MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Karnataka Districts
• ಫೋನಲ್ಲಿ ನೀವು ಕೇಳೋ ಕೊರೋನಾ ಜಾಗೃತಿ ಧ್ವನಿಯ ಒಡತಿಯರು ಇವರೇ ನೋಡಿ..!

ಫೋನಲ್ಲಿ ನೀವು ಕೇಳೋ ಕೊರೋನಾ ಜಾಗೃತಿ ಧ್ವನಿಯ ಒಡತಿಯರು ಇವರೇ ನೋಡಿ..!

ಇದು ಕೊರೋನಾ ಕಾಲ. ಕೊರೋನಾದ ಆರಂಭ ದಿನಗಳಿಂದಲೂ ಫೋನ್ ಮೂಲಕ ಜಾಗೃತಿಯ ಧ್ವನಿ ಸಂದೇಶ ಬಿತ್ತರವಾಗತೊಡಗಿತು. ಕೋಟ್ಯಾಂತರ ಜನ ಇದನ್ನು ಆಲಿಸಿದರು. ಈಗಂತೂ ಈ  ಸಂದೇಶ ಫೋನ್ ಕರೆಗಳ ಅವಿಭಾಜ್ಯ ಅಂಗವೇ ಆಗಿದೆ. ಆದರೆ ದೇಶದ ಎರಡು ಪ್ರಮುಖ ರಾಜ್ಯಗಳಲ್ಲಿ ಈ ಸಂದೇಶಕ್ಕೆ ಧ್ವನಿ ನೀಡಿದವರು ದಕ್ಷಿಣ ಕನ್ನಡ ಜಿಲ್ಲೆಯವರು ಎಂಬ ಸಂಗತಿ ಬಹುತೇಕರಿಗೆ ಗೊತ್ತಿಲ್ಲ. ಫೋನಿನಲ್ಲಿ ನೀವು ಕೇಳುವ ಧ್ವನಿ ಇವರದ್ದೇ.. ಇಲ್ಲಿವೆ ಫೋಟೋಸ್

3 Min read
Suvarna News | Asianet News
Published : May 14 2020, 02:52 PM IST| Updated : May 14 2020, 03:09 PM IST
Share this Photo Gallery
• FB
• TW
• Linkdin
• Whatsapp
116

ಭಾರತದಲ್ಲಿ ಮೊಟ್ಟ ಮೊದಲ ಕೊರೋನಾ ಪ್ರಕರಣ ದಾಖಲಾದದ್ದು ಕೇರಳದಲ್ಲಿ. ಇಂತಹ ಕೇರಳದಲ್ಲಿ ಆ ರಾಜ್ಯ ಭಾಷೆಯಾಗಿರುವ ಮಲಯಾಳಂನಲ್ಲಿ ಧ್ವನಿ ಸಂದೇಶ ಬಿತ್ತರಿಸಲ್ಪಡುತ್ತಿದೆ. ಹೀಗೆ ಬಿತ್ತರವಾಗುತ್ತಿರುವ ಧ್ವನಿಯ ಒಡತಿ ಮಾತ್ರ ಸುಳ್ಯದ ಹೆಣ್ಣು ಮಗಳು.

216

ಕನ್ನಡದಲ್ಲಿ ಮೂರು ಹಂತಗಳಲ್ಲಿ ಈ ಧ್ವನಿ ಸಂದೇಶ ಬಂದಿದೆ. ಈ ಪೈಕಿ ಮೊದಲ ಹಂತದ ಧ್ವನಿ ಮಂಗಳೂರು ಮೂಲದ ಡಾರೆಲ್ ಜೆಸಿಂತಾ ಫೆರ್ನಾಂಡಿಸ್ ಅವರದು.

316

ಕನ್ನಡ ಭಾಷೆಯ ಎರಡು ಮತ್ತು ಮೂರನೆಯ ಹಂತದಲ್ಲಿ ಜಾಗೃತಿ ಸಂದೇಶಕ್ಕೆ ಧ್ವನಿ ನೀಡಿದವರು ವಿಟ್ಲದ ಮುಳಿಯದವರಾದ ವಿದ್ಯಾ ನಾರಾಯಣ ಭಟ್.

416

ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದಲ್ಲಿ ನೆಲೆಸಿರುವ ಟಿ.ವಿ. ಜೋಸೆಫ್ ಮತ್ತು ಆಲಿಸ್ ಜೋಸೆಫ್ ದಂಪತಿಯ ಪುತ್ರಿ ಟಿಂಟು ಮೋಳ್ ಅವರ ಧ್ವನಿ ಇದು. ಕೇರಳ ಮೂಲದ ಈ ಕುಟುಂಬ 24 ವರ್ಷಗಳಿಂದ ಸುಳ್ಯ ಪರಿಸರದಲ್ಲಿ ನೆಲೆಸಿದೆ.

516

ಟಿಂಟು ಮೋಳ್‌ಗೆ 9 ವರ್ಷವಿದ್ದಾಗ ಅವರು ತಂದೆಯೊಂದಿಗೆ ಸುಳ್ಯಕ್ಕೆ ಬಂದರು. ಬಳಿಕ ಕಡಬದ ಕ್ನಾನಾಯ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದರು. ಮೊಡಂಕಾಪು ಇನ್ಫೆಂಟ್ ಜೀಸಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಪಡೆದರು. ಬಳಿಕ ಮಂಗಳೂರಿನ ಸೈಂಟ್ ಅಗ್ನೇಸ್ ವಿದ್ಯಾಸಂಸ್ಥೆಯಲ್ಲಿ ಪಿ.ಯು.ಸಿ. ಹಾಗೂ ಪದವಿ ಶಿಕ್ಷಣ ಪೂರೈಸಿ, ಐ.ಎ.ಎಸ್ ಪರೀಕ್ಷೆ ಬರೆಯುವ ಗುರಿಯೊಂದಿಗೆ ದೆಹಲಿಯತ್ತ ತೆರಳಿದರು. ದೆಹಲಿಯ ಜವಾಹರ ಲಾಲ್‌ನೆಹರು ವಿಶ್ವವಿದ್ಯಾನಿಲಯದಲ್ಲಿ ಅಂತರಾಷ್ಟ್ರೀಯ ಸಂಬಂಧ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಪ್ರಸ್ತುತ ಪೂರ್ಣ ಪ್ರಮಾಣದಲ್ಲಿ ವಾಯ್ಸ್ ಆರ್ಟಿಸ್ಟ್ ಆಗಿ ಬ್ಯುಸಿ ಆಗಿದ್ದಾರೆ.

616

ಕೊಟ್ಟಾಯಂ ಜಿಲ್ಲೆಯ ಪಾಲ ಎಂಬಲ್ಲಿಯವರಾದ ಟಿ.ವಿ ಜೋಸೆಫ್ 24 ವರ್ಷಗಳ ಹಿಂದೆ ರಬ್ಬರ್ ಟ್ಯಾಪಿಂಗ್ ಕಾರ್ಮಿಕರಾಗಿ ಗುತ್ತಿಗಾರಿಗೆ ಬಂದಿದ್ದರು. ಆ ಬಳಿಕ ಕೆಲವೇ ವರ್ಷಗಳಲ್ಲಿ ಅವರ ಸಂಸಾರವೂ ಇಲ್ಲಿಗೆ ಬಂದು ನೆಲೆಯಾಯಿತು. ಕೆಲವು ವರ್ಷ ಗುತ್ತಿಗಾರಿನಲ್ಲಿದ್ದ ಬಳಿಕ ಒಂದಷ್ಟು ವರ್ಷ ಬಿ.ಸಿ.ರೋಡ್‌ನಲ್ಲಿದ್ದರು. ಬಳಿಕ ಮರ್ಕಂಜಕ್ಕೆ ಬಂದಿದ್ದು, ಕಳೆದ 12  ವರ್ಷಗಳಿಂದ ಸುಲು ಜಾರ್ಜ್ ಎಂಬವರು ಇಲ್ಲಿ ಖರೀದಿಸಿದ ರಬ್ಬರ್ ಎಸ್ಟೇಟ್‌ನ ಉಸ್ತುವಾರಿ ನೋಡಿಕೊಳ್ಳುತ್ತಾ ಪತ್ನಿಯೊಂದಿಗೆ ವಾಸ್ತವ್ಯ ಹೂಡಿದ್ದಾರೆ.

716

ಕೇಂದ್ರ ಸರಕಾರದ ಅನೇಕ ಪ್ರಕಟನೆಗಳಿಗೆ ತನ್ನ ಶಬ್ದ ದಾಖಲಿಸಿದ್ದಾರೆ. ಸ್ವಚ್ಛ ಭಾರತ್ ಅಭಿಯಾನ್, ಭೀಮ್ ಯೋಜನೆ, ಭೇಟಿ ಬಚಾವೋ - ಭೇಟಿ ಪಡಾವೋ, ಪ್ರಧಾನಮಂತ್ರಿ ಗ್ರಾಮೀಣ ಆವಾಝ್ ಯೋಜನೆ, ಜನಧನ್ ಯೋಜನೆ, ಅಂಚೆ ಇನ್ಸೂರೆನ್ಸ್, ಪಲ್ಸ್ ಪೋಲಿಯೋ ಸೇರಿದಂತೆ ಶಿಕ್ಷಣ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳ ಧ್ವನಿಯಾಗಿದ್ದಾರೆ. ಇದಲ್ಲದೆ ಡೆಟ್ಟಾಯಿಲ್, ಉಷಾ, ಪತಂಜಲಿ, ಮಂಚ್, ಮಿಲ್ಕಿ ಬಾರ್ ಮೊದಲಾದ ಕಂಪೆನಿಗಳ ಪ್ರಕಟಣೆಗಳಿಗೆ ಧ್ವನಿ ನೀಡಿದ್ದಾರೆ.

816

ಜೆಸಿಂತಾ ಪಡೀಲ್‌ನಲ್ಲಿರುವ ದಿ.ವಲೇರಿಯನ್ ಫೆರ್ನಾಂಡಿಸ್ ಹಾಗೂ ಲವೀನಾ ಫೆರ್ನಾಂಡಿಸ್ ಅವರ ಪುತ್ರಿಯಾಗಿರುವ ಡಾರೆಲ್ ಜೆಸಿಂತಾರವರು ತನ್ನ ಎಂ.ಪಿ.ಎಡ್ ಪದವಿಯ ಬಳಿಕ ಸ್ವಲ್ಪ ಕಾಲ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕಿಯಾಗಿದ್ದರು.

916

2013 ರಲ್ಲಿ ದೆಹಲಿಯ ಕನ್ನಡ ಸೀನಿಯರ್ ಸೆಕೆಂಡರಿ ಸ್ಕೂಲ್ ಗೆ ದೈಹಿಕ ಶಿಕ್ಷಕಿಯಾಗಿ ಸೇರಿದರು. ಈ ಶಾಲೆಯ ಸಂಚಾಲಕರಾಗಿದ್ದ ಖ್ಯಾತ ವಾಯ್ಸ್ ಆರ್ಟಿಸ್ಟ್ ಸರವು ಕೃಷ್ಣ ಭಟ್ ಅವರು  ಡಾರೆಲ್ ಅವರ ಧ್ವನಿ ಶಕ್ತಿ ಗುರುತಿಸಿ ವಾಯ್ಸ್ ಓವರ್ ಅವಕಾಶ ನೀಡಲು ಕಾರಣರಾದರು. ರೇಡಿಯೋ ಹಾಗೂ ಟಿ.ವಿ.ಗಳಲ್ಲಿ ಅನೇಕ ಪ್ರಕಟನೆಗಳಿಗೆ ಧ್ವನಿ ನೀಡಿದ ಡಾರೆಲ್ ಅವರಿಗೆ ಕೊರೋನಾ ಜಾಗೃತಿಯ ಪ್ರಕಟನೆಗೆ ಧ್ವನಿ ನೀಡುವ ಅವಕಾಶವೂ ಬಂತು.

1016

ಕೊರೋನಾ ಕಾರಣದ ಲಾಕ್‌ಡೌನ್‌ಗೆ ಕೆಲವು ದಿನಗಳ ಮುಂಚೆಯಷ್ಟೆ ಡಾರೆಲ್ ಮಂಗಳೂರಿಗೆ ಬಂದಿದ್ದಾರೆ. ಹಾಗಾಗಿ ಅವರಿಗೆ ನಂತರದ ದಿನಗಳಲ್ಲಿ ಈ ಅವಕಾಶ ಒದಗಿ ಬರಲಿಲ್ಲ.

1116

"ನನ್ನದು ಕೊರೋನಾ ಆರಂಭ ದಿನಗಳ ಜಾಗೃತಿ ಸಂದೇಶ ಧ್ವನಿಯಾದದ್ದರಿಂದ ಬೈದವರೆ ಜಾಸ್ತಿ ಇರಬಹುದು. ಹಾಗಾಗಿ ನಾನು ಕೂಡ ಇದು ನನ್ನ ಧ್ವನಿ ಎಂದು ಹೇಳುವ ಸ್ಥಿತಿ ಇರಲಿಲ್ಲ. ಆದರೆ ನಂತರದ ದಿನಗಳಲ್ಲಿ  ಈ ಜಾಗೃತಿಯ ಅನಿವಾರ್ಯತೆ ಜನಗಳಿಗೆ ಮನದಟ್ಟಾಯಿತು. ಜಾಗೃತಿ ಮೂಡಿಸಿದ ಹೆಮ್ಮೆ ನನಗೂ ಇದೆ" ಎನ್ನುತ್ತಾರೆ ಡಾರೆಲ್ ಜೆಸಿಕಾ.

1216

ಮುಳಿಯದ ಗೋಪಾಲಕೃಷ್ಣ ಭಟ್, ವಾಣಿ ಭಟ್ ದಂಪತಿಯ ಪುತ್ರಿಯಾಗಿರುವ ವಿದ್ಯಾ ಅವರು ಮುಚ್ಚೂರುಪದವು, ಅಳಿಕೆ, ಮೂಡಬಿದಿರೆಗಳಲ್ಲಿ ಶಿಕ್ಷಣ ಪೂರೈಸಿದ ಬಳಿಕ ಕಾಸರಗೋಡಿನ ಸಿ.ಪಿ.ಸಿ.ಆರ್.ಐ ಯಲ್ಲಿ ಸೈಂಟಿಸ್ಟ್ ಆಗಿದ್ದ ಪುತ್ತೂರು ಮೂಲದ ಡಾ| ನಾರಾಯಣ ಭಟ್ ಅವರೊಂದಿಗೆ ವಿವಾಹವಾಯಿತು. ಪತಿಯ ಉದ್ಯೋಗ ನಿಮಿತ್ತ ಶಿಲ್ಲಾಂಗ್, ಸಿಕ್ಕಿಂ, ಸೂರತ್ ಮೊದಲಾದ ಸ್ಥಳಗಳಲ್ಲಿ ನೆಲೆಸಿ 2009ರಲ್ಲಿ ದೆಹಲಿಗೆ ಬಂದರು.

1316

ಅದಾಗಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿದ್ದ ಅವರಿಗೆ ದೆಹಲಿಗೆ ಬಂದ ನಂತರ ಕರ್ನಾಟಕ ಸಂಘ ಉತ್ತಮ ವೇದಿಕೆ ಒದಗಿಸಿತು. `ಸೇವಂತಿ ಪ್ರಸಂಗ' ನಾಟಕದ ಸೇವಂತಿ, ' ಕಣ್ಣು' ನಾಟಕದ ಸೀತಾ ಎಂಬ ಕುರುಡಿಯ ಪಾತ್ರ ವಿದ್ಯಾ ಅವರೊಳಗಿದ್ದ ಪ್ರಬುದ್ಧ ಅಭಿನಯವನ್ನು ಅನಾವರಣಗೊಳಿಸಿತು.

1416

ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಕಿಸಾನ್ ಮಾನ್ ಧನ್ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ ಮೊದಲಾದ ಪ್ರಕಟಣೆಗಳಿಗೆ ಧ್ವನಿ ನೀಡಿದರು. ಕೊರೋನಾ ಕುರಿತ ಎರಡು ಹಾಗೂ ಮೂರನೆ ಹಂತದ ಸಂದೇಶಕ್ಕೂ ಧ್ವನಿ ನೀಡಿದರು.

1516

ಈ ಮೂವರೂ ಕಲಾವಿದರಿಗೆ ಸಹಕಾರ ಮತ್ತು ಮಾರ್ಗದರ್ಶನ ನೀಡಿದವರು, ಅವರ ಪ್ರತಿಭೆ ಬೆಳಗಲು ಕಾರಣರಾದವರು ದಕ್ಷಿಣ ಕನ್ನಡ ಮೂಲದವರೇ ಆದ ಸರವು ಕೃಷ್ಣ ಭಟ್. "ದಕ್ಷಿಣ ಕನ್ನಡ ಮೂಲದವರಲ್ಲಿ  ಭಾಷಾ ಶುದ್ಧಿ ಮತ್ತು ಸ್ಪಷ್ಟತೆ ಹೆಚ್ಚು ಎಂಬ ಮಾತಿದೆ. ಇದು ಇಲ್ಲಿನವರು ಇಂತಹ ಅವಕಾಶಗಳನ್ನು ಪಡೆಯುದಕ್ಕೂ ಸಾಧ್ಯವಾಗಿದೆ ಎನ್ನುತ್ತಾರೆ" ಸರವು ಕೃಷ್ಣ ಭಟ್.

1616

"ಲಾಕ್‌ಡೌನ್ ದಿನಗಳಲ್ಲಿ ಜನ ಟಿ.ವಿ.ಯ ಮುಂದೆ ಕುಳಿತುಕೊಳ್ಳುವುದಕ್ಕಿಂತ ಫೋನ್ ಕರೆಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಹೀಗಾಗಿ ನಮ್ಮ ಧ್ವನಿಯೂ ಸಾಕಷ್ಟು ಪ್ರಸಿದ್ಧಿ ಪಡೆಯಿತು. ನಿರ್ಣಾಯಕ ಸಂದರ್ಭದ ಒಂದು ದೊಡ್ಡ ಜಾಗೃತಿ ಅಭಿಯಾನದಲ್ಲಿ ಸಣ್ಣ ಪಾತ್ರ ವಹಿಸಿದ ತೃಪ್ತಿ ನನಗಿದೆ " ಎನ್ನುತ್ತಾರೆ ವಿದ್ಯಾ ನಾರಾಯಣ ಭಟ್.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved