ಗಂಟೆಗೆ ಲಕ್ಷ ಸಂಪಾದಿಸುವಾತ ಮೊದಲು dustbinನಲ್ಲಿದ್ದ ಆಹಾರ ತಿನ್ನುತ್ತಿದ್ದ!
ಯಾರ ಅದೃಷ್ಟ ಹೇಗೆ ಇರುತ್ತೆ ಅಂತ ಯಾರಿಗೂ ಹೇಳಲಾಗುವುದಿಲ್ಲ. ಒಂದು ಕಾಲದಲ್ಲಿ ಬಿಕಾರಿಯಾಗಿದ್ದವನು ಲಕ್ಷಾಧಿಪತಿಯಾಗಬಹುದು ಹಾಗೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದವನು ಬೀದಿಗೂ ಬರಬಹುದು. ಬ್ರಿಟನ್ನ ಒಬ್ಬ ವ್ಯಕ್ತಿ ಊಟಕ್ಕೆ ಇಲ್ಲದೆ ಡಸ್ಟ್ಬಿನ್ಗಳಿದ್ದ ಆಹಾರ ಆರಿಸಿ ತಿನ್ನುತ್ತಿದ್ದ. ಆತ ಎರಡು ಗಂಟೆಗಳಲ್ಲಿ ಲಕ್ಷಾಂತರ ಸಂಪಾದಿಸುತ್ತಿದ್ದಾನೆ. ಆ ವ್ಯಕ್ತಿಯ ಕಥೆ ವೈರಲ್ ಆಗುತ್ತಿದೆ. ಈ ಮನುಷ್ಯನು ತನ್ನ ಕಠಿಣ ಪರಿಶ್ರಮದಿಂದ ಜೀವನವನ್ನೇ ಬದಲಾಯಿಸಿಕೊಂಡಿದ್ದಾನೆ. ಆತ ಮಾಡಿದ್ದೇನು?
ಇವನು ಬ್ರಿಟನ್ನ ಕಾರ್ ವಾಶ್ ಕಿಂಗ್. ಈ ವ್ಯಕ್ತಿಯು ತನ್ನ ಕಠಿಣ ಪರಿಶ್ರಮದಿಂದ ತನ್ನ ಜೀವನವನ್ನು ಹೇಗೆ ಬದಲಾಯಿಸಿದನೆಂದು ನೋಡೋಣ.
ಬ್ರಿಟನ್ನಲ್ಲಿ ಜನರು ಈತ ಬೀದಿಗಳಲ್ಲಿ ಮಲಗುವುದನ್ನು ನೋಡಿದ್ದರು. ಆದರೆ ಇಂದು ವಿಶ್ವದ ಅತಿದೊಡ್ಡ ಕಾರು ಕ್ಲೀನರ್ಗಳಲ್ಲಿ ಒಬ್ಬ. ಇವನು ಕಾರು ಕ್ಲೀನ್ ಮಾಡಲು ಚಾರ್ಜ್ ಮಾಡುವುದು 5 ಲಕ್ಷ 70 ಸಾವಿರ ರೂಪಾಯಿಗಳು.
ಹಿಂದೆ ಬೀದಿಗಳಲ್ಲಿ ರಾತ್ರಿ ಕಳೆಯುತ್ತಿದ್ದ 45 ವರ್ಷದ ಬ್ರಿಯಾನ್ ಹಂಟ್ನ ಗ್ರಾಹಕರು ಅನೇಕ ಪ್ರಸಿದ್ಧ ವ್ಯಕ್ತಿಗಳು. ಅವರಲ್ಲಿ ಪ್ರಸಿದ್ಧ ಹಾಲಿವುಡ್ ನಟರಿಂದ ಹಿಡಿದು ಉದ್ಯಮಿಗಳವರೆಗೂ ಇದ್ದಾರೆ.
ಪ್ರಸಿದ್ಧ ಕೈಗಾರಿಕೋದ್ಯಮಿ ತನ್ನ ಕಾರನ್ನು ಸ್ವಚಗೊಳಿಸಲು ಬ್ರಿಯಾನ್ನನ್ನು ಸೂಪರ್ಯಾಚ್ನಲ್ಲಿ ಪನಾಮಕ್ಕೆ ಕರೆಸಿಕೊಂಡಿದ್ದರು. ಇದರಲ್ಲೇ ತಿಳಿಯುತ್ತದೆ ಬ್ರಿಯಾನ್ನ ಕೈ ಚಳಕದ ಬಗ್ಗೆ.
ಬ್ರಿಯಾನ್ ಕೇವಲ ಕಾರ್ ಕ್ಲೀನ್ ಮಾಡುವ ಸಲುವಾಗಿ ಪ್ಯಾರಿಸ್, ಜರ್ಮನಿ, ಹಾಲೆಂಡ್ ಮತ್ತು ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಅವರ ಗ್ರಾಹಕರಲ್ಲಿ ವಿಶ್ವದ ಅನೇಕ ಸೆಲೆಬ್ರೆಟಿಗಳು ಸೇರಿದ್ದಾರೆ.
ಬ್ರಿಯಾನ್ ಕ್ಲೀನ್ ಮಾಡುವುದು ಕೇವಲ ಸೂಪರ್ ಕಾರುಗಳನಷ್ಟೇ. ಫೆರಾರಿಯಿಂದ ಬೆಂಟ್ಲೆ ಮತ್ತು ಜಾಗ್ವಾರ್ ವರೆಗೆ ದುಬಾರಿ ಕಾರುಗಳ ಕ್ಲೀನಿಂಗ್ಗೆ ಸ್ಪೆಷಲಿಸ್ಟ್ಗಳು ಅವಶ್ಯಕವಾಗಿರುವುದರಿಂದ ಬ್ರಿಯಾನ್ಗೆ ಬೇಡಿಕೆ ಹೆಚ್ಚು.
ತನ್ನ ಹಳೆಯ ಕಾಲವನ್ನು ನೆನಪಿಸಿಕೊಂಡ ಬ್ರಿಯಾನ್, ರಸ್ತೆಯಲ್ಲಿ ವಾಸಿಸುವುದು ತುಂಬಾ ಕಷ್ಟ ಎಂದು ಹೇಳಿದರು. ಅನೇಕ ಬಾರಿ ಅವರು ಹಸಿವಿನಿಂದ ಮಲಗಬೇಕಾಯಿತು.ಆದರೆ ಅವರು ತನ್ನ ಜೀವನದಲ್ಲಿ ಏನಾದರೂ ಮಾಡಲು ನಿರ್ಧರಿಸಿದರು. ಮೊದಲಿಗೆ ಅವರು ಬಕೆಟ್ ಮತ್ತು ಸ್ಪಂಜಿನಿಂದ ಕಾರನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದರು.
ಸೋಪು ಮತ್ತು ಸ್ಪಂಜು ತನ್ನ ಜೀವನವನ್ನು ಬದಲಿಸಿದೆ ಎಂದು ಹೇಳುತ್ತಾರೆ ಬ್ರಿಯಾನ್. ಅವರ ಕೆಲಸದಿಂದ ಪ್ರಭಾವಿತರಾಗಿ ಅವರಿಗೆ ಒಂದು ಗ್ಯಾರೇಜ್ನಲ್ಲಿ ಕೆಲಸ ದೊರೆಕಿತು. ನಂತರ ಫೆರಾರಿ ಗ್ಯಾರೇಜ್ನಲ್ಲಿ ಕೆಲಸ ಪ್ರಾರಂಭಿಸಿದರು. ಅಲ್ಲಿಂದ ಜೀವನ ಬದಲಾಯಿತು.
1999 ರಿಂದ ಕಾರು ತೊಳೆಯಲು ಪ್ರಾರಂಭಿಸಿದ ಬ್ರಿಯಾನ್ ಇಂದು ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಸೂಪರ್ ಕಾರುಗಳನ್ನು ತೊಳೆಯುವುದರಿಂದ ನಾನು ಶ್ರೀಮಂತರಾಗಿಲ್ಲ. ಏಕೆಂದರೆ ಅವುಗಳನ್ನು ತೊಳೆಯಲು ಬಳಸುವ ವಸ್ತುಗಳು ತುಂಬಾ ದುಬಾರಿಯಾಗಿದೆ ಎಂದು ಅವರು ಹೇಳಿದರು. ಸೂಪರ್ ಕಾರ್ ತೊಳೆಯಲು ಗಂಟೆಗಟ್ಟಲೆ ತೆಗೆದುಕೊಳ್ಳುತ್ತದೆ. ಇದರಲ್ಲಿ ವೆಹಿಕಲ್ಗಳ ಇಂಟಿರೀಯರ್ನಿಂದ ಫೋಮ್ವರೆಗಿನ ಕ್ಲೀನಿಂಗ್. ಅವುಗಳನ್ನು ಬಹಳ ಎಚ್ಚರಿಕೆಯಿಂದ ಸ್ವಚ್ಛಗೊಳಿಸಬೇಕು. ಇದು ತುಂಬಾ ಕಠಿಣ ಪರಿಶ್ರಮವನ್ನು ತೆಗೆದುಕೊಳ್ಳುತ್ತದೆ ಆದರೆ ಅವರು ತಮ್ಮ ಕೆಲಸವನ್ನು ತುಂಬಾ ಇಷ್ಟಪಡುತ್ತಾರೆ ಎಂದು ತನ್ನ ಕೆಲಸದ ಬಗ್ಗೆ ವಿವರಿಸುತ್ತಾರೆ ಬ್ರಿಯಾನ್.