ನಾವು ಸೇವಿಸುವ ಆಹಾರ ನಮ್ಮ ಜೀವನದ ಮೇಲೂ ಬೀರುತ್ತೆ ಪ್ರಭಾವ
ಸಾತ್ವಿಕ ಆಹಾರ, ಸಾತ್ವಿಕ ಗುಣ ಸಾತ್ವಿಕ ಜೀವನ. ಇವೆಲ್ಲವೂ ಒಂದಕ್ಕೊಂದು ಸಂಬಂಧಗಳಿಂದ ಕೂಡಿದೆ. ಸಾತ್ವಿಕ ಎಂದರೆ ಧನಾತ್ಮಕ ಮತ್ತು ಸಂತೋಷ. ಸಾತ್ವಿಕ ಗುಣ ನಾವು ಮಾಡುವ ಆಹಾರದಲ್ಲಿದ್ದರೆ ನಮ್ಮ ಜೀವನ ಸುಂದರ ವಾಗಿರುತ್ತದೆ. ಸಾತ್ವಿಕ ಗುಣಗಳು ಯಾವಾಗಲು ಧನಾತ್ಮಕವಾಗಿ ಆಲೋಚನೆ ಮಾಡುವಂತದ್ದು ಒಳ್ಳೆಯದನ್ನೇ ಮಾತಾಡುವುದು ಸತ್ಯಪರತೆ, ದೇವರ ಧ್ಯಾನ, ಅಸೂಯೆ ಇಲ್ಲದಿರುವುದು, ಮೋಸ, ಠಕ್ಕತನ ಇಲ್ಲದಿರುವುದು. ಬೇರೆಯವರ ಬಗ್ಗೆ ಒಳ್ಳೆಯದನ್ನೇ ಬಯಸುವುದು. ಇವೆಲ್ಲ ಸಾತ್ವಿಕ ಗುಣಗಳು.
ಸಾತ್ವಿಕ ಭೋಜನದ ಬಗ್ಗೆ ತಿಳಿಯುವ: ಸಾತ್ವಿಕ ಭೋಜನ ಕೇವಲ ಶಾಖಾಹಾರಿಯಲ್ಲ, ದೇವರಿಗೆ ಸಮರ್ಪಿಸಿದ ಅನ್ನ ಅಂದರೆ ನೈವೇದ್ಯ ಮಾಡಿರುವಂತದು. ಇದು ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ನೋಡಿ.
ಸಿಟ್ಟಿನಲ್ಲಿ ಮಾಡಿದ ಅಡುಗೆ ಸಾತ್ವಿಕ ಭೋಜನ ಆಗದು. ಅಡುಗೆ ಮಾಡುವಾಗ ಚೀರುವುದು ಸಿಟ್ಟು ಮಾಡುವುದು ಸರಿಯಲ್ಲ. ಸಿಟ್ಟಿನ ಬರದಲ್ಲಿ ಮಾಡಿದ ಅಡುಗೆಯಲ್ಲಿ ಋಣಾತ್ಮಕ ಅಂಶಗಳಿರುತ್ತವೆ.
ಕೆಲವೊಮ್ಮೆ ಅಡುಗೆ ಸರಿಯಾಗಿ ಆಗಿರುವುದಿಲ್ಲ. ತಿಂದರು ಅರಗದು ಹಾಗಾಗಿ ನಮ್ಮ ಹಿಂದು ಸಂಪ್ರದಾಯದಲ್ಲಿ ಸ್ನಾನಾದಿಗಳನ್ನು ಮಾಡಿ ಶುಭ್ರ ಬಟ್ಟೆ ಧರಿಸಿ ದೇವರ ಸ್ಮರಣೆ ಮಾಡುತ್ತ ಅಡುಗೆ ಮಾಡುವುದನ್ನು ನೋಡಿದ್ದೇವೆ.
ಅಡುಗೆ ಮಾಡುವುದನ್ನ ಮಠಗಳಲ್ಲಿ, ದೇವಸ್ಥಾನಗಳಲ್ಲಿ ಅನ್ನ ದಾಸೋಹಗಳಲ್ಲಿ ನೋಡಿದ್ದೇವೆ. ಅಲ್ಲಿಯ ಭೋಜನ ಅಷ್ಟೊಂದು ರುಚಿ ಯಾಕೆ ಎಂದರೆ ಅದನ್ನ ದೇವರಿಗೆ ಸಮರ್ಪಣೆ ಮಾಡಲಾಗಿರುತ್ತದೆ.
ಹೋಟೆಲ್'ಗಳ ಊಟದಲ್ಲಿ ಋಣಾತ್ಮಕ ಅಂಶಗಳಿವೆ. ಅಲ್ಲಿ ಧನಕೋಸ್ಕರ ಮಾಡಿರುವುದು ಅಲ್ಲಿ ಒಳ್ಳೆಯ ಮನಸ್ಸಿನಿಂದ ಅಡಿಗೆ ಮಾಡಿರುವುದಿಲ್ಲ. ಹಾಗಾಗಿ ನಾಲಿಗೆಗೆ ರುಚಿಯಾದರು ದೇಹಕ್ಕೆ ಒಳ್ಳೇದಲ್ಲ.
ಹೆಂಡತಿ ಅಥವಾ ತಾಯಿ ಮಾಡಿರುವ ಊಟದಲ್ಲಿ ಧನಾತ್ಮಕ ಅಂಶಗಳಿವೆ. ನೀವು ಊಟಹಾಕಿದಾಗ ಇನ್ನು ಹಾಕಿ ಎಂದು ಹೇಳಿದಾಗ ಸಂತಸವಾಗುತ್ತಾದೆ .
ಇನ್ನು ದೇವಾಲಯದಲ್ಲಿ ಮಾಡಿದ ಭೋಜನದಲ್ಲಿ ಧನಾತ್ಮಕ ಅಂಶಗಳಿರುತ್ತದೆ. ಕಾರಣ ದೇವರಿಗೆ ಸಮರ್ಪಿಸಿದ ಕಾರಣ ರುಚಿಯಾಗಿರುತ್ತದೆ. ಹಾಗಾಗಿ ಹಿಂದಿನ ಕಾಲದಲ್ಲಿ ಅಡಿಗೆ ಮಾಡಿ ದೇವರಿಗೆ ನೈವೇದ್ಯ ಇಟ್ಟು ಜೊತೆ ಗೋಗ್ರಾಸ ಇಡುತ್ತಿದ್ದರು.
ನಾವು ತಿನ್ನುವ ಮೊದಲು ದನಗಳಿಗೆ ನೀಡುತ್ತಿದ್ದರು. ಹೀಗಾಗಿ ಅಡುಗೆ ರುಚಿಯಾಗಿರುತ್ತಿತ್ತು. ನಾವು ಕೂಡ ಅಡುಗೆ ಮಾಡಿ ದೇವರಿಗೆ ನೈವೇದ್ಯವಿಟ್ಟು ತಿಂದರೆ ಆ ಅಡುಗೆ ಬಹಳ ರುಚಿ ಯಾಗಿರುತ್ತದೆ.
ದೇವರಿಗಿಟ್ಟ ನೈವೇದ್ಯದಲ್ಲಿ ಧನಾತ್ಮಕ ಅಂಶಗಳು ನಮ್ಮ ದೇಹ , ಮನಸ್ಸನ್ನು ಒಳ್ಳೆಯದನ್ನು ಉಂಟು ಮಾಡುತ್ತದೆ. ಹಾಗಾಗಿ ಅಡುಗೆಯಲ್ಲಿ ಜಾದು ಇದೆ ಎನ್ನುತ್ತಾರೆ. ನಮ್ಮ ಜೀವನ ಬದಲಾವಣೆಗೆ ಇದು ಸಣ್ಣ ಮಾರ್ಗ ಅಷ್ಟೇ.