ಎಕ್ಸ್‌ಪ್ರೆಶನ್ನಲ್ಲೇ 2020ರ ವರ್ಷ ಹೇಗಿತ್ತು ಹೇಳ್ತಿದಾರೆ ನೆಟ್ಟಿಗರು

First Published 8, Aug 2020, 7:57 PM

ಕೊರೋನಾ ಕಾಲಗತಿಯಿಂದ 2020 ಬಹುತೇಕರ ಪಾಲಿಗೆ ಸಾಕೋಸಾಕಪ್ಪಾ ಮಾಡಿಸಿದೆ. ಮನೆಯಿಂದ ಹೊರಹೋಗದೆ ಹೈರಾಣಾದವರು ಕೆಲವರಾದರೆ, ಆರ್ಥಿಕವಾಗಿ ಮುಗ್ಗರಿಸಿದವರು ಹಲವರು. ಟ್ರಿಪ್ ಇಲ್ಲ, ಹೊರಗೆ ತಿನ್ನುವಂತಿಲ್ಲ, ಆಡುವಂತಿಲ್ಲ, ಗೆಳೆಯರ ಭೇಟಿ ಇಲ್ಲ... ಎಲ್ಲ ವರ್ಷಗಳು ಹೇಗುತ್ತಿದ್ದವೋ ಈ ವರ್ಷ ಹಾಗಿಲ್ಲವೇ ಇಲ್ಲ. ಇಂಥ ತಲೆಬಿಸಿಗಳೇನೇ ಇರಲಿ, ಜನರ ಹಾಸ್ಯಪ್ರಜ್ಞೆ ಅವರನ್ನು ಆಗಾಗ ನಗಿಸಿ ಉಳಿಸಲು ಪ್ರಯತ್ನಿಸುತ್ತಲೇ ಇರುತ್ತದೆ. ಇದೀಗ 2020ರ ವರ್ಷ ತಮ್ಮ ಪಾಲಿಗೆ ಹೇಗಿತ್ತು ಎಂಬುದನ್ನು ತಿಂಗಳ ಪ್ರಕಾರ ಎಕ್ಸ್‌ಪ್ರೆಶನ್ ಮೂಲಕ ಹೇಳುವ ಟ್ರೆಂಡ್ ಒಂದು ಸೋಷ್ಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ. ಅಮೆರಿಕದ ನಟಿ ರೀಸ್ ವಿದರ್‌ಸ್ಪೂನ್ ಆರಂಭಿಸಿದ ಈ 2020 ಚಾಲೆಂಜ್, 2020 ಮೂಡ್ ಎಂಬ ಹ್ಯಾಶ್‌ಟ್ಯಾಗ್ ದಿನವೊಂದರಲ್ಲೇ ಹಾಲಿವುಡ್, ಬಾಲಿವುಡ್, ಸ್ಯಾಂಡಲ್‌ವುಡ್‌, ಸ್ಪೋರ್ಟ್ಸ್‌ನ ಸೆಲೆಬ್ರಿಟಿಗಳನ್ನು ಸೆಳೆದಿದೆ. ಅವರಷ್ಟೇ ಅಲ್ಲ ಹಲವು ಬ್ರ್ಯಾಂಡ್‌ಗಳು ತಮ್ಮ ಜಾಹೀರಾತಿಗಾಗಿಯೂ ಇದನ್ನು ಬಳಸಿಕೊಳ್ಳುತ್ತಿವೆ. ಜನಸಾಮಾನ್ಯರು ಕೂಡಾ ತಮ್ಮದೇ ಆದ ರೀತಿಯಲ್ಲಿ 2020ರ ತಮ್ಮ ಮೂಡನ್ನು ವ್ಯಕ್ತಪಡಿಸುತ್ತಿದ್ದಾರೆ.

ನಟನಟಿಯರು ತಮ್ಮದೇ ಅವತಾರಗಳನ್ನು ಸೃಷ್ಟಿಸಿ 2020 ತಮಗೆ ಹೇಗಿತ್ತು ಎಂಬುದನ್ನು ಹೇಳುತ್ತಿದ್ದಾರೆ.

ಮೂಡ್ ಕ್ಯಾಲೆಂಡರ್‌ಗಳು ಹೊಸ ಟ್ರೆಂಡ್ ಆಗಿ ಅದರಲ್ಲಿ ಮನುಷ್ಯರಷ್ಟೇ ಅಲ್ಲ, ನಾಯಿ, ಬೆಕ್ಕುಗಳು, ಮಕ್ಕಳನ್ನು ಬಳಸಿಯೂ 2020ನ್ನು ವ್ಯಕ್ತಪಡಿಸಲಾಗುತ್ತಿದೆ.

ಈ ಫೋಟೋಗಳು ಕೇವಲ ಒಬ್ಬರದಲ್ಲ, ಸಧ್ಯದ ಪರಿಸ್ಥಿತಿಯಲ್ಲಿ ಜಗತ್ತಿನ ಮೂಡನ್ನೇ ಪ್ರತಿಬಿಂಬಿಸುತ್ತಿವೆ.

ಎಲ್ಲರ ವರ್ಷವೂ ನಗುಮೊಗದಿಂದಲೇ ಆರಂಭವಾದರೂ, ಮಾರ್ಚ್ ನಂತರದಲ್ಲಿ ಗೊಂದಲ, ಅಳು, ಕೋಪ, ದುಃಖ, ಬೇಜಾರು... ಹೀಗೆ ವಿಧವಿಧವಾಗಿ ಎಕ್ಸ್‌ಪ್ರೆಶನ್‌ಗಳು ಬದಲಾಗಿವೆ.

ತಮಿಳು ನಟ ವಿಕ್ರಂ ಪಾಲಿನ 2020

ತಮಿಳು ನಟ ವಿಕ್ರಂ ಪಾಲಿನ 2020

ಕಾಜೋಲ್ ಕೂಡಾ 2020 ಮೂಡ್ ಚಾಲೆಂಜ್‌ನಲ್ಲಿ ಭಾಗವಹಿಸಿದ್ದಾಳೆ.

ಮಾಧುರಿ ದೀಕ್ಷಿತ್, ಪ್ರಿಯಾಂಕಾ ಚೋಪ್ರಾ ತಮ್ಮ 2020 ಅವತಾರವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡದ ನಟಿ ಮಾನಸ ಜೋಷಿ ಈ ವರ್ಷವನ್ನು ವಿವರಿಸಿದ್ದು ಹೀಗೆ..

ಪಾರ್ಲೆಜಿಯ ಮಗು ಮಾರ್ಚ್‌ನಿಂದ ಮಾಸ್ಕ್ ಧರಿಸಿ ಕೋರೋನಾ ಸ್ಥಿತಿ ಸಾರುತ್ತಿದೆ.

ಇನ್ಸ್ಟಾಗ್ರಾಂ, ಫೇಸ್ಬುಕ್, ಟ್ವಿಟ್ಟರ್‌ಗಳಲ್ಲಿ ಈ ಅವತಾರಗಳು ಸಖತ್ ಸದ್ದು ಮಾಡುತ್ತಿವೆ.

ಜಾದೂವಾಗಿ ಬಂದು ಜಗತ್ತನ್ನು ಕಾಪಾಡಬಾರದೇ ಯಾರಾದ್ರೂ...!

ಒಟ್ಟಿನಲ್ಲಿ ಒಬ್ಬೊಬ್ಬರದ್ದು ಈ ವರ್ಷ ಒಂದೊಂದು ಕಥೆ. ಯಾವುದೇ ವರ್ಗ ಬೇಧವಿಲ್ಲದೇ ಜನರು ಸಾಕಷ್ಟು ನೋವನ್ನು ಅನುಭವಿಸುತ್ತಿದ್ದಾರೆ.

loader