ಉಸಿರಾಟದ ತಂತ್ರಗಳಿಂದ ಹಿಡಿದು ಮಸಾಜ್‌ವರೆಗೆ, ಬಿಕ್ಕಳಿಕೆ ನಿವಾರಿಸೋ ದಾರಿ ಇವು

First Published Mar 10, 2021, 11:38 AM IST

ಒಂದಲ್ಲ ಒಂದು ಸಂದರ್ಭದಲ್ಲಿ ಬಿಕ್ಕಳಿಕೆಯನ್ನು ಎದುರಿಸಿರುತ್ತೇವೆ. ಬಿಕ್ಕಳಿಕೆ ಸಾಮಾನ್ಯವಾಗಿ ತಮ್ಮಷ್ಟಕ್ಕೆ ತಾವೇ ಹೊರಟು ಹೋಗುತ್ತವೆ, ಕೆಲವೊಮ್ಮೆ ಅದು ನಿಜವಾಗಿಯೂ ತೊಂದರೆ ಉಂಟು ಮಾಡಬಹುದು, ಏಕೆಂದರೆ ಅದು ಮಾತನಾಡುವ, ತಿನ್ನುವಾಗ ಮುಜುಗರ ಉಂಟು ಮಾಡಬಹುದು. ಒಂದು ಚಮಚ ಸಕ್ಕರೆಯನ್ನು ತಿನ್ನುವುದರಿಂದ ಹಿಡಿದು, ಒಂದು ಲೋಟ ನೀರು ಕುಡಿದರೆ, ಬಿಕ್ಕಳಿಕೆಯನ್ನು ತಡೆಯಲು ಹಲವು  ಪರಿಹಾರಗಳಿವೆ. ಆದರೆ ಇವುಗಳಲ್ಲಿ ಯಾವುದು ನಿಜವಾಗಿಯೂ ಕೆಲಸ ಮಾಡುವವು?