲ್ಲೇ ಹೋಗಿ ಕೂತ್ಕೊಳ್ತಾರೆ. ಇತ್ತೀಚಿನ ವರ್ಷ
ಡೈಲಿ ಸ್ಕಿನ್ ಕೇರ್ ಮಾಡೋದಷ್ಟೇ ಅಲ್ಲ, ಏನಾದ್ರು ಪ್ರಾಬ್ಲಮ್ ಇದ್ರೆ ಸಿಂಗಲ್ ಆಗಿ ಹೋಗಿ ಅಳೋದು, ಹಾಡು ಹೇಳೋದು ಹೀಗೆ ಎಲ್ಲಾ ಕೆಲಸಾನೂ ಬಾತ್ರೂಮ್ನಲ್ಲೇ ಮಾಡ್ತಾರೆ. ಬೇರೆಲ್ಲೂ ಅಲ್ಲ, ಬಾತ್ರೂಮ್ನಲ್ಲಿ ನೀವು ನೀವಾಗೇ ಇರಬಹುದು. ಯಾರಿಗೂ ಏನೂ ಮಾಡೋ ಅವಶ್ಯಕತೆ ಇಲ್ಲ.
ಆದ್ರೆ ಜನ ಯಾಕೆ ಬಾತ್ರೂಮ್ನಲ್ಲಿ ಜಾಸ್ತಿ ಹೊತ್ತು ಇರ್ತಾರೆ ಅಂತ ಒಂದು ಅಧ್ಯಯನ ಹೊರಬಂದಿದೆ. ಅದ್ರಲ್ಲಿ ಬಾತ್ರೂಮ್ನಲ್ಲಿ ಜಾಸ್ತಿ ಹೊತ್ತು ಇರೋರು ಏನು ಹೇಳಿದ್ದಾರೆ ಅಂತ ನೋಡೋಣ.
ವಿಲೆರಾಯ್ & ಬೋಚ್ ಅನ್ನೋ ಕಂಪನಿ ಈ ಸ್ಟಡಿ ಮಾಡಿದೆ. 2000 ಜನ ಇದ್ರಲ್ಲಿ ಭಾಗವಹಿಸಿದ್ದರು. 43% ಜನ ಹೇಳಿದ್ದೇನಂದ್ರೆ, ಸ್ವಲ್ಪ ಸುಖ, ಶಾಂತಿ ಸಿಗುತ್ತೆ ಅಂತ ಬಾತ್ರೂಮ್ನಲ್ಲಿ ಜಾಸ್ತಿ ಹೊತ್ತು ಇರ್ತೀವಿ ಅಂತ. ಇವ್ರು ವಾರಕ್ಕೆ ಸರಾಸರಿ 1 ಗಂಟೆ 54 ನಿಮಿಷ ಅಥವಾ ತಿಂಗಳಿಗೆ ಒಂದು ದಿನ ಕೆಲಸದ ಸಮಯವನ್ನು ಬಾತ್ರೂಮ್ನಲ್ಲಿ ಕಳೆಯುತ್ತಾರೆ.
ಎಲ್ಲಾ ವಯಸ್ಸಿನ ಹುಡುಗ್ರೂ ಹುಡುಗಿಯರು ಜಾಸ್ತಿ ಹೊತ್ತು ಬಾತ್ರೂಮ್ನಲ್ಲಿ ಇರ್ತಾರೆ. ಹುಡುಗ್ರು ವಾರಕ್ಕೆ ಸರಾಸರಿ 2 ಗಂಟೆ ಅಥವಾ ದಿನಕ್ಕೆ 20 ನಿಮಿಷ ಬಾತ್ರೂಮ್ನಲ್ಲಿ ಇರ್ತಾರೆ. ಹುಡುಗೀರು ದಿನಕ್ಕೆ 15 ನಿಮಿಷಕ್ಕಿಂತ ಹೆಚ್ಚು ಅಂದ್ರೆ ವಾರಕ್ಕೆ 1 ಗಂಟೆ 54 ನಿಮಿಷ ಬಾತ್ರೂಮ್ನಲ್ಲಿ ಇರ್ತಾರೆ.
ಟೆನ್ಷನ್ ಕಡಿಮೆ ಮಾಡ್ಕೊಳ್ಳೋಕೆ ಬಾತ್ರೂಮ್ನಲ್ಲಿ ಜಾಸ್ತಿ ಹೊತ್ತು ಇರೋದ್ರಿಂದ ಅವ್ರ ಮನಸ್ಸಿಗೆ ಒಳ್ಳೇದಾಗುತ್ತೆ ಅಂತಾರೆ. ಆದ್ರೆ ಕೆಲವರಿಗೆ ಟೆನ್ಷನ್ ಕಡಿಮೆ ಆಗುತ್ತೆ ಅಂತ ಗೊತ್ತಿಲ್ಲದೇನೆ ಬಾತ್ರೂಮ್ನಲ್ಲಿ ಜಾಸ್ತಿ ಹೊತ್ತು ಇರ್ತಾರೆ.
ಬ್ರಿಟಿಷ್ ಅಸೋಸಿಯೇಷನ್ ಫಾರ್ ಕೌನ್ಸಿಲಿಂಗ್ ಮತ್ತು ಸೈಕೋಥೆರಪಿ ಮೆಂಬರ್ ಜಾರ್ಜಿನಾ ಸ್ಟರ್ಮರ್ ಹೇಳೋದೇನಂದ್ರೆ, ಬಾತ್ರೂಮ್ ಎಲ್ಲದರಿಂದ ದೂರ ಇರೋ ಜಾಗ ಅಂತ ಜನ ಭಾವಿಸ್ತಾರೆ. ಲೈಫ್ ತುಂಬಾ ಸ್ಪೀಡ್ ಆಗಿ, ಟೆನ್ಷನ್ ಆಗಿ ಇರೋ ಈ ಕಾಲದಲ್ಲಿ ಜನಕ್ಕೆ ಸ್ವಲ್ಪ ರಿಲ್ಯಾಕ್ಸ್ ಆಗೋಕೆ ಏನಾದ್ರು ಬೇಕು. ಅದಕ್ಕೆ ಬಾತ್ರೂಮ್ ಒಳ್ಳೇ ಜಾಗ. ಬಾತ್ರೂಮ್ನಲ್ಲಿ ಸ್ವಲ್ಪ ಟೈಮ್ ಕಳೆಯೋದು ತಪ್ಪು ಅಂತ ಯಾರೂ ಅಂದುಕೊಳ್ಳಲ್ಲ ಅಂತ ಅವ್ರು ಹೇಳಿದ್ದಾರೆ.
ಇನ್ನು ಬಾತ್ರೂಮ್ನಲ್ಲಿ ಜಾಸ್ತಿ ಹೊತ್ತು ಇದ್ದ ಮೇಲೂ ರಿಲ್ಯಾಕ್ಸ್ ಸಿಗಲಿಲ್ಲ ಅಂದ್ರೆ ಸ್ವಲ್ಪ ಉಸಿರಾಟದ ವ್ಯಾಯಾಮ ಮಾಡಿ ಅಂತ ಅವ್ರು ಹೇಳಿದ್ದಾರೆ. "ನಾನು ಐದು ಬೆರಳುಗಳ ಉಸಿರಾಟದ ವ್ಯಾಯಾಮ ಮಾಡೋದನ್ನ ನಂಬ್ತೀನಿ.
ನಿಮ್ಮ ಕೈಗಳನ್ನು ಮುಂದಕ್ಕೆ ಚಾಚಿ, ಒಂದು ಕೈಯ ಬೆರಳನ್ನು ಮೇಲಕ್ಕೆ ಮತ್ತು ಇನ್ನೊಂದು ಕೈಯ ಬೆರಳನ್ನು ಕೆಳಕ್ಕೆ ಇಟ್ಟುಕೊಳ್ಳಿ. ಬೆರಳನ್ನು ಮೇಲಕ್ಕೆತ್ತುವಾಗ ಉಸಿರನ್ನು ಒಳಗೆಳೆದುಕೊಳ್ಳಿ ಮತ್ತು ಬೆರಳನ್ನು ಕೆಳಕ್ಕೆ ಇಳಿಸುವಾಗ ಉಸಿರನ್ನು ಬಿಡಿ. ಇದು ನಿಮಗೆ ರಿಲ್ಯಾಕ್ಸ್ ಆಗಲು ಸಹಾಯ ಮಾಡುತ್ತದೆ” ಎಂದು ಅವರು ಹೇಳಿದ್ದಾರೆ.