ಒಂದಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರೋ ಖಡಕ್ ಡಿಸಿ ರೋಹಿಣಿ ಸಿಂಧೂರಿ ಹುಟ್ಟಹಬ್ಬವಿಂದು
ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುವ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ , ಖಡಕ್ ಅಧಿಕಾರಿ ಫ್ಯಾಮಿಲಿ, ಜೀವನ, ಹಾಗೂ ಅವರ ಕಾರ್ಯದಕ್ಷತೆ ಬಗ್ಗೆ ಇಲ್ಲೊಂದಷ್ಟು ಮಾಹಿತಿ
ಜನ್ಮ ದಿನದ ಶುಭಾಶಯಗಳು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ತೆಲಂಗಾಣದಲ್ಲಿ 1984ರಲ್ಲಿ ಜನಿಸಿದ ರೋಹಿಣಿ ಸಿಂಧೂರಿ ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.
ರೋಹಿಣಿ ಸಿಂಧೂರಿ ಸಾಫ್ಟ್‌ವೇರ್ ಇಂಜಿನಿಯರ್ ಸುಧೀರ್ ಎಂಬುವರನ್ನ ವಿವಾಹವಾಗಿದ್ದು ಇಬ್ಬರು ಮಕ್ಕಳಿದ್ದಾರೆ.
ಸಿವಿಲ್ ಸರ್ವೀಸ್‌ನಲ್ಲಿರುವ ರೋಹಿಣಿ ಅನೇಕ ಜನಪರ ಕಾರ್ಯಗಳನ್ನು ಮಾಡಿ ಮೆಚ್ಚುಗೆ ಗಳಿಸಿದ್ದಾರೆ.
ಸೌಂದರ್ಯದೊಂದಿಗೆ ಕಾರ್ಯದಕ್ಷತೆಯನ್ನು ಹೊಂದಿರುವ ರೋಹಿಣಿ ಸಿಂಧೂರಿ ಸದ್ಯ ಮೈಸೂರು ಜಿಲ್ಲಾಧಿಕಾರಿ
ಪತಿ ಮಕ್ಕಳೊಂದಿಗೆ ರೋಹಿಣಿ ಸಿಂಧೂರಿ
2009ರ ಐಎಎಸ್ ಬ್ಯಾಚ್ ಅಧಿಕಾರಿಯಾಗಿದ್ದು ಮೊದಲು ತುಮಕೂರು ಅಸಿಸ್ಟೆಂಟ್ ಕಮಿಷನರ್ ಆಗಿ ನೇಮಕಗೊಂಡರು
ತಾಯಿ ಲಕ್ಷ್ಮೀ ರೆಡ್ಡಿ ಅವರೊಂದಿಗೆ ರೋಹಿಣಿ ಸಿಂಧೂರಿ
ತಮ್ಮ ತಾಯಿಯೊಂದಿಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
2014ರಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್ ಸಿಇಒ ಆಗಿ ನೇಮಕಗೊಂಡು ಅಲ್ಲಿ ಪ್ರತೀ ಮನೆಯಲ್ಲಿಯೂ ಶೌಚಾಲಯ ನಿರ್ಮಾಣ ಮಾಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.
ಮಂಡ್ಯದಲ್ಲಿ ಕೈಗೊಂಡ ಸ್ವಚ್ಛ ಭಾರತ ಅಭಿಯಾನ ಕೇಂದ್ರ ಸರ್ಕಾರದ ಗಮನ ಸೆಳೆದಿತ್ತು.
ಬಳಿಕ ಹಾಸನ, ಬೆಂಗಳೂರಿನ ವಿವಿಧ ಇಲಾಖೆಯಲ್ಲಿ ಸೇವೆ. ಸದ್ಯ ಮೈಸೂರು ಜಿಲ್ಲಾಧಿಕಾರಿಯಾಗಿದ್ದು, ಕೋವಿಡ್ ನಿವಾರಣೆ ಮಾಡುವ ನಿಟ್ಟಿನಲ್ಲಿ ಮಹತ್ವದ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ.