ಕಲಬೆರೆಕೆಯ ಗೋಧಿ ಹಿಟ್ಟನ್ನು ಬಳಸುತ್ತಿದ್ದೀರಾ, ಪತ್ತೆ ಹಚ್ಚೋದು ಹೇಗೆ?
ಭಾರತದ ಮನೆಗಳಲ್ಲಿ ಗೋಧಿ ಹಿಟ್ಟನ್ನು ದಿನನಿತ್ಯ ಬಳಸಲಾಗುತ್ತದೆ. ಪ್ರತಿದಿನ ಗೋಧಿ ಹಿಟ್ಟಿನಿಂದ ತಯಾರಿಸಿದ ಚಪಾತಿ ಎಲ್ಲರ ಮನೆಯ ಸಾಮಾನ್ಯ ಆಹಾರ. ಆದರೆ ಮಾರುಕಟ್ಟೆಯಲ್ಲಿ ನಕಲಿ ಗೋಧಿ ಹಿಟ್ಟು ಮಾರಾಟ ಮಾಡಲಾಗುತ್ತದೆ ಎಂದು ನಿಮಗೆ ತಿಳಿದಿದೇಯಾ? ಈ ನಕಲಿ ಹಿಟ್ಟು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಅದರಿಂದ ತಯಾರಿಸಿದ ಚಾಪಾತಿ, ರೋಟಿಗಳು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಖರೀದಿಸುತ್ತಿರುವ ಹಿಟ್ಟನ್ನು ಆಸಲಿ ಅಥವಾ ನಕಲಿಯೋ ಎಂದು ಈ ರೀತಿಯಲ್ಲಿ ಕಂಡು ಹಿಡಿಯಬಹುದು ನೋಡಿ.
ಈ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಂಡುಬರುತ್ತಿರವ ನಕಲಿ ಹಿಟ್ಟು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದರಿಂದ ತಯಾರಿಸಿದ ಚಪಾತಿ ವಿಷದಂತೆ ಕೆಲಸ ಮಾಡುತ್ತದೆ.
ಈ ನಕಲಿ ಹಿಟ್ಟಿನಲ್ಲಿ ಬೋರಿಕ್ ಪುಡಿಯನ್ನು ಸೀಮೆ ಸುಣ್ಣದ ಪುಡಿಯೊಂದಿಗೆ ಬೆರೆಸಲಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ.
ಅನೇಕ ಬಾರಿ, ಮಾರುಕಟ್ಟೆಯಿಂದ ತಂದ ಹಿಟ್ಟಿನ ತಯಾರಿಸಿದ ಚಪಾತಿ ತುಂಬಾ ಗಟ್ಟಿ. ಇದಕ್ಕೆ ಕಾರಣ ಹಿಟ್ಟಿನಲ್ಲಿ ಕಲಬೆರೆಕೆ ಇರಬಹುದು.
ಖರೀದಿಸಿದ ಹಿಟ್ಟನ್ನು ಆಸಲಿ ಯಾ ನಕಲಿ ಎಂದು ಕಂಡುಹಿಡಿಯಲು ಕೆಲವು ಮಾರ್ಗಗಳಿವೆ. ಈ ಕ್ರಮಗಳೊಂದಿಗೆ ಹಿಟ್ಟನ್ನು ಪರಿಶೀಲಿಸಿದರೆ ಹಿಟ್ಟಿನಲ್ಲಿರುವ ಕಲಬೆರೆಕೆ ತಿಳಿಯುತ್ತದೆ.
ಒಂದು ಗ್ಲಾಸ್‌ನಲ್ಲಿ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಚಮಚ ಹಿಟ್ಟು ಸೇರಿಸಿ. ನೀರಿನ ಮೇಲೆ ಹಿಟ್ಟು ತೇಲುತ್ತಿದ್ದರೆ ಹಿಟ್ಟು ಕಲಬೆರಕೆ ಎಂದು ಅರ್ಥ.
ನಿಂಬೆ ರಸದ ಮೂಲಕವೂ ಹಿಟ್ಟನ್ನು ಪರೀಕ್ಷಿಸಬಹುದು. ಒಂದು ಚಮಚ ಹಿಟ್ಟು ತೆಗೆದುಕೊಂಡು ಸ್ವಲ್ಪ ನಿಂಬೆ ರಸವನ್ನು ಹಿಂಡಿ. ಹಿಟ್ಟಿನ ಮೇಲೆ ನಿಂಬೆ ರಸ ಹನಿಯಿಂದ ಗುಳ್ಳೆಗಳು ಬಂದರೆ ಹಿಟ್ಟು ನಕಲಿ
ಹೈಡ್ರೋಕ್ಲೋರಿಕ್ ಆಸಿಡ್ ಸಹಾಯದಿಂದ ಹಿಟ್ಟನ್ನು ಪರೀಕ್ಷಿಸಬಹುದು. ಟೆಸ್ಟ್ ಟ್ಯೂಬ್‌ನಲ್ಲಿ ಸ್ವಲ್ಪ ಹಿಟ್ಟು ತೆಗೆದುಕೊಳ್ಳಿ. ಈಗ ಅದಕ್ಕೆ ಹೈಡ್ರೋಕ್ಲೋರಿಕ್ ಆಸಿಡ್ ಸೇರಿಸಿ. ನೀವು ಆಸಿಡ್ ಸೇರಿಸಿದಾಗ ಟ್ಯೂಬ್‌ನಲ್ಲಿ ಹಿಟ್ಟು ಚೂರುಚೂರಾಗಿರುವ ಹಾಗೇ ಕಂಡರೆ ಹಿಟ್ಟು ನಕಲಿ.
ಈ ನಕಲಿ ಹಿಟ್ಟನ್ನು ಮಾರುಕಟ್ಟೆಯಲ್ಲಿ ಕೆಲವು ರೂಪಾಯಿಗಳ ಲಾಭಕ್ಕಾಗಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ತಿನ್ನುವುದು ತುಂಬಾ ಹಾನಿಕಾರಕ. ಈ ವಿಧಾನಗಳೊಂದಿಗೆ ಅದನ್ನು ಕಂಡುಹಿಡಿಯುವ ಮೂಲಕ, ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ತಡೆಯಬಹುದು.