ಪುದಿನಾವನ್ನು ಆಹಾರದಲ್ಲಿ ಸೇರಿಸಲೇಬೇಕು ಯಾಕೆ ಅನ್ನೋದಕ್ಕೆ 10 ಕಾರಣಗಳು
ಮಿಂಟ್ ಅಥವಾ ಪುದಿನಾ ಎಂಬುದು ವಸಂತ ಋತುವಿನಲ್ಲಿ ಹೆಚ್ಚಾಗಿ ಬೆಳೆಯುವಂತಹ ಒಂದು ಔಷಧೀಯ ಗಿಡಮೂಲಿಕೆಯಾಗಿದೆ.. ಪುದಿನಾವು ಪಾಲಿಫಿನಾಲ್ ಗಳ ಸಮೃದ್ಧ ಮೂಲವಾಗಿದೆ ಮತ್ತು ಇದು ರುಚಿ ಮತ್ತು ಸುವಾಸನೆಯನ್ನು ಹೊಂದಿದೆ. ಅಲ್ಲದೆ ಈ ಎಲೆಗಳಲ್ಲಿ ಕ್ಯಾಲೋರಿ ಕಡಿಮೆ ಇದ್ದು, ಕೇವಲ ಪ್ರೋಟೀನ್ ಮತ್ತು ಕೊಬ್ಬುಗಳನ್ನು ಮಾತ್ರ ಹೊಂದಿದೆ.

ಪುದಿನಾ ಎಲೆಗಳ ಆರೋಗ್ಯ ಪ್ರಯೋಜನಗಳು
ಪುದಿನಾದಲ್ಲಿರುವ ಸಾರಭೂತ ತೈಲಗಳು ಹಲ್ಲುನೋವಿನ ಸಮಸ್ಯೆಗಳಿಗೆ ಪ್ರಯೋಜನಕಾರಿ. ಈ ಎಲೆಗಳಲ್ಲಿ ವಿಟಮಿನ್ ಎ, ಸಿ ಮತ್ತು ಬಿ ಕಾಂಪ್ಲೆಕ್ಸ್ ಇದ್ದು, ಇದರಿಂದ ಚರ್ಮವು ಉತ್ತಮಗೊಂಡು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಪುದಿನಾದ ಇನ್ನೊಂದು ಪೋಷಕಾಂಶದ ಪ್ರಯೋಜನವೆಂದರೆ ಇದರಲ್ಲಿ ಕಬ್ಬಿಣ, ಪೊಟ್ಯಾಶಿಯಂ ಮತ್ತು ಮ್ಯಾಂಗನೀಸ್ ಸಮೃದ್ಧವಾಗಿದ್ದು, ಇದು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ ಮತ್ತು ಮೆದುಳಿನ ಕಾರ್ಯಚಟುವಟಿಕೆಯನ್ನು ಸುಧಾರಿಸುತ್ತದೆ.

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಪುದಿನಾ ದಲ್ಲಿ ಆಂಟಿ ಆಕ್ಸಿಡೆಂಟುಗಳು, ಮೆಂಥೋಲ್ ಮತ್ತು ಫೈಟೋನ್ಯೂಟ್ರಿಯೆಂಟ್ ಗಳು ಹೇರಳವಾಗಿದ್ದು, ಇದು ಕಿಣ್ವಗಳು ಆಹಾರವನ್ನು ಜೀರ್ಣಿಸಲೂ ನೆರವಾಗುತ್ತದೆ. ಪುದಿನಾದಲ್ಲಿರುವ ಸಾರಭೂತ ತೈಲಗಳು ಪ್ರಬಲವಾದ ಬ್ಯಾಕ್ಟೀರಿಯಾ ನಿವಾರಕ ಮತ್ತು ನಂಜುನಿರೋಧಕ ಪರಿಣಾಮಗಳನ್ನು ಹೊಂದಿದ್ದು, ಇದು ಹೊಟ್ಟೆಯ ಸೆಳೆತವನ್ನು ಶಮನಗೊಳಿಸುತ್ತದೆ ಮತ್ತು ಆಮ್ಲೀಯತೆ ಮತ್ತು ಹೊಟ್ಟೆಯುಬ್ಬರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿಯಮಿತವಾಗಿ ಪುದಿನಾವನ್ನು ಸೇವಿಸುವುದರಿಂದ ಎದೆಯ ದಟ್ಟಣೆಯನ್ನು ಕಡಿಮೆ ಮಾಡಬಹುದು. ಪುದಿನಾದಲ್ಲಿರುವ ಮೆಥನಾಲ್ ಒಂದು ಡಿಕಾಂಜೆಸ್ಟ್ಂಟ್ ಆಗಿ ಕೆಲಸ ಮಾಡುತ್ತದೆ, ಇದು ಶ್ವಾಸಕೋಶದಲ್ಲಿ ಸಂಗ್ರಹವಾದ ಲೋಳೆಯನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ ಮತ್ತು ಮೂಗಿನಲ್ಲಿ ಊದಿಕೊಂಡ ಪೊರೆಗಳನ್ನು ಸಂಕುಚಿತಗೊಳಿಸಿ ಸುಲಭವಾಗಿ ಉಸಿರಾಡಲು ಅನುವು ಮಾಡಿಕೊಡುತ್ತದೆ. ಪುದಿನಾವನ್ನು ಬಳಸುವಾಗ, ಅದನ್ನು ಅತಿಯಾಗಿ ಬಳಸಬೇಡಿ.

ತಲೆನೋವು ಗುಣಪಡಿಸುತ್ತದೆ. ಹೌದು ಪುದಿನಾದಲ್ಲಿ ಮೆಂಥೋಲ್ ಇದ್ದು, ಇದು ಸ್ನಾಯುಗಳನ್ನು ಸಡಿಲಗೊಳಿಸಿ ನೋವನ್ನು ಕಡಿಮೆ ಮಾಡುತ್ತದೆ. ಹಣೆಗೆ ಪುದಿನ ರಸವನ್ನು ಹಚ್ಚುವುದರಿಂದ ತಲೆನೋವು ನಿವಾರಣೆಮಾಡಬಹುದು. ಅಲ್ಲದೆ ಪುದಿನಾ ಪ್ರತ್ಯಾಮ್ಲ ಅಥವಾ ಪುದಿನಾ ಎಣ್ಣೆಯ ಬಾಮ್ ಗಳು ತಲೆನೋವನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿದೆ.

ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಪುದಿಯ ಪ್ರಮುಖ ಪ್ರಯೋಜನವೆಂದರೆ ಇದು ಅರೋಮಾಥೆರಪಿಯಲ್ಲಿ ವ್ಯಾಪಕವಾಗಿ ಬಳಸಲ್ಪಡುವ ಗಿಡಮೂಲಿಕೆಯಾಗಿದೆ. ಪುದಿನಾದಲ್ಲಿ ಬಲವಾದ, ತಾಜಾ ವಾಸನೆಯಿದ್ದು, ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹ ಮತ್ತು ಮನಸ್ಸನ್ನು ತಾಜಾಗೊಳಿಸುತ್ತದೆ.

ಪುದಿನಾ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ಸ್ಯಾಲಿಸಿಲಿಕ್ ಆಮ್ಲವಿದ್ದು, ಇದು ಮೊಡವೆ ನಿವಾರಕವಾಗಿ ಕೆಲಸ ಮಾಡುತ್ತದೆ. ಪುದಿನಾದಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿದ್ದು, ದೇಹದಿಂದ ಫ್ರೀ ರಡಿಕಲ್ ಗಳನ್ನು ತೆಗೆದುಹಾಕುವ ಮೂಲಕ ಸ್ವಚ್ಛ ಮತ್ತು ಯೌವನಯುತ ಚರ್ಮವನ್ನು ಪಡೆಯಲು ನೆರವಾಗುತ್ತದೆ. ಪುದಿನಾ ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ, ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳುತ್ತದೆ, ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ, ಚರ್ಮದ ರಂಧ್ರಗಳಿಂದ ಕೊಳೆಯನ್ನು ಹೊರಹಾಕಿ, ಚರ್ಮವು ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ.

ಪುದಿನಾ ಎಲೆಗಳನ್ನು ಜಗಿಯುವುದರಿಂದ ಹಲ್ಲುಗಳ ಆರೋಗ್ಯ ಉತ್ತಮಗೊಳ್ಳುತ್ತದೆ. ಪುದಿನಾದಲ್ಲಿರುವ ಸಾರಭೂತ ತೈಲಗಳು ತಾಜಾ ಉಸಿರನ್ನು ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಪೆಪ್ಪರ್ ಮಿಂಟ್ ಎಣ್ಣೆಯ ಮೌತ್ ವಾಶ್ ಅನ್ನು ಬಳಸಿ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಮತ್ತು ಆರೋಗ್ಯಕರ ವಸಡುಗಳು ಮತ್ತು ಹಲ್ಲುಗಳನ್ನು ಒದಗಿಸಲು ಸಹಾಯ ಮಾಡುತ್ತದೆ.

ಸಂಶೋಧನೆಯ ಪ್ರಕಾರ ಪುದಿನಾ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿ ಮೆದುಳಿನ ಅರಿವಿನ ಕಾರ್ಯವನ್ನು ಮರಳಿ ಪಡೆಯಬಹುದು. ನಿಯಮಿತವಾಗಿ ಪುದಿನಾ ಸೇವನೆ ಮಾಡುವುದರಿಂದ ಮೆದುಳಿನ ಕ್ಷಮತೆಯನ್ನು ಹೆಚ್ಚಿಸಬಹುದು, ಮತ್ತು ಜ್ಞಾಪಕ ಶಕ್ತಿಯನ್ನು ಮತ್ತು ಇತರ ಅರಿವಿನ ಕಾರ್ಯಗಳನ್ನು ಸುಧಾರಿಸಬಹುದು.

ಈ ಸುಗಂಧಭರಿತ ಗಿಡಮೂಲಿಕೆ ಪುದಿನಾ ತೂಕ ಇಳಿಸಲು ಸಹಾಯ ಮಾಡುತ್ತದೆ. ಪುದಿನಾದಲ್ಲಿರುವ ಸಾರಭೂತ ತೈಲಗಳು ಪಿತ್ತರಸದ ಹರಿವನ್ನು ಹೆಚ್ಚಿಸಲು ಮತ್ತು ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತವೆ. ಇದು ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ. ದೇಹವು ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಸಮರ್ಥವಾದಾಗ, ಚಯಾಪಚಯ ಕ್ರಿಯೆಯು ಹೆಚ್ಚಾಗುತ್ತದೆ. ಚಯಾಪಚಯ ಕ್ರಿಯೆಯ ಹೆಚ್ಚಳವು ತೂಕ ನಷ್ಟವನ್ನು ಉತ್ತೇಜಿಸುತ್ತದೆ.

ಶೀತದಿಂದ ಬಳಲುತ್ತಿದ್ದರೆ ಮತ್ತು ಉಸಿರಾಡಲು ಕಷ್ಟಪಡುತ್ತಿದ್ದರೆ, ಪುದಿನಾ ಇದಕ್ಕೆ ಅತ್ಯುತ್ತಮ ಪರಿಹಾರವಾಗಿದೆ. ಹೆಚ್ಚಿನ ಇನ್ಹೇಲರ್ ಗಳು ಪುದಿನಾ ಅಂಶವನ್ನು ಹೊಂದಿರುತ್ತವೆ. ಗಂಟಲು, ಶ್ವಾಸದ ದಟ್ಟಣೆಯನ್ನು ನೈಸರ್ಗಿಕವಾಗಿ ಮಿಂಟ್ ನಿವಾರಿಸುತ್ತದೆ. ಉಸಿರಾಟದ ಕಾಲುವೆಗಳಲ್ಲದೆ, ದೀರ್ಘಕಾಲದ ಕೆಮ್ಮಿನಿಂದ ಉಂಟಾಗುವ ಕಿರಿಕಿರಿಯನ್ನು ಸಹ ಮಿಂಟ್ ಕಡಿಮೆ ಮಾಡುತ್ತದೆ.

ಪುದಿನಾ ವಾಕರಿಕೆಗೆ ಪರಿಣಾಮಕಾರಿ ಚಿಕಿತ್ಸೆಯಾಗಿದ್ದು, ಇದು ಸಾಮಾನ್ಯವಾಗಿ ಬೆಳಗಿನ ಕಾಯಿಲೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವು ಪುದಿನಾ ಎಲೆಗಳನ್ನು ಪ್ರತಿದಿನ ಬೆಳಗ್ಗೆ ತಿನಿಸುವುದು ಅಥವಾ ಅದರ ವಾಸನೆಯನ್ನು ಕುಡಿಯುವುದು ಗರ್ಭಿಣಿಯರಿಗೆ ವಾಕರಿಕೆಯನ್ನು ಉಂಟುಮಾಡುವುದನ್ನು ಉತ್ತಮವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.