ಹೈ ಬಿಪಿ ಇರೋರು ಈ ಹಣ್ಣು, ತರಕಾರಿ ಸೇವಿಸಿದ್ರೆ ಒಳ್ಳೇಯದು

First Published Apr 16, 2021, 11:13 AM IST

ವಿಶ್ವದ ವಯಸ್ಕ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಇದು ಹೃದಯ ರಕ್ತನಾಳದ ಕಾಯಿಲೆ ಮತ್ತು ಅಕಾಲಿಕ ಮರಣಕ್ಕೆ ಕಾರಣವಾಗಬಹುದಾದ ಅಪಾಯಕಾರಿ ಅಂಶವಾಗಿದೆ. ಗ್ರೀನ್ ಅಥವಾ ಬ್ಲ್ಯಾಕ್ ಚಹಾವನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ಸಣ್ಣ ಆದರೆ ಸ್ಥಿರವಾದ ಪ್ರಮಾಣದಲ್ಲಿ ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ಈಗಾಗಲೇ ಬಹಿರಂಗಪಡಿಸಿವೆ.