ನೆಲ ಫಳ ಫಳ ಹೊಳೆಯುವಂತಾಗಲು ನೆಲ ಒರೆಸುವಾಗ ಹೀಗೆ ಮಾಡಿ
ಕೆಲವರುವ ವಾರಕ್ಕೊಮ್ಮೆ ಮನೆ ಒರೆಸಿದರೆ ಮತ್ತೆ ಕೆಲವರು ದಿನಾ ಮನೆ ಒರೆಸ್ತಾರೆ. ಕೆಲವರು ಎರಡು ಅಥವಾ ಮೂರು ದಿನಕ್ಕೊಮ್ಮೆ ನೆಲ ಒರೆಸ್ತಾರೆ. ಆದರೆ ನೆಲ ಒರೆಸುವ ವೇಳೆ ಮಾಡು ಕೆಲ ತಪ್ಪುಗಳಿಂದ ನಿಮ್ಮ ಮನೆಯ ನೆಲ ಹಳೆಯದರಂತೆಯೇ ಕಾಣುತ್ತದೆ. ಒರೆಸಿದಂತೆಯೇ ಇರುವುದಿಲ್ಲ, ಹಾಗಿದ್ರೆ ನೆಲ ಒರೆಸಿದ ನಂತರ ಫಳ ಫಳ ಹೊಳೆಯುವಂತಾಗಲು ನಾವು ಇಲ್ಲಿ ಹೇಳುತ್ತಿರುವ ಕೆಲ ಟ್ರಿಕ್ಸ್‌ಗಳನ್ನು ಫಾಲೋ ಮಾಡಿ.
ಮನೆಯನ್ನು ಚಂದಗಾಣಿಸಲು ಮನೆ ಹೆಂಗಸರು ತುಂಬಾ ಪ್ರಯತ್ನ ಪಡ್ತಾರೆ. ಡೆಕೋರೇಷನ್ ಸಾಮಾನುಗಳಲ್ಲದೇ ದಿನಾಲು ಬೆಳಗ್ಗೆ, ಸಾಯಂಕಾಲ ಮನೆ ಒರೆಸಿ, ತೊಳಿಯುತ್ತಾರೆ. ಆದ್ರೆ ಕೆಲವರಿಗೆ ಮನೆ ಒರೆಸಿದ್ರೂ ಒರೆಸಿದ ಅನುಭವ ಕೊಡುವುದಿಲ್ಲ ಯಾಕೆ ಹೀಗೆ ಆಗುತ್ತೆ ಅಂತ ಹೆಣ್ಮಕ್ಕಳು ತಲೆಕೆಡಿಸಿಕೊಳ್ತಾರೆ. ಆದರೆ ಕ್ಲೀನಿಂಗ್ ಟೈಮ್‌ನಲ್ಲಿ ಮಾಡೋ ಕೆಲವು ತಪ್ಪುಗಳಿಂದ ಹೀಗಾಗುತ್ತೆ. ಹಾಗಾಗಿ ಕ್ಲೀನಿಂಗ್ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು? ನೆಲ ಹೊಸದಾಗಿ ಮಿಂಚಬೇಕಾದ್ರೆ ಏನು ಮಾಡಬೇಕು ಅಂತ ಈಗ ತಿಳ್ಕೊಳ್ಳೋಣ.
ನೆಲ ಕ್ಲೀನ್ ಮಾಡೋಕೆ ಮಾಪಿಂಗ್ ಬಗ್ಗೆ ಆಲೋಚಿಸ್ತೀವಿ. ಮಣ್ಣು ಕಂಡ್ರೆ ಒರೆಸ್ತೀವಿ. ಆದ್ರೆ ಪ್ರತಿದಿನ ಒರೆಸೋದ್ರಿಂದ ನೆಲದ ಮೆರುಗು ಕಡಿಮೆಯಾಗುತ್ತೆ ಅಂತ ಯೋಚನೆ ಮಾಡಲ್ಲ. ಕ್ಲೀನಿಂಗ್ ಮಾಡುವಾಗ ನೀರು ಬದಲಾಯಿಸೋದು ಮುಖ್ಯ. ಮಲಿನ ನೀರು ಉಪಯೋಗಿಸ್ದ್ರೆ ಧೂಳು ಹರಡುತ್ತೆ. ಆದ್ರೆ ನೆಲದ ಮಣ್ಣು ಹೋಗಲ್ಲ. ಹಾಗಾಗಿ ಮಾಪಿಂಗ್ ಮಾಡುವಾಗ ಕ್ಲೀನ್ ನೀರು ಬಳಸಿ. ಆಗ ನೆಲ ಮಿಂಚುತ್ತೆ.
ಸರಿಯಾದ ಕ್ಲೀನರ್ ಬಳಸಿ
ನೆಲ ಕ್ಲೀನ್ ಮಾಡೋಕೆ ಸರಿಯಾದ ಕ್ಲೀನಿಂಗ್ ಪ್ರಾಡಕ್ಟ್ಸ್ ಬಳಸಬೇಕು. ಯಾವುದು ಕಳಪೆ ಕ್ಲೀನಿಂಗ್ ಪ್ರಾಡಕ್ಟ್ ಬಳಿಸಿದ್ರೆ ನೆಲ ಹಾಳಾಗುತ್ತೆ. ಏಕೆಂದರೆ ಹಲವಾರು ಕ್ಲೀನಿಂಗ್ ಪ್ರಾಡಕ್ಟ್ಸ್‌ನಲ್ಲಿ ತೀವ್ರವಾದ ರಾಸಾಯನಿಕಗಳು ಇರುತ್ತೆ. ಇವು ನೆಲವನ್ನು ಹಾಳು ಮಾಡುತ್ತೆ. ಪೈಂಟ್ ಅಥವಾ ಕೆಲವು ನೆಲಹಾಸುಗಳ ಮೇಲೆ ಕಲೆ ಉಂಟು ಮಾಡುತ್ತೆ.
ಮಲಿನ ಬಟ್ಟೆ, ಉಪಕರಣಗಳನ್ನು ಬಳಸೋದು
ತುಂಬಾ ಜನ ಮಲಿನವಾದ ಹಳೇ ಬಟ್ಟೆಗಳನ್ನು ಮನೆ ಒರೆಸೋಕೆ ಬಳಸ್ತಾರೆ. ನೆಲ ಸ್ಕ್ರಬ್ಬರ್‌ಗಳು, ಮಾಪ್‌ಗಳು, ಬ್ರಷ್‌ಗಳು, ಬಟ್ಟೆಗಳನ್ನು ನೆಲ ಕ್ಲೀನಿಂಗ್‌ಗೆ ಬಳಸ್ತಾರೆ. ಆದ್ರೆ ನೆಲ ಕ್ಲೀನಿಂಗ್‌ಗೆ ಮಲಿನ ಬಟ್ಟೆಗಳನ್ನು ಬಳಸಬಾರದು. ಏಕೆಂದರೆ ಇವು ನೆಲದ ಮಣ್ಣನ್ನು ತೆಗೆಯೋ ಬದಲು ಮತ್ತಷ್ಟು ಮಣ್ಣು, ಧೂಳನ್ನು ಅಂಟಿಸುತ್ತೆ. ನೆಲಕ್ಕೆ ಅಂಟಿಕೊಂಡ ಕಲೆಗಳನ್ನು ತೆಗೆಯೋಕೆ ತುಂಬಾ ಜನ ಕ್ಲೀನಿಂಗ್ ದ್ರಾವಣಗಳನ್ನು ಬಳಸ್ತಾರೆ. ಆದ್ರೆ ಹೀಗೆ ಮಾಡಬಾರದು. ಏಕೆಂದರೆ ಕ್ಲೀನಿಂಗ್ ಪ್ರಾಡಕ್ಟ್‌ನಲ್ಲಿ ಹಾನಿಕಾರಕ ರಾಸಾಯನಿಕಗಳು ಇರುತ್ತೆ. ಇವು ನಿಮ್ಮ ನೆಲವನ್ನು ಹಾಳು ಮಾಡುತ್ತೆ. ಮೆರುಗನ್ನು ಕಡಿಮೆ ಮಾಡುತ್ತೆ. ಹಾಗಾಗಿ ಕ್ಲೀನರ್‌ನ ನೇರವಾಗಿ ನೆಲಕ್ಕೆ ಹಾಕೋ ಮುನ್ನ ಅದರ ಮೇಲಿನ ಸೂಚನೆಗಳನ್ನು ಓದಿ.
ನೆಲ ಕ್ಲೀನ್ ಮಾಡೋಕೆ ಇವುಗಳನ್ನೂ ಬಳಸಬಹುದು
ನೆಲ ಕ್ಲೀನ್ ಮಾಡೋಕೆ ಮದ್ಯವನ್ನೂ ಬಳಸಬಹುದು. ಆಲ್ಕೋಹಾಲ್ ಒಂದು ನೈಸರ್ಗಿಕ ಕ್ರಿಮಿನಾಶಕ. ನೆಲದ ಮೇಲಿನ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತೆ. ನೆಲಕ್ಕೆ ಅಂಟಿಕೊಂಡ ಧೂಳು, ಮಣ್ಣು, ಜಿಡ್ಡನ್ನು ತೆಗೆಯೋದ್ರಲ್ಲಿ ಪರಿಣಾಮಕಾರಿ. ಆಲ್ಕೋಹಾಲ್‌ನಿಂದ ಕೆಲವೇ ನಿಮಿಷಗಳಲ್ಲಿ ಮಣ್ಣನ್ನು ತೆಗೆಯಬಹುದು. ಈ ಕ್ಲೀನರ್ ತಯಾರಿಸೋಕೆ ಒಂದು ಬಟ್ಟಲಿನಲ್ಲಿ ಆಲ್ಕೋಹಾಲ್, ನೀರು ಮಿಕ್ಸ್ ಮಾಡಿ ಸ್ಪ್ರೇ ಬಾಟಲಿಗೆ ಹಾಕಿ. ಆಲ್ಕೋಹಾಲ್ ವಾಸನೆ ಬೇಡ ಅಂದ್ರೆ ವಿನೆಗರ್ ಅಥವಾ ಸುವಾಸನೆಯ ಎಣ್ಣೆಗಳನ್ನು ಕೂಡ ಮಿಕ್ಸ್ ಮಾಡಿ.
ವಿನೆಗರ್‌ನಿಂದ ಕ್ಲೀನಿಂಗ್
ವಿನೆಗರ್‌ನಲ್ಲಿರುವ ಅಸಿಟಿಕ್ ನೆಲದ ಮೇಲಿನ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತೆ. ನೆಲಕ್ಕೆ ಅಂಟಿಕೊಂಡ ಮಣ್ಣನ್ನು ತೆಗೆಯುತ್ತೆ. ನೆಲದ ಮೇಲಿನ ಕಲೆಗಳನ್ನು ಕ್ಲೀನ್ ಮಾಡೋಕೆ ಬಳಸಬಹುದು. ಒಂದು ಲೀಟರ್ ಬಾಟಲಿಯಲ್ಲಿ ಅರ್ಧಕ್ಕಿಂತ ಕಡಿಮೆ ವಿನೆಗರ್ ಹಾಕಿ, ನೀರು ಮಿಕ್ಸ್ ಮಾಡಿ. ಇದನ್ನು ನೆಲ ಕ್ಲೀನರ್ ಆಗಿ ಬಳಸಬಹುದು.
ಬೇಕಿಂಗ್ ಸೋಡಾ, ನಿಂಬೆರಸ
ಬೇಕಿಂಗ್ ಸೋಡಾ, ನಿಂಬೆರಸ ಬಳಸಿ ನೆಲ ಕ್ಲೀನ್ ಮಾಡಬಹುದು. ಒಂದು ಬಟ್ಟಲಿನಲ್ಲಿ ನೀರು ತಗೊಂಡು ಬೇಕಿಂಗ್ ಸೋಡಾ, ನಿಂಬೆರಸ ಮಿಕ್ಸ್ ಮಾಡಿ. ಇದನ್ನು ನೆಲ ಕ್ಲೀನರ್ ಆಗಿ ಬಳಸಬಹುದು.