Christmas Gift Ideas: ಮಕ್ಕಳಿಗಾಗಿ 5 ಬೆಸ್ಟ್ ಕ್ರಿಸ್ಮಸ್ ಗಿಫ್ಟ್ ಇಲ್ಲಿವೆ ನೋಡಿ!
ಕ್ರಿಸ್ಮಸ್ (Christmas) ಹತ್ತಿರ ಬರುತ್ತಿದೆ. ಕ್ರಿಸ್ಮಸ್ನಲ್ಲಿ ಉಡುಗೊರೆ ನೀಡುವುದು ಒಂದು ಆಚರಣೆಯಾಗಿದೆ ಈ ಕ್ರಿಸ್ಮಸ್ನಲ್ಲಿ ನಿಮ್ಮ ಮಕ್ಕಳಿಗೆ ಹೇಗೆ ಸಂತೋಷವಾಗುವಂತೆ ಮಾಡಬೇಕೆಂದು ನಿಮಗೆ ತಿಳಿದಿದೆಯೇ? ಮಕ್ಕಳನ್ನು ಖುಷಿ ಪಡಿಸಲು ಅವರಿಗಾಗಿ ಕೆಲವು ಬೆಸ್ಟ್ ಕ್ರಿಸ್ಮಸ್ ಗಿಫ್ಟ್ ಐಡಿಯಾಗಳು ಇಲ್ಲಿವೆ ಇಲ್ಲಿದೆ. ಅವರಿಗೆ ಕೆಲವು ಉಡುಗೊರೆ ಕಲ್ಪನೆಗಳನ್ನು ಪರಿಶೀಲಿಸಿ.
ಕ್ರಿಸ್ಮಸ್ ಹಬ್ಬ ಹತ್ತಿರವಾಗುತ್ತಿದೆ ಹತ್ತಿರದಲ್ಲಿದೆ. ವರ್ಷದ ಕೊನೆಯ ಈ ಹಬ್ಬವನ್ನು ವಿಶೇಷವಾಗಿ ಮಕ್ಕಳು ತುಂಬಾ ಎಂಜಾಯ್ ಮಾಡುತ್ತಾರೆ. ಮಕ್ಕಳಲ್ಲಿ ಈ ಹಬ್ಬಕ್ಕಾಗಿ ತುಂಬಾ ಉತ್ಸಾಹ ಮತ್ತು ಸಾಕಷ್ಟು ನಿರೀಕ್ಷೆಯಲ್ಲಿ ಕಾಯುತ್ತಾರೆ. ಕ್ರಿಸ್ಮಸ್ ಮುನ್ನಾ ದಿನದಂದು ಸಿಗುವ ಕ್ರಿಸ್ಮಿಸ್ ಗಿಫ್ಟ್ಗಳು ಮಕ್ಕಳಿಗೆ ಅಚ್ಚುಮೆಚ್ಚು.
1) ಪಿಗ್ಗಿ ಬ್ಯಾಂಕ್: ಪಿಗ್ಗಿ ಬ್ಯಾಂಕ್ ನಿಮ್ಮ ಮಗುವಿಗೆ ಹಣದ ಮೌಲ್ಯವನ್ನು ಮತ್ತು ಚಿಕ್ಕ ವಯಸ್ಸಿನಿಂದಲೇ ಉಳಿತಾಯದ ಪ್ರಾಮುಖ್ಯತೆಯನ್ನು ಕಲಿಸಲು ಸಹಾಯ ಮಾಡುತ್ತದೆ. ಈ ಕ್ರಿಸ್ಮಸ್ನಲ್ಲಿ ನಿಮ್ಮ ಮಗುವಿಗೆ ಪಿಗ್ಗಿ ಬ್ಯಾಂಕ್ ಅನ್ನುಉಡುಗೊರೆಯಾಗಿ ನೀಡಿ.
2) ಗಾರ್ಡನಿಂಗ್ ಕಿಟ್: ಮಕ್ಕಳಿಗೆ ತೋಟಗಾರಿಕೆ ಸೆಟ್ ಅನ್ನು ಉಡುಗೊರೆಯಾಗಿ ನೀಡಿ ಮತ್ತು ಹಸಿರಿನ ನಡುವೆ ಹೊರಾಂಗಣದಲ್ಲಿ ಸಮಯವನ್ನು ಕಳೆಯಲು ಪ್ರೋತ್ಸಾಹಿಸಿ. ಈ ಗಿಫ್ಟ್ ಮಕ್ಕಳಲ್ಲಿ ಹೊಸ ಅಭಿರುಚಿ ಮತ್ತು ಹವ್ಯಾಸವನ್ನು ಬೆಳೆಸಲು ಸಹಾಯ ಮಾಡುತ್ತದೆ
3) ಲೆಗೊ ಬಾಕ್ಸ್: ಲೆಗೊ ಬಾಕ್ಸ್ ಮಕ್ಕಳಿಗೆ ಬೆಸ್ಟ್ ಕ್ರಿಸ್ಮಸ್ ಗಿಫ್ಟ್ಗಳಲ್ಲಿ ಒಂದಾಗಿದೆ. ಇದರಿಂದ ಮಕ್ಕಳು ಸೃಜನಶೀಲರಾಗಿರಲು ಸಹಾಯವಾಗುತ್ತದೆ ಮತ್ತು ಈ ಬ್ಲಾಕ್ಗಳಿಂದ ಉತ್ತಮ ರಚನೆಗಳನ್ನು ನಿರ್ಮಿಸಲು ಕಲಿಯುತ್ತಾರೆ.
4) ಜೆಂಗಾ: ಜೆಂಗಾ ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರು ಮತ್ತು ಯುವಕರ ವರೆಗೆ ಎಲ್ಲರು ಆಡ ಬಹುದಾದ ಆಟವಾಗಿದೆ. ಇದು ಪ್ರತಿಯೊಬ್ಬರನ್ನು ತುಂಬಾ ಆಕ್ರಮಿಸಿಕೊಂಡಿರುತ್ತದೆ ಮತ್ತು ಮಕ್ಕಳಿಗಾಗಿ ಸಂವಾದಾತ್ಮಕ ಆಟವಾಗಿದೆ.
5) ಸ್ಕ್ರಾಪ್ ಬುಕ್: ನಿಮ್ಮ ಮಗು ಕ್ರಿಯೇಟಿವ್ ಆಗಿದ್ದರೆ, ಸ್ಕ್ರಾಪ್ ಬುಕ್ ಪರ್ಫೇಕ್ಟ್ ಗಿಫ್ಟ್ ಆಗಿದೆ. ಇದು ಮಕ್ಕಳನ್ನು ಕ್ರಿಯೇಟಿವ್ ಆಗಲು ಸಹಾಯ ಮಾಡುತ್ತದೆ ಮತ್ತು ಕ್ರಾಫ್ಟ್ನಲ್ಲಿ ಆಸಕ್ತಿ ಇರುವ ಮಕ್ಕಳಿಗೂ ಸಹ ಸ್ಕ್ರಾಪ್ಬುಕ್ ಉತ್ತಮ. ಅವರು ಫೋಟೋಗಳು, ಲೇಖನ ಮತ್ತು ಇತರ ವಸ್ತುಗಳನ್ನು ಅವರದೇ ಆದ ರೀತಿಯಲ್ಲಿ ಅಲಂಕರಿಸಬಹುದು.