ಕಲೆಯಾದ ಬಿಳಿ ಶೂಗಳನ್ನು ಹೊಳೆಯುವಂತೆ ಮಾಡಲು ಸಿಂಪಲ್ ಟಿಪ್ಸ್
ಬಿಳಿ ಶೂ ಡೈಲಿ ವೇರ್, ಪಾರ್ಟಿ, ಔಟಿಂಗ್ ಎಂಥಾ ಸಂದರ್ಭವೇ ಇರಲಿ ಪ್ರತಿ ಉಡುಗೆಯೊಂದಿಗೆ ಸುಲಭವಾಗಿ ಹೊಂದಾಣಿಕೆಯಾಗುತ್ತದೆ. ಅಲ್ಲದೆ ಇದು ತುಂಬಾ ಕ್ಲಾಸಿಕ್ ಲುಕ್ ನೀಡುತ್ತದೆ. ಹೀಗಾಗಿಯೇ ಬಿಳಿ ಬಣ್ಣದ ಶೂಗಳನ್ನು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಆದ್ರೆ ಇದನ್ನು ಕ್ಲೀನ್ ಮಾಡೋದೆ ಎಲ್ಲರಿಗೂ ದೊಡ್ಡ ಟಾಸ್ಕ್. ಬಿಳಿ ಶೂಸ್ ಕ್ಲೀನ್ ಮಾಡಲು ಇಲ್ಲಿದೆ ಸಿಂಪಲ್ ಟಿಪ್ಸ್.

ಶೂಗಳ ಕಲೆಕ್ಷನ್ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಅದರಲ್ಲೂ ಬ್ಲ್ಯಾಕ್ ಹಾಗೂ ವೈಟ್ ಶೂಗಳನ್ನು ಖಂಡಿತವಾಗಿ ಇಟ್ಟುಕೊಂಡಿರುತ್ತಾರೆ. ಎಲ್ಲರ ಜೊತೆ ಇದನ್ನು ಸುಲಭವಾಗಿ ಮ್ಯಾಚ್ ಮಾಡಬಹುದು ಅನ್ನೋ ಕಾರಣಕ್ಕೆ ಈ ಬಣ್ಣಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಆದ್ರೆ ಕಪ್ಪು ಶೂ ಓಕೆ, ಆದರೆ ವೈಟ್ ಶೂ ಕ್ಲಾಸೀ ಮತ್ತು ನೋಡೋಕೆ ಸುಂದರವಾಗಿದ್ದರೂ ಕ್ಲೀನ್ ಮಾಡೋದು ತುಂಬಾ ಕಷ್ಟ.
ಡಿಶ್ ಸೋಪ್ ಮತ್ತು ಬಿಸಿ ನೀರಿನಿಂದ ತೊಳೆಯಿರಿ
ಬಹುತೇಕ ಎಲ್ಲಾ ರೀತಿಯ ವಸ್ತುಗಳಿಂದ ಮಾಡಿದ ಶೂಗಳನ್ನು ಸ್ವಚ್ಛಗೊಳಿಸಲು ಈ ವಿಧಾನವು ಒಳ್ಳೆಯದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೆ. ಒಂದು ಕಪ್ ಬೆಚ್ಚಗಿನ ನೀರಿನಲ್ಲಿ ಒಂದು ಟೀಚಮಚ ಪಾತ್ರೆ ತೊಳೆಯುವ ದ್ರವವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದರ ನಂತರ, ಬಟ್ಟೆ ಅಥವಾ ಟೂತ್ ಬ್ರಷ್ ಸಹಾಯದಿಂದ ಉಜ್ಜುವ ಮೂಲಕ ಶೂಗಳನ್ನು ಸ್ವಚ್ಛಗೊಳಿಸಿ. ಎಲ್ಲಾ ಕಲೆಗಳನ್ನು ತೆಗೆದುಹಾಕಿದ ನಂತರ, ಅವುಗಳನ್ನು ಶುದ್ಧ ನೀರಿನಿಂದ ತೊಳೆಯಿರಿ ಮತ್ತು ಒಣಗಲು ಶೂಗಳನ್ನು ಗಾಳಿಯಲ್ಲಿ ಇರಿಸಿ.
ಅಡಿಗೆ ಸೋಡಾ, ವಿನೇಗರ್ ಬಳಸಿ ಕ್ಲೀನ್ ಮಾಡಿ
ಬಿಳಿ ಶೂಗಳ ಬಣ್ಣವು ಕೊಳೆಯಾದ ನಂತರ ಕಪ್ಪು ಬಣ್ಣಕ್ಕೆ ತಿರುಗಿದರೆ, ಅದನ್ನು ಹೊಳಪು ಮಾಡಲು ಅಡಿಗೆ ಸೋಡಾ ಮತ್ತು ವಿನೆಗರ್ ಬಳಸಿ. ಇದಕ್ಕಾಗಿ, ಒಂದು ಚಮಚ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಬಿಳಿ ವಿನೆಗರ್ ಮತ್ತು ಅದೇ ಪ್ರಮಾಣದ ಅಡಿಗೆ ಸೋಡಾವನ್ನು ಬೆರೆಸಿ ಪೇಸ್ಟ್ ಮಾಡಿ. ನಂತರ, ಟೂತ್ ಬ್ರಷ್ ಬಳಸಿ, ಬೂಟುಗಳನ್ನು ವೃತ್ತಾಕಾರದ ಚಲನೆಯಲ್ಲಿ ಸ್ಕ್ರಬ್ ಮಾಡಿ. ಈಗ ಶೂಗಳನ್ನು ಗಾಳಿಯಲ್ಲಿ ಸ್ವಲ್ಪ ಸಮಯ ಒಣಗಲು ಬಿಡಿ. ನಂತರ ಅದನ್ನು ಶುದ್ಧ ನೀರಿನಿಂದ ತೊಳೆದು ಒಣಗಲು ಬಿಡಿ.
ಟೂತ್‌ಪೇಸ್ಟ್ ಬಳಸಿ ಶೂ ಕ್ಲೀನ್ ಮಾಡಿ
ಹಲ್ಲುಗಳಂತೆಯೇ, ಟೂತ್‌ಪೇಸ್ಟ್ ಕೂಡಾ ನಿಮ್ಮ ಬಿಳಿ ಪಾದರಕ್ಷೆಗಳನ್ನು ಹೊಳೆಯುವಂತೆ ಮಾಡುತ್ತದೆ. ಇದಕ್ಕಾಗಿ ಬಿಳಿ ಟೂತ್‌ಪೇಸ್ಟ್ ಬಳಸಿ ಪ್ರಯತ್ನಿಸಿ. ಬ್ರಷ್‌ಗೆ ಟೂತ್‌ಪೇಸ್ಟ್ ಹಾಕಿ ಶೂಗಳನ್ನು ತಿಕ್ಕಿಕೊಳ್ಳಿ. ಹತ್ತು ನಿಮಿಷ ಹಾಗೆಯೇ ಬಿಟ್ಟು ನಂತರ ನೀರು ಅಥವಾ ಒದ್ದೆಯಾದ ಬಟ್ಟೆಯಿಂದ ಸ್ವಚ್ಛಗೊಳಿಸಿ.