ಕೇವಲ 46 ಕಿ.ಮಿ ಪ್ರಯಾಣಕ್ಕೆ ಬರೋಬ್ಬರಿ 5 ಗಂಟೆ, ಇದು ಭಾರತದ ವಿಶೇಷ ರೈಲು!
ಬುಲೆಟ್ ಟ್ರೈನ್, ಹೈಸ್ಪೀಡ್ ರೈಲಿಗೆ ಈಗ ಬೇಡಿಕೆ ಹೆಚ್ಚು. ಅದೆಷ್ಟೇ ದೂರ ಪ್ರಯಾಣವಾದರೂ ತಕ್ಷಣವೇ ತಲುಪಬೇಕು. ಸಮಯ ಉಳಿತಾಯವಾಗಬೇಕು. ಆದರೆ ಭಾರತದ ಈ ರೈಲು ಇದಕ್ಕೆ ವಿರುದ್ಧ ಕೇವಲ 46 ಕಿಲೋಮೀಟರ್ ಪ್ರಯಾಣಕ್ಕೆ ಈ ರೈಲು ಬರೋಬ್ಬರಿ 5 ಗಂಟೆ ತೆಗೆದುಕೊಳ್ಳುತ್ತದೆ.
Vande Bharath
ಭಾರತೀಯ ರೈಲ್ವೇಯ ಪ್ರತಿ ರೈಲಿನಲ್ಲಿ ಒಂದೊಂದು ವಿಶೇಷತೆ ಇದೆ. ಅತೀ ಹೆಚ್ಚು ಪ್ರಯಾಣಿಕರು ಸಂಚರಿಸುವ ಮಾರ್ಗ, ಅತೀ ವೇಗದ ರೈಲು, ಅತೀ ಹೆಚ್ಚು ನಿಲುಗಡೆ ರೈಲು, ವರ್ಷಕ್ಕೆ ಎರಡೇ ಬಾರಿ ನಿಲುಗಡೆಯಾಗುಲ ನಿಲ್ದಾಣ ಸೇರಿದಂತೆ ವಿಶೇಷತೆಗಳು ಹಲವು. ಇದರಂತೆ ಭಾರತದಲ್ಲಿನ ಈ ವಿಶೇಷ ರೈಲು ಪ್ರಯಾಣ ಅತ್ಯಂತ ನಿಧಾನ. ಅಂದರೆ 46 ಕಿಲೋಮೀಟರ್ ಪ್ರಯಾಣಕ್ಕೆ ಈ ರೈಲು ಬರೋಬ್ಬರಿ 5 ಗಂಟೆ ತೆಗೆದುಕೊಳ್ಳುತ್ತದೆ. ಇಲ್ಲಿ ರೈಲು ಕೇವಲ 9 ಕಿಲೋಮೀಟರ್ ಪ್ರತಿ ಗಂಟೆ ವೇಗದಲ್ಲಿ ಸಂಚರಿಸುತ್ತದೆ.
ಈ ವಿಶೇಷ ರೈಲು ನೀಲಗಿರಿ ಬೆಟ್ಟಗುಡ್ಡಗಳ ನಡುವೆ ಸಾಗುತ್ತದೆ. ತಮಿಳುನಾಡಿನ ನೀಲಗಿರಿ ಮೌಂಟೈನ್ ರೈಲು ಹಲವು ವಿಶೇಷತೆ ಹೊಂದಿದೆ. ಈ ರೈಲು ಅತ್ಯಂತ ನಿಧಾನ ಅಂದರೆ ಗಂಟೆಗೆ 9 ಕಿಲೋಮೀಟರ್ ವೇಗದಲ್ಲಿ ಸಾಗುತ್ತದೆ. ವೇಗವಾಗಿ ನಡೆದರೂ ಇದಕ್ಕಿಂತ ಹೆಚ್ಚು ಕಿಲೋಮೀಟರ್ ಸಾಗಬಹುದು. ಆದರೆ ಇಷ್ಟು ನಿಧಾನವಾಗಿ ತೆರಳಿದರೂ ಈ ರೈಲಿನ ಪ್ರಯಾಣಿಕರಿಗೆ ಬೋರ್ ಆಗುವುದಿಲ್ಲ.
ಈ ನೀಲಗಿರಿ ಮೌಂಟೈನ್ ರೈಲು ಮೆಟ್ಟುಪಾಲಯಂ ದಿಂದ ಊಟಿಗೆ ಸಂಚರಿಸುತ್ತದೆ. 46 ಕಿಲೋಮೀಟರ್ ಪ್ರಯಾಣವೇ ಅತ್ಯಂತ ರೋಚಕ. ಇಷ್ಟು ನಿಧಾನವಾಗಿ ರೈಲು ಸಾಗಲು ಮುಖ್ಯ ಕಾರಣ ಒಟ್ಟು 46 ಕಿಲೋಮೀಟರ್ ಕೂಡ ಬೆಟ್ಟ ಗುಡ್ಡಗಳ ನಡುವಿನ ಪ್ರಯಾಣ ಇದಾಗಿದೆ. ಇಷ್ಟೇ ಅಲ್ಲ ಇದು ಮೀಟರ್ ಗೇಜ್ ರೈಲು ರೂಟ್.
ಈ 46 ಕಿಲೋಮೀಟರ್ ರೈಲು ಮಾರ್ಗದಲ್ಲಿ ರೈಲು 16 ಸುರಂಗ ಮಾರ್ಗ, 250 ಸೇತುವೆ ಹಾಗೂ 208 ಅಪಾಯಾಕಾರಿ ತಿರುವುಗಳನ್ನು ಹೊಂದಿದೆ. ಮೆಟ್ಟುಪಾಲಯಂ-ಕಲ್ಲಾರ್ ಹಾಗೂ ಕೂನೂರು- ಉದಕಮಂಡಲ ನಾನ್ ರಾಕ್ ರೈಲು ಮಾರ್ಗದಲ್ಲಿ ರೈಲು 30 ಕಿ.ಮೀ ವೇಗದಲ್ಲಿ ಸಂಚರಿಸಿದರೆ, ಕಲ್ಲಾರ್ ಹಾಗೂ ಕೂನೂರು ನಡುವೆ ಗರಿಷ್ಠ ವೇಗದ ಮೀತಿ 13 ಕಿಲೋಮೀಟ್ ವೇಗದಲ್ಲಿ ಸಾಗುತ್ತದೆ.
ಪರ್ವತ ಶ್ರೇಣಿಗಳ ನಡುವೆ ರೈಲು ಅತೀ ನಿಧಾನವಾಗಿ ಸಾಗುತ್ತದೆ. ಆಧರೆ ಇಲ್ಲಿ ಪ್ರಯಾಣಿಕರಿಗೆ ಯಾವತ್ತೂ ಬೋರ್ ಅಥವಾ ನಿರಾಸೆಯಾಗುವುದಿಲ್ಲ. ಕಾರಣ ಈ 46 ಕಿಲೋಮೀಟರ್ ಪ್ರಯಾಣ ಪ್ರಕೃತಿ ನಡುವೆ ಅತ್ಯಂತ ಸುಂದರ ತಾಣಗಳನ್ನು ನೋಡಲು ಸಾಧ್ಯವಿದೆ. ದಟ್ಟ ಕಾಡು, ಜಲಪಾತ, ಪ್ರಪಾತ, ಬಯಲು ಸೇರಿದಂತೆ ಹಲವು ರುದ್ರ ರಮಣೀಯ ತಾಣಗಳನ್ನು ವೀಕ್ಷಿಸಲು ಸಾಧ್ಯವಿದೆ.
ಇನ್ನು ಮಳೆಗಾಲದಲ್ಲಿ ಈ ರೈಲು ಪ್ರಯಾಣ ಅತೀ ಹೆಚ್ಚು ಮುದ ನೀಡುತ್ತದೆ. ಆದರೆ ಅಷ್ಟೇ ಅಪಾಯಕಾರಿಯಾಗಿದೆ. ನೀಲಗಿರಿ ಪ್ರದೇಶದಲ್ಲಿನ ಸರಾಸರಿ ಮಳೆ 1250 ಎಂಎಂ. ಇನ್ನು ಉದಕಮಮಂಡಲದಲ್ಲಿ 1400 ಎಂಎಂ ಮಳೆ ಬೀಳಲಿದೆ. ಹೀಗಾಗಿ ಈ ಸಮಯದಲ್ಲಿನ ರೈಲು ಪ್ರಯಾಣ ಹೆಚ್ಚು ಆಹ್ಲಾದ ನೀಡಲಿದೆ.