Chandrayaan-3: ಬಾಹ್ಯಾಕಾಶದಲ್ಲಿ ಭಾರತದ ಭೀಮಬಲ ಕಣ್ತುಂಬಿಕೊಂಡ ಅಭಿಮಾನಿಗಳು
ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಮಾಡಿದ ವಿಶ್ವದ ಮೊದಲ ದೇಶ ಹಾಗೂ ಚಂದ್ರನ ನೆಲದ ಮೇಲೆ ಕಾಲಿಟ್ಟ ನಾಲ್ಕನೇ ದೇಶ ಎನ್ನುವ ಸಾಧನೆ ಮಾಡುವ ನಿಟ್ಟಿನಲ್ಲಿ ಭಾರತದ ಚಂದ್ರಯಾನ-3 ತನ್ನೆಲ್ಲಾ ತಂತ್ರಜ್ಞಾನಗಳನ್ನು ಹೊತ್ತುಕೊಂಡು ನಭಕ್ಕೆ ಹಾರಿದೆ.
ಚಿತ್ರಗಳು: ರವಿಶಂಕರ್ ಭಟ್, ಕನ್ನಡ ಪ್ರಭ
ಶುಕ್ರವಾರ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಲ್ಲಿ ಚಂದ್ರಯಾನ-3 ನಭಕ್ಕೆ ಉಡಾವಣೆಯಾಯಿತು. ಈ ವೇಳೆ ಸಾವಿರಾರು ಪ್ರಯಾಣಿಕರು ಸಾಕ್ಷಿಯಾಗಿದ್ದರು.
ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಲ್ಲಿ ಅಂದಾಜು 10 ಸಾವಿರಕ್ಕೂ ಅಧಿಕ ಮಂದಿ ಚಂದ್ರಯಾನ-3 ಉಡಾವಣೆಯನ್ನು ನೇರವಾಗಿ ವೀಕ್ಷಣೆ ಮಾಡಿದರು.
ಇಸ್ರೋದಿಂದ ಬಾಹುಬಲಿ ಎಂದೇ ಗುರುತಿಸಿಕೊಂಡಿರುವ ಹೆಲಿ ಲಿಫ್ಟ್ ಲಾಂಚ್ ವೆಹಿಕಲ್ ಎಲ್‌ವಿಎಂ/ಎಂ4 ರಾಕೆಟ್‌ನ ಮೂಲಕ ಚಂದ್ರಯಾನ-3ಯನ್ನು ಉಡಾವಣೆ ಮಾಡಲಾಯಿತು
ಭೂಮಿಯಿಂದ ಚಂದ್ರನವರೆಗಿನ ಪ್ರಯಾಣವನ್ನು 40 ದಿನಗಳಲ್ಲಿ ಕ್ರಮಿಸಲಾಗುತ್ತದೆ. ಅಂದಾಜಿನ ಪ್ರಕಾರ ಆಗಸ್ಟ್ 23 ಅಥವಾ 24 ರಂದು ಚಂದ್ರನ ನೆಲದ ಮೇಲೆ ಭಾರತ ಕಾಲಿಡಲಿದೆ.
ಶ್ರೀಹರಿಕೋಟಾದಲ್ಲಿ ಹಾಕಲಾಗಿದ್ದ ಬೃಹತ್ ಪರದೆಯ ಮೂಲಕ ಚಂದ್ರಯಾನ-3ಯ ಉಡಾವಣೆಯ ನೇರ ವೀಕ್ಷಣೆಯನ್ನು ಮಾಡಲಾಯಿತು. ವಿದ್ಯಾರ್ಥಿಗಳು, ಖಗೋಳಾಸಕ್ತರು ಈ ವೇಳೆ ಹಾಜರಿದ್ದರು.
ಚಂದ್ರನ ನೆಲದ ಮೇಲೆ ಕಾಲಿಟ್ಟ ಬಳಿಕ ಒಂದು ಚಂದ್ರನ ದಿನ (ಭೂಮಿಯ ಮೇಲೆ 14 ದಿನ) ರೋವರ್ ಕಾರ್ಯಾಚರಣೆ ಮಾಡುತ್ತದೆ. ವಿವಿಧ ಪ್ರದೇಶಗಳ ಸಂಶೋಧನೆಯಲ್ಲಿ ಭಾಗಿಯಾಗಲಿದೆ/
ಈವರೆಗೂ ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳು ಚಂದ್ರನ ಮೇಲೆ ಕಾಲಿಟ್ಟ ದೇಶಗಳಾಗಿವೆ. ಆದರೆ, ಭೂಮಿಯಲ್ಲಿರುವವರ ಪಾಲಿಗೆ ಎಂದಿಗೂ ಅಜ್ಞಾತವಾಗಿರುವ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ತನ್ನ ಲ್ಯಾಂಡರ್ ಅನ್ನು ಇಳಿಸಲಿದೆ.
ಚಂದ್ರಯಾನ-3ಯಲ್ಲಿ ಒಟ್ಟು ಮೂರು ಪ್ರಮುಖ ವಸ್ತುಗಳಿವೆ. ಪ್ರೊಪಲ್ಶನ್ ಮಾಡೆಲ್, ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್.
ಚಂದ್ರಯಾನ-2 ವೇಳೆ ಭಾರತ ಆರ್ಬಿಟರ್‌ಅನ್ನು ಚಂದ್ರನ ಕಕ್ಷೆಗೆ ಸೇರಿಸಿತ್ತು. ಇದೇ ಆರ್ಬಿಟರ್‌ಅನ್ನು ಭಾರತ ಈ ಬಾರಿಯೂ ಬಳಸಿಕೊಳ್ಳಲಿದ್ದು, ಚಂದ್ರಯಾನ-3ಯ ಚಲನವಲಗಳ ಮೇಲೆ ಕಣ್ಗಾವಲಿಡಲಿದೆ.