ಕಾಲಕ್ಕೆ ತಕ್ಕಂತೆ ಬದಲಾಗಬೇಕು ಆಹಾರ; ಚಳಿಗಾಲದಲ್ಲಿ ಹೇಗಿರಬೇಕು ಊಟದ ಮೇನು?
Health Desk: ಊಟವನ್ನು ಋತುಮಾನಕ್ಕೆ ಅನುಗುಣವಾಗಿ ಮಾಡಬೇಕು ಅಂತಾರೆ. ಕಾಲೋಚಿತ ಆಹಾರಗಳು ತುಂಬಾ ಆರೋಗ್ಯಕರ ಅಂತ ಹೇಳಲಾಗುತ್ತೆ ಏಕೆಂದರೆ ಅವುಗಳ ಪೋಷಕಾಂಶಗಳು ಚೆನ್ನಾಗಿ ಉಳಿಯುತ್ತವೆ. ಉದಾಹರಣೆಗೆ,ಸಜ್ಜೆ ಚಳಿಗಾಲದ ಆಹಾರ, ಆದರೆ ಬೇಸಿಗೆಯಲ್ಲಿ ಇದರ ಸೇವನೆ ಕಡಿಮೆ ಮಾಡಬೇಕು. ಅದೇ ರೀತಿ ಬೇಸಿಗೆಗಿಂತ ಚಳಿಗಾಲದಲ್ಲಿ ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಕಡಿಮೆ ಲಭ್ಯವಿರುತ್ತದೆ. ಆದ್ದರಿಂದ ದೇಹದಲ್ಲಿ ಸಮತೋಲನ ಕಾಯ್ದುಕೊಳ್ಳಲು ಋತುಮಾನಕ್ಕೆ ತಕ್ಕಂತೆ ತಿನ್ನಬೇಕು. ಈ ಋತುವಿನಲ್ಲಿ ಬಿಸಿ ಸೂಪ್ ಮತ್ತು ಬೇಯಿಸಿದ ತರಕಾರಿಗಳನ್ನು ತಿನ್ನುವುದು ಒಳ್ಳೆಯದು.
ಕರಿಷ್ಮಾ ಚಾವ್ಲಾ ಒಂದು ಇಂಗ್ಲಿಷ್ ವೆಬ್‌ಸೈಟ್‌ನೊಂದಿಗೆ ಮಾತನಾಡುತ್ತಾ, ಚಳಿಗಾಲದಲ್ಲಿ ನಾನು ಜೇನುತುಪ್ಪ, ಬೀಜಗಳು, ಈರುಳ್ಳಿ, ಬೆಳ್ಳುಳ್ಳಿ ಮತ್ತು ಸೇಬು ಮತ್ತಿತರ ನಾರಿನಂಶವಿರುವ ಹಣ್ಣುಗಳನ್ನು ತಿನ್ನಲು ಸಲಹೆ ನೀಡುತ್ತೇನೆ. ಹಸಿ ಸಲಾಡ್, ಸೌರ್‌ಕ್ರಾಟ್, ಮೊಳಕೆ ಕಾಳುಗಳು ಮತ್ತು ಉತ್ತಮ ಪ್ರೋಟೀನ್ ತೆಗೆದುಕೊಳ್ಳಬೇಕು. ಉತ್ತಮ ಕೊಬ್ಬಿನ ಜೊತೆಗೆ ಉತ್ಕರ್ಷಣ ನಿರೋಧಕಗಳು, ಜಿಂಕ್‌ನಿಂದ ಸಮೃದ್ಧವಾಗಿರುವ ಆಹಾರಗಳ ಮೇಲೆ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ.
ವಿಟಮಿನ್ ಸಿ ಮತ್ತು ಇ ಯ ಮೂಲಕ್ಕಾಗಿ ಹಸಿರು ಎಲೆಗಳ ತರಕಾರಿಗಳು, ಬ್ರೊಕೊಲಿ, ಅಜ್ವಾನ, ಕ್ಯಾಪ್ಸಿಕಂ, ಬೀಜಗಳು, ಸಂಪೂರ್ಣ ಧಾನ್ಯಗಳು, ಸೇಬು, ಕ್ಯಾರೆಟ್, ಪಪ್ಪಾಯಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು.
ಜಿಂಕ್ ಮೂಲಕ್ಕಾಗಿ ಎಳ್ಳಿನ ಬೀಜಗಳು, ಕುಂಬಳಕಾಯಿ ಬೀಜಗಳು, ಕೋಳಿ, ಬೀನ್ಸ್,, ಮೊಸರು, ಬಾದಾಮಿ, ಬಟಾಣಿ, ಕಡಲೆ, ಅಣಬೆಗಳನ್ನು ತಿನ್ನಬೇಕು.
ಉತ್ತಮ ಕೊಬ್ಬಿಗಾಗಿ ತೆಂಗಿನ ಎಣ್ಣೆ, ಆಲಿವ್ ಎಣ್ಣೆ, ಅಗಸೆ, ವಾಲ್‌ನಟ್, ಬಾದಾಮಿ, ಚಿಯಾ ಮತ್ತು ಮೊಟ್ಟೆಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು.
ಚಳಿಯಿಂದ ತಪ್ಪಿಸಿಕೊಳ್ಳಲು ಯಾವುದೇ ಆಹಾರಗಳಿವೆಯೇ ಎಂಬುದರ ಬಗ್ಗೆ ಚಾವ್ಲಾ ಹೇಳುತ್ತಾರೆ, ಚಳಿಗಾಲದಲ್ಲಿ ಯಾವುದೇ ಆಹಾರವನ್ನು ನಿಷೇಧಿಸಲು ನನಗೆ ಯಾವುದೇ ಕಾರಣ ಕಾಣುತ್ತಿಲ್ಲ. ಚಳಿಗಾಲವು ನಮಗೆ ಬಿಸಿ, ಮಸಾಲೆಯುಕ್ತ ಮತ್ತು ಪುಡಿಪುಡಿ ಆಹಾರವನ್ನು ಸೇವಿಸಲು ಕಾರಣ ನೀಡಬಹುದು. ನಾವು ಹುರಿದ ಜಂಕ್ ಫುಡ್ಸ್, ಸಕ್ಕರೆ ತಿನ್ನುವುದನ್ನು ತಪ್ಪಿಸಬೇಕು. ಉಳಿದಂತೆ ಎಲ್ಲಾ ಆರೋಗ್ಯಕರ ಆಹಾರವನ್ನು ನಾವು ತೆಗೆದುಕೊಳ್ಳಬಹುದು.
ಬಿಸಿ ಆಹಾರಗಳಿಗಾಗಿ ಬಿಸಿ ಚಹಾ, ಕಾಫಿ, ಬಿಸಿ ಹಾಲು, ಗಿಡಮೂಲಿಕೆ ಚಹಾವನ್ನು ತೆಗೆದುಕೊಳ್ಳಬಹುದು. ಆದರೆ ಇದಕ್ಕೆ ಸಕ್ಕರೆ ಬೆರೆಸಬೇಡಿ. ಬದಲಾಗಿ ಜೇನು ತುಪ್ಪ, ಬೆಲ್ಲ ಬಳಸಬಹುದು