World Idli Day: ಇಡ್ಲಿ ಆರೋಗ್ಯಕ್ಕೆ ಇಷ್ಟು ಒಳ್ಳೇಯದಾ?

First Published Mar 31, 2021, 1:51 PM IST

ಆರೋಗ್ಯಕರ ಮತ್ತು ರುಚಿಕರವಾದ ಭಾರತೀಯ ಉಪಾಹಾರದ ಕುರಿತು ಮಾತನಾಡುವಾಗ, ಇಡ್ಲಿಯನ್ನು ಖಂಡಿತವಾಗಿ ಉಲ್ಲೇಖಿಸಲಾಗುತ್ತದೆ. ಅಲ್ಲದೆ, ಈ ಆರೋಗ್ಯಕರ ಉಪಹಾರವು ಹೊಟ್ಟೆಯನ್ನು ತುಂಬಿಸುತ್ತದೆ. ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ತಯಾರಿಸುವ ಇಡ್ಲಿಯನ್ನು ಇಂದು ದೇಶದ ಪ್ರತಿಯೊಂದು ಭಾಗದಲ್ಲೂ ತಿನ್ನಲಾಗುತ್ತದೆ. ಅಷ್ಟೇ ಅಲ್ಲ, ಇಡ್ಲಿಯನ್ನು ಭಾರತದ ಹೊರಗಿನ ಭಾರತೀಯ ರೆಸ್ಟೋರೆಂಟ್ ಗಳಲ್ಲಿಯೂ ನೀಡಲಾಗುತ್ತದೆ. ಆದರೆ ಇಡ್ಲಿಯನ್ನು ಯಾವಾಗ ತಿನ್ನಲಾಗುತ್ತದೆ ಎಂದು ತಿಳಿದಿದೆಯೇ ಅಥವಾ ದಿನದ ಯಾವ ಸಮಯದಲ್ಲಿ ಅದನ್ನು ತಿನ್ನುವುದರಿಂದ ಎಷ್ಟು ಪ್ರಯೋಜನವಾಗುತ್ತದೆ? ಅಂದ ಹಾಗೆ ಮಾರ್ಚ್ 30ರಂದು ವಿಶ್ವ ಇಡ್ಲಿ ದಿನವನ್ನು ಆಚರಿಸಲಾಗುತ್ತದೆ.