ಇಲಿಗಳನ್ನು ಮನೆಯಿಂದ ಗೋಧಿ ಹಿಟ್ಟನ್ನು ಬಳಸಿ ಓಡಿಸಿ, ಈ ಟಿಪ್ಸ್ ಪಕ್ಕಾ ವರ್ಕ್ ಆಗುತ್ತೆ
ಮನೆಯಲ್ಲಿ ಇಲಿಗಳಿದ್ರೆ ಮನೆಯೆಲ್ಲಾ ಅಸ್ತವ್ಯಸ್ತವಾಗಿರುತ್ತೆ. ಅವು ಮನೆಯನ್ನು ಕೊಳಕಾಗಿಸುವುದಲ್ಲದೆ, ನಮ್ಮನ್ನು ರೋಗಗಳಿಗೆ ತುತ್ತಾಗುವಂತೆ ಮಾಡುತ್ತವೆ. ಆದರೆ ಒಂದು ಹಿಟ್ಟಿನ ಉಂಡೆಯಿಂದ ಮನೆಯಲ್ಲಿ ಒಂದು ಇಲಿ ಕೂಡ ಉಳಿಯುವುದಿಲ್ಲ.
ಇಲಿಗಳು
ಮನೆಯಲ್ಲಿ ಬೇರೆಲ್ಲಾ, ಇಲಿಗಳಿದ್ರೆ ಚಿರಾಕು ಹುಟ್ಟುತ್ತೆ. ಯಾಕಂದ್ರೆ ಅವು ಮನೆಯನ್ನ ಕೊಳಕಾಗಿಸುತ್ತವೆ. ಎಲ್ಲೆಂದರಲ್ಲಿ ಓಡಾಡುತ್ತವೆ. ನಮ್ಮನ್ನ ರೋಗಗಳಿಗೆ ತುತ್ತಾಗುವಂತೆ ಮಾಡುತ್ತವೆ. ಮುಖ್ಯವಾಗಿ ಇಲಿಗಳು ಮನೆಯಲ್ಲಿರೋ ಬಟ್ಟೆ, ಪೇಪರ್‌ಗಳನ್ನ ಕಡಿದು ಹಾಳು ಮಾಡುತ್ತವೆ. ಆದ್ರೆ ಇಲಿಗಳನ್ನ ಹಿಡಿಯೋದು, ಅವುಗಳನ್ನ ಮನೆಯಿಂದ ಓಡಿಸೋದು ಅಷ್ಟು ಸುಲಭದ ಕೆಲಸ ಅಲ್ಲ. ತುಂಬಾ ಜನ ಇಲಿ ಬೋನು ಕೂಡ ಇಡ್ತಾರೆ. ಆದ್ರೆ ಅವು ಮಾತ್ರ ಸಿಗೋದಿಲ್ಲ.
ಅದೇ ರೀತಿ ಮಾರ್ಕೆಟ್‌ನಲ್ಲಿ ಸಿಗೋದ್ರಿಂದ ಇಲಿಗಳನ್ನ ಮನೆಯಿಂದ ಓಡಿಸೋಕೆ ಪ್ರಯತ್ನಿಸ್ತಾರೆ. ಮದ್ದುಗಳನ್ನ ಉಪಯೋಗಿಸ್ತಾರೆ. ಆದ್ರೂ ಮನೆಯಲ್ಲಿರೋ ಇಲಿಗಳು ಮಾತ್ರ ಎಲ್ಲಿಗೂ ಹೋಗಲ್ಲ. ಆದ್ರೆ ಒಂದು ಸಣ್ಣ ಹಿಟ್ಟಿನ ಉಂಡೆಯಿಂದ ಇಲಿಗಳು ಓಡಿಹೋಗುವಂತೆ ಮಾಡಬಹುದು. ಅದ್ಯಾವ ರೀತಿ ಅಂತ ಈಗ ತಿಳಿದುಕೊಳ್ಳೋಣ ಬನ್ನಿ.
ಗೋಧಿ ಹಿಟ್ಟಿನಿಂದ ಇಲಿಗಳು ಪರಾರಿ..
ಮನೆಯಿಂದ ಇಲಿಗಳನ್ನ ಓಡಿಸೋಕೆ ಇನ್ಮೇಲೆ ನೀವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಒಂದು ಸಣ್ಣ ಗೋಧಿ ಹಿಟ್ಟಿನ ಉಂಡೆ ಇದ್ರೆ ಸಾಕು. ಹೌದು ಗೋಧಿ ಹಿಟ್ಟಿನ ಉಂಡೆಯಿಂದ ಮನೆಯಲ್ಲಿ ಒಂದು ಇಲಿ ಕೂಡ ಉಳಿಯದಂತೆ ಮಾಡಬಹುದು. ಇದಕ್ಕೆ ಗೋಧಿ ಹಿಟ್ಟನ್ನ ಕಲಸಿ ಇಟ್ಕೊಳ್ಳಿ. ಆಮೇಲೆ ಬಿರಿಯಾನಿ ಎಲೆಗಳು, ಟೀ ಎಲೆಗಳು, ಬೇಕಿಂಗ್ ಸೋಡಾ, ಡಿಟರ್ಜೆಂಟ್ ಪೌಡರ್‌ನ್ನ ಪ್ರತ್ಯೇಕವಾಗಿ ನುಣ್ಣಗೆ ಪುಡಿ ಮಾಡಿ.
ಈಗ ಗೋಧಿ ಹಿಟ್ಟನ್ನ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಅದರ ಮಧ್ಯದಲ್ಲಿ ತಯಾರಿಸಿಕೊಂಡ ಪುಡಿಯನ್ನ ಹಾಕಿ ಉಂಡೆಗಳನ್ನ ಮಾಡಿ. ಇದೇ ರೀತಿ ಸಾಧ್ಯವಾದಷ್ಟು ಉಂಡೆಗಳನ್ನ ಮಾಡಿ. ಇವುಗಳನ್ನ ಇಲಿಗಳು ಹೆಚ್ಚಾಗಿ ಓಡಾಡುವ ಮೂಲೆಗಳಲ್ಲಿ ಇಡಿ. ಇವುಗಳನ್ನ ತಿಂದ ಇಲಿಗಳು ಮನೆಯಲ್ಲಿ ಒಂದೂ ಉಳಿಯುವುದಿಲ್ಲ. ಈ ಟ್ರಿಕ್ ಮನೆಯಲ್ಲಿ ಇಲಿಗಳನ್ನ ಓಡಿಸೋದ್ರಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ.
ಇವುಗಳನ್ನ ಹಿಟ್ಟಿನ ಉಂಡೆಗಳಲ್ಲಿ ಮಿಕ್ಸ್ ಮಾಡಬಹುದು
ಮನೆಯಿಂದ ಇಲಿಗಳನ್ನ ಓಡಿಸೋಕೆ ನೀವು ಗೋಧಿ ಹಿಟ್ಟಿನ ಉಂಡೆಗಳಿಗೆ ಹೊಗೆಸೊಪ್ಪು, ಒಣ ಮೆಣಸಿನಕಾಯಿಗಳು, ದೇಸಿ ತುಪ್ಪವನ್ನೂ ಸೇರಿಸಬಹುದು. ಇದಕ್ಕೆ ಮೊದಲು ಒಂದು ಬಟ್ಟಲಿನಲ್ಲಿ ಹೊಗೆಸೊಪ್ಪು, ಒಣಮೆಣಸಿನ ಪುಡಿ, ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಒಂದು ಹಿಟ್ಟಿನ ಉಂಡೆ ತೆಗೆದುಕೊಂಡು ಅದರ ಮಧ್ಯದಲ್ಲಿ ಈ ಮಿಶ್ರಣವನ್ನ ಇಟ್ಟು ಉಂಡೆಯನ್ನಾಗಿ ಮಾಡಿ. ಇವುಗಳನ್ನ ಮನೆಯ ಎಲ್ಲಾ ಮೂಲೆಗಳಲ್ಲಿ ಇಡಿ. ನಿಜಕ್ಕೂ ತುಪ್ಪದ ವಾಸನೆ ಇಲಿಗಳನ್ನ ತುಂಬಾ ಆಕರ್ಷಿಸುತ್ತೆ. ಇನ್ನು ಹೊಗೆಸೊಪ್ಪು ಮಾದಕ ವಸ್ತು ಆಗಿರೋದ್ರಿಂದ.. ಇವುಗಳನ್ನ ತಿಂದ ಮೇಲೆ ಅವು ಮನೆಯಿಂದ ಹೊರಟು ಹೋಗುತ್ತವೆ.
ಗೋಧಿ ಹಿಟ್ಟಿನ ಉಂಡೆಗಳಲ್ಲಿ ಸುಗಂಧ ದ್ರವ್ಯಗಳನ್ನ ಉಪಯೋಗಿಸಿದ್ರೆ ಇನ್ನೂ ಉತ್ತಮ ಫಲಿತಾಂಶಗಳನ್ನ ನೋಡಬಹುದು. ಇದಕ್ಕೆ ನೀವು ಕೆಂಪು ಮೆಣಸು, ಹೊಗೆಸೊಪ್ಪು, ಬಿರಿಯಾನಿ ಎಲೆ, ಬೆಳ್ಳುಳ್ಳಿ, ಮೆಣಸು ಅಥವಾ ಯೂಕಲಿಪ್ಟಸ್ ಎಣ್ಣೆಯನ್ನೂ ಉಪಯೋಗಿಸಬಹುದು. ಇವೆಲ್ಲವನ್ನೂ ಉಪಯೋಗಿಸಿ ಹಿಟ್ಟಿನ ಉಂಡೆಗಳನ್ನ ಅದೇ ರೀತಿ ತಯಾರಿಸಬಹುದು.
ಇಲಿಗಳು
ಇವುಗಳನ್ನ ನೆನಪಿಡಿ
ಇಲಿಗಳನ್ನ ಮನೆಯಿಂದ ಓಡಿಸೋಕೆ ನೀವು ಈ ಹಿಟ್ಟಿನ ಉಂಡೆಗಳನ್ನ ತಯಾರಿಸಿದಾಗ ಮಕ್ಕಳು, ಸಾಕುಪ್ರಾಣಿಗಳನ್ನ ಇವುಗಳಿಂದ ದೂರ ಇಡಬೇಕು. ಅದೇ ರೀತಿ ಈ ಉಂಡೆಗಳನ್ನ ಆಗಾಗ್ಗೆ ಪರಿಶೀಲಿಸ್ತಾ ಇರಬೇಕು. ಯಾಕಂದ್ರೆ ಹಿಟ್ಟು ಒಣಗಿ ಹೋದ್ರೆ ಅದನ್ನ ತೆಗೆದು ಹೊಸ ಉಂಡೆಯನ್ನ ಇಡಿ. ಯಾಕಂದ್ರೆ ಇಲಿಗಳು ಒಣ ಹಿಟ್ಟಿನ ಉಂಡೆಗಳ ಹತ್ತಿರ ಬರಲ್ಲ.