ವಿಸ್ಡಮ್ ಹಲ್ಲು ನೋವು: ಕಾರಣ ಮತ್ತು ತಡೆಯಲು ಪರಿಣಾಮಕಾರಿ ಪರಿಹಾರ!!

First Published Apr 3, 2021, 5:29 PM IST

ಬಾಯಿಯ ಹಿಂಭಾಗದಲ್ಲಿರುವ ಹಲ್ಲುಗಳು ಒಂದು ಗುಂಪಾಗಿವೆ. ಇವು ಆಹಾರಕ್ಕೆ ಜಗಿದು ಅರೆಯಲು ನೆರವಾಗುವ ಅತ್ಯಂತ ಕಠಿಣ ಮತ್ತು ಅಗಲವಾದ ಹಲ್ಲುಗಳ ಸಮೂಹ. ಹೆಚ್ಚಿನ ಜನರಲ್ಲಿ 17 ರಿಂದ 25ರ ನಡುವಿನ ವಯಸ್ಸಿನ ನಡುವೆ ವಿಸ್ಡಮ್ ಹಲ್ಲುಗಳು ಹೊರಹೊಮ್ಮಲು ಪ್ರಾರಂಭಿಸುತ್ತವೆ. ಕೆಲವರಿಗೆ ಈ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಅಥವಾ ನೋವು ಇರುವುದಿಲ್ಲ, ಇನ್ನು ಕೆಲವರಿಗೆ ದೀರ್ಘಕಾಲದವರೆಗೆ ಕಾಡಬಹುದಾದಂತಹ ಅನುಭವವಾಗುತ್ತದೆ. ಏಕೆಂದರೆ, ಒಸಡುಗಳ ಮೂಲಕ ಹಲ್ಲುಗಳು ಒಡೆದು, ಜಗಿಯುವ ವ್ಯವಸ್ಥೆಯ ಭಾಗವಾಗುವುದು ಇದಕ್ಕೆ ಕಾರಣ.