ವೀಡಿಯೋ ಫಟೀಗ್‌ ನಿಮಗೂ ಇದೆಯಾ?

First Published Jun 11, 2020, 9:41 AM IST

ಇದು ಲಾಕ್‌ಡೌನ್‌ ಕಾಲದ ಸಮಸ್ಯೆ. ವರ್ಕಿಂಗ್‌ ಫ್ರಮ್‌ ಹೋಮ್‌ ಅವಧಿಯಲ್ಲಿ ಹೆಚ್ಚೆಚ್ಚು ವಚ್ರ್ಯುವಲ್‌ ಮೀಟಿಂಗ್‌ಗಳು, ವೀಡಿಯೋ ಚಾಟ್‌ಗಳಿಂದ ಒತ್ತಡ ಹೆಚ್ಚಾಗುತ್ತೆ. ಇದರ ಜೊತೆಗೆ ಮನೆ ಕೆಲಸ, ಮಕ್ಕಳ ಕಿರಿಕಿರಿಯೂ ಸೇರಿದರೆ ತಲೆ ಚಿತ್ರಾನ್ನ. ಜೊತೆಗೆ ನಾವು ಬಳಸುವ ಗ್ಯಾಜೆಟ್‌ಗಳಲ್ಲಿನ ನೀಲ ಕಿರಣಗಳು ಮಿದುಳಿನಲ್ಲಿರುವ ನಿದ್ರೆಗೆ ಕಾರಣವಾಗುವ ಭಾಗಕ್ಕೇ ನೇರವಾಗಿ ಹಾನಿ ಮಾಡುತ್ತದೆ. ಇದರಿಂದ ನಿದ್ರಾಹೀನತೆ ಬರುತ್ತೆ. ಈ ಎಲ್ಲ ಕಾರಣಕ್ಕೆ ಕಣ್ಣು, ಮಿದುಳಿಗೆ ಆಗುವ ಬಳಲಿಕೆಯ ಪರಿಣಾಮ ‘ವೀಡಿಯೋ ಫಟೀಗ್‌’.

ಒಂದಿಷ್ಟುಟ್ರಿಕ್‌ಗಳ ಮೂಲಕ ಇದನ್ನು ನಿಯಂತ್ರಿಸಬಹುದು.