Bengaluru:ರುಚಿಯಾದ ಬ್ರೇಕ್‌ಫಾಸ್ಟ್ ಸವಿಯಬೇಕೆ? ಹಾಗಿದ್ರೆ ಇಲ್ಲಿಗೆ ಭೇಟಿ ನೀಡಿ
ನೀವು ಬೆಂಗಳೂರಿನವರಾಗಿದ್ದು, ಮಾರ್ನಿಂಗ್ ಬ್ರೇಕ್ ಫಾಸ್ಟ್ ಗೆ ಏನಾದರೂ ರುಚಿಯಾದ, ಸ್ಪೆಷಲ್ ಆಹಾರ ಸೇವಿಸಬೇಕು ಎಂದು ಬಯಸಿದ್ರೆ ನಿವು ಟ್ರೈ ಮಾಡಲೇಬೇಕಾದ ಹತ್ತು ಬೆಸ್ಟ್ ಹೊಟೇಲ್ ಗಳ ಬಗ್ಗೆ ನಾವಿಲ್ಲಿ ಹೇಳ್ತಿವಿ ಕೇಳಿ.
ಬೆಂಗಳೂರಿನ ಟಾಪ್ 10 ರೆಸ್ಟೋರೆಂಟ್ ಗಳು:
ಕೆಫೆ ಟೆರ್ರಾ (Cafe Terra)
ನೀವು ಇಂಗ್ಲಿಷ್ ಬ್ರೇಕ್ ಫಾಸ್ಟ್ ಆನಂದಿಸಲು ಬಯಸಿದ್ರೆ, ಈ ಸ್ಥಳವು ಸೂಕ್ತವಾಗಿದೆ. ಆದ್ರೆ ಇಲ್ಲಿ ಸಸ್ಯಾಹಾರಿಗಳಿಗೆ ಹೆಚ್ಚಿನ ಆಯ್ಕೆ ಇರೋದಿಲ್ಲ. ಇಲ್ಲಿನ ಆಹಾರ ತುಂಬಾನೆ ಟೇಸ್ಟಿಯಾಗಿರುತ್ತೆ.ಇಲ್ಲಿನ ಜಾಗ ಕೂಡ ತುಂಬಾನೆ ಸುಂದರವಾಗಿದೆ.
ಆಹಾರ: ಬೆಳಗಿನ ಉಪಾಹಾರ
ನೀಡುವ ವಿಧಗಳು: ಕ್ರೆಪ್ಸ್, ಪ್ಯಾನ್‌ಕೇಕ್ಸ್, ಬೇಕನ್, ಟೋಸ್ಟ್, ವಾಫಲ್ಸ್, ಆಮ್ಲೆಟ್‌ಗಳು
ಸ್ಥಳ: 179, ಗ್ರೌಂಡ್ ಫ್ಲೋರ್, 5ನೇ ಮೇನ್, 9ನೇ ಕ್ರಾಸ್, 1ನೇ ಹಂತ, ಇಂದಿರಾನಗರ, ಬೆಂಗಳೂರು 560038
ಸಮಯ: ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ, ಸೋಮವಾರದಿಂದ ಭಾನುವಾರ
ಇಬ್ಬರಿಗೆ ವೆಚ್ಚ: 600 ರೂ.
154 ಬ್ರೇಕ್ ಫಾಸ್ಟ್ ಕ್ಲಬ್ (154 Breakfast Club)
ನಿಸ್ಸಂದೇಹವಾಗಿ, ಬೆಂಗಳೂರಿನಲ್ಲಿ ಕಾಂಟಿನೆಂಟಲ್ ಆಹಾರ ಸೇವಿಸುವ ಅಗ್ರ ಸ್ಥಳಗಳಲ್ಲಿ ಇದು ಒಂದಾಗಿದೆ, ಹಳ್ಳಿಗಾಡಿನ ವಾತಾವರಣ ಮತ್ತು ಅದ್ಭುತವಾದ ಆಹಾರವನ್ನು ಹೊಂದಿದೆ. ಪ್ರತಿಯೊಂದು ವಸ್ತುವು ಬೆಲೆಗೆ ಯೋಗ್ಯವಾಗಿರುವುದರಿಂದ ವೆಚ್ಚವು ಹೆಚ್ಚೇನೂ ಆಗಲ್ಲ. ,
ಆಹಾರ: ಕಾಂಟಿನೆಂಟಲ್, ಬ್ರೇಕ್ಫಾಸ್ಟ್
ನೀಡುವ ವಿಧಗಳು: ಮಶ್ರೂಮ್ ರಾಗೌಟ್, ವೆಜ್ ಫ್ಲೋರೆಂಟೈನ್, ಬಿಗ್ ಬ್ರೇಕ್‌ಫಾಸ್ಟ್, ನ್ಯೂಟೆಲ್ಲಾ ವಾಫಲ್ಸ್, ಚಾಕೊಲೇಟ್ ಪ್ಯಾನ್ಕೇಕ್‌ಗಳು, ಸನ್ನಿ ಸೈಡ್
ಸ್ಥಳ: 440, 8ನೇ ಮುಖ್ಯರಸ್ತೆ, ಕೋರಮಂಗಲ 4ನೇ ಬ್ಲಾಕ್, ಬೆಂಗಳೂರು 560034
ಸಮಯ: ಬೆಳಿಗ್ಗೆ 8 ರಿಂದ ರಾತ್ರಿ 9, ಸೋಮವಾರದಿಂದ ಭಾನುವಾರ
ಇಬ್ಬರಿಗೆ ವೆಚ್ಚ: 1,100 ರೂ.
ಹೋಲ್ ಇನ್ ದ ವಾಲ್ ಕೆಫೆ (The Hole in The Wall Cafe)
ಈ ಸ್ಥಳವು ಉಪಾಹಾರ ಮತ್ತು ಬ್ರಂಚ್ ಗೆ ಸೂಕ್ತವಾಗಿದೆ. ಇಲ್ಲಿ ನೀವು ಮೀಟಿ ಆಮ್ಲೆಟ್, ನ್ಯೂಟೆಲ್ಲಾ ಪ್ಯಾನ್ಕೇಕ್ಸ್, ವೆಜ್ ಕ್ಯಾಸೆರೋಲ್, ಲೋಟಸ್ ಬಿಸ್ಕಾಫ್ ವಾಫಲ್, ಫ್ರೆಂಚ್ ಟೋಸ್ಟ್ ಮತ್ತು ಪಿಜ್ಜಾ ಆಮ್ಲೆಟ್ ಎಲ್ಲವನ್ನೂ ಸವಿಯಬಹುದು. ಸ್ಥಳದ ವಾತಾವರಣ ಮತ್ತು ವೈಬ್ ಸುಂದರವಾಗಿದೆ.
ಆಹಾರ: ಕಾಂಟಿನೆಂಟಲ್, ಬ್ರೇಕ್ಫಾಸ್ಟ್
ನೀಡುವ ಆಹಾರ : ಮೀಟಿ ಆಮ್ಲೆಟ್, ಫ್ರಿಟ್ಟಾಟಾ, ಫ್ರೈಡ್ ಮಶ್ರೂಮ್, ಕಾಂಟಿನೆಂಟಲ್ ಬ್ರೇಕ್ಫಾಸ್ಟ್, ಗ್ರಿಲ್ಡ್ ಚಿಕನ್ ಸ್ಯಾಂಡ್ವಿಚ್,
ಸ್ಥಳ: 4, 8ನೇ ಮುಖ್ಯರಸ್ತೆ, ಕೋರಮಂಗಲ 4ನೇ ಬ್ಲಾಕ್, ಬೆಂಗಳೂರು 560034
ಸಮಯ: ಬೆಳಿಗ್ಗೆ 8 ರಿಂದ ರಾತ್ರಿ 9, ಸೋಮವಾರದಿಂದ ಭಾನುವಾರ
ಕೆಫೆ ನೊಯಿರ್ (Cafe Noir)
ಕೆಫೆ ನೊಯಿರ್ ಯುಬಿ ಸಿಟಿಯ ಟೆರೇಸ್ ನಲ್ಲಿದೆ, ಆದ್ದರಿಂದ ನೀವು ಈ ಪ್ರದೇಶದಲ್ಲಿದ್ದರೆ, ನೀವು ಖಂಡಿತವಾಗಿಯೂ ಇಲ್ಲಿ ಬ್ರೇಕ್ ಫಾಸ್ಟ್ ಟ್ರೈ ಮಾಡಿ. ನೀವು ಹೊಸ ಸ್ಥಳಗಳನ್ನು ಪ್ರಯತ್ನಿಸುವುದನ್ನು ಇಷ್ಟಪಡೋರಾದರೆ, ಇದು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಇಲ್ಲಿನ ಎಲ್ಲಾ ಇಟಾಲಿಯನ್ ಮತ್ತು ಫ್ರೆಂಚ್ ಆಹಾರಗಳು ತುಂಬಾನೆ ರುಚಿಕರವಾಗಿವೆ.
ಆಹಾರ: ಕಾಂಟಿನೆಂಟಲ್
ನೀಡುವ ವಿಧಗಳು: ಸ್ಪ್ಯಾನಿಷ್ ಆಮ್ಲೆಟ್, ಸೆಣಬಿನ ಬೀಜ ಮತ್ತು ಅಮರಂತ್ ಪ್ಯಾನ್ಕೇಕ್‌ಗಳು, ಕ್ಯಾರಮೆಲೈಸ್ಡ್ ಬಾಳೆಹಣ್ಣು ಮತ್ತು ಟಾಫಿ
ಸ್ಥಳ: 2ನೇ ಮಹಡಿ, ಯುಬಿ ಸಿಟಿ, ವಿಠಲ್ ಮಲ್ಯ ರಸ್ತೆ, ಲ್ಯಾವೆಲ್ಲೆ ರಸ್ತೆ ಬಳಿ, ಬೆಂಗಳೂರು 560001
ಸಮಯ: ಬೆಳಿಗ್ಗೆ 10:30 ರಿಂದ ರಾತ್ರಿ 11 ರವರೆಗೆ, ಸೋಮವಾರದಿಂದ ಭಾನುವಾರ
ಎರಡಕ್ಕೆ ವೆಚ್ಚ: 1,800 ರೂ.
ಬ್ರಾಹ್ಮಣರ ಕಾಫಿ ಬಾರ್ (Brahmins' Coffee Bar)
ಈ ರೆಸ್ಟೋರೆಂಟ್ ನಲ್ಲಿ ಸಾಂಪ್ರದಾಯಿಕ ದಕ್ಷಿಣ ಭಾರತದ ಆಹಾರಗಳಾದ ಇಡ್ಲಿ, ವಡಾ, ಖಾರಾ ಬಾತ್, ಕೇಸರಿ ಬಾತ್ ಮತ್ತು ತುಂಬಾ ರುಚಿಯಾದ ಫಿಲ್ಟರ್ ಕಾಫಿಯನ್ನು ನೀಡುತ್ತದೆ. ಇಲ್ಲಿ ಟ್ರೈ ಮಾಡಲೇಬೇಕಾದ ಆಹಾರಗಳಲ್ಲಿ ಇಡ್ಲಿ, ಖಾರಾ ಬಾತ್ ಮತ್ತು ಕಾಫಿ ಸೇರಿವೆ.
ಆಹಾರ : ದಕ್ಷಿಣ ಭಾರತೀಯ
ನೀಡುವ ವಿಧಗಳು: ಇಡ್ಲಿ, ತೆಂಗಿನಕಾಯಿ ಚಟ್ನಿ, ಖಾರಾ ಬಾತ್, ಕೇಸರಿ ಬಾತ್, ಉಪ್ಮಾ, ಫಿಲ್ಟರ್ ಕಾಫಿ
ಸ್ಥಳ: ರಂಗರಾವ್ ರಸ್ತೆ, ಬಸವನಗುಡಿ, ಬೆಂಗಳೂರು 560004
ಸಮಯ: ಬೆಳಿಗ್ಗೆ 6 ರಿಂದ ಸಂಜೆ 7, ಸೋಮವಾರದಿಂದ ಭಾನುವಾರ
ಎರಡಕ್ಕೆ ವೆಚ್ಚ: 100 ರೂ.
ಕೋಶಿಸ್ ಪರೇಡ್ ಕೆಫೆ (Koshy's Parade Café)
ಹಳೆಯ ಬೆಂಗಳೂರಿನ ಲುಕ್ ಉಳಿಸಿಕೊಂಡಿರುವ ಈ ರೆಸ್ಟೋರೆಂಟ್ ನಲ್ಲಿ ಬಡಿಸುವ ಆಹಾರವು ಬಹಳ ಜನಪ್ರಿಯವಾಗಿದೆ. ಇಲ್ಲಿ ಬೆಳಗ್ಗಿನ ಉಪಾಹಾರಕ್ಕಾಗಿ ಬೇಕನ್ ಆಮ್ಲೆಟ್, ಮಶ್ರೂಮ್ ಟೋಸ್ಟ್, ಹ್ಯಾಮ್ ಸ್ಯಾಂಡ್ವಿಚ್ನಂತಹ ಕಾಂಟಿನೆಂಟಲ್ ಭಕ್ಷ್ಯಗಳನ್ನು ಸವಿಯಬಹುದು.
ಪಾಕಪದ್ಧತಿಗಳು: ಕಾಂಟಿನೆಂಟಲ್
ನೀಡುವ ವಿಧಗಳು: ಚಿಕನ್ ಲಿವರ್ ಟೋಸ್ಟ್, ಬೇಕನ್ ಆಮ್ಲೆಟ್, ಮಶ್ರೂಮ್ ಟೋಸ್ಟ್, ಹ್ಯಾಮ್ ಸ್ಯಾಂಡ್ವಿಚ್, ವೆಜಿಟೇಬಲ್ ಕಟ್ಲೆಟ್, ಸ್ಪ್ಯಾನಿಷ್ ಆಮ್ಲೆಟ್
ಸ್ಥಳ: 39, ಸೇಂಟ್ ಮಾರ್ಕ್ಸ್ ರಸ್ತೆ, ಬೆಂಗಳೂರು 560001
ಸಮಯ: ಬೆಳಿಗ್ಗೆ 9 ರಿಂದ ಸಂಜೆ 7:30, ಸೋಮವಾರದಿಂದ ಭಾನುವಾರ
ಎರಡಕ್ಕೆ ವೆಚ್ಚ: 950 ರೂ.
ಶ್ರೀ ರಾಘವೇಂದ್ರ ಸ್ಟೋರ್ಸ್ (Sri Raghavendra Stores)
ಮಲ್ಲೇಶ್ವರಂ ರೈಲ್ವೆ ನಿಲ್ದಾಣದ ಬಳಿ ಇರುವ ರಾಘವೇಂದ್ರ ಸ್ಟೋರ್ಸ್ ಪ್ರಸಿದ್ಧ ಉಪಾಹಾರ ತಾಣವಾಗಿದ್ದು, ಗ್ರಾಹಕರು ಕೈಗೆಟುಕುವ ದರದಲ್ಲಿ ರುಚಿಕರವಾದ ಉಪಾಹಾರವನ್ನು ಸವಿಯಲು ಪ್ರತಿದಿನ ಬರುತ್ತಾರೆ. ರೆಸ್ಟೋರೆಂಟ್ ವಿಶೇಷವಾಗಿ ಗರಿಗರಿಯಾದ ವಡಾಗಳು ಮತ್ತು ಶಾವಿಗೆ ಭಾತ್ ಮತ್ತು ಚೌ ಚೌ ಭಾತ್ ನಂತಹ ವಿವಿಧ ಭಕ್ಷ್ಯಗಳಿಗೆ ಹೆಸರುವಾಸಿಯಾಗಿದೆ.
ಪಾಕಪದ್ಧತಿಗಳು: ಕಾಂಟಿನೆಂಟಲ್ ಬ್ರೇಕ್ ಫಾಸ್ಟ್
ನೀಡುವ ವಿಧಗಳು: ಚೌ ಚೌ ಭಾತ್, ಇಡ್ಲಿ ಚಟ್ನಿ, ಫಿಲ್ಟರ್ ಕಾಪಿ, ಖಾರಾ ಭಾತ್, ಉಪ್ಮಾ
ಸ್ಥಳ: ಮಣಿಪಾಲ್ ನಾರ್ತ್ ಸೈಡ್ ಹಾಸ್ಪಿಟಲ್ ಎದುರು, ಮಲ್ಲೇಶ್ವರಂ ರೈಲ್ವೆ ನಿಲ್ದಾಣದ ಬಳಿ, ಮಲ್ಲೇಶ್ವರಂ, ಬೆಂಗಳೂರು 560055
ಸಮಯ: ಬೆಳಿಗ್ಗೆ 6 ರಿಂದ ಸಂಜೆ 7, ಸೋಮವಾರದಿಂದ ಭಾನುವಾರ
ಎರಡಕ್ಕೆ ವೆಚ್ಚ: 100 ರೂ.
ಸೆಂಟ್ರಲ್ ಟಿಫಿನ್ ರೂಮ್ (CTR)
ಈ ಪ್ರಸಿದ್ಧ ಉಪಾಹಾರ ಗೃಹದಲ್ಲಿ ದೋಸೆಯನ್ನು ಪ್ರಯತ್ನಿಸದೆ ಮಲ್ಲೇಶ್ವರಂ ಪ್ರವಾಸವು ಪೂರ್ಣಗೊಳ್ಳುವುದಿಲ್ಲ. ಇಲ್ಲಿನ ಬೆಣ್ಣೆ ಮಸಾಲಾ ದೋಸೆ ವಿಶೇಷವಾಗಿ ನಾಲಗೆ ಚಪ್ಪರಿಸುವಂತೆ ಮಾಡುತ್ತೆ
ಪಾಕಪದ್ಧತಿಗಳು: ದಕ್ಷಿಣ ಭಾರತೀಯ
ನೀಡುವ ವಿಧಗಳು: ಗೋಳಿ ಬಜೆ, ರವೆಇಡ್ಲಿ, ಬೆಣ್ಣೆ ದೋಸೆ, ಕೊತ್ತಂಬರಿ ಚಟ್ನಿ, ಇಡ್ಲಿ ಚಟ್ನಿ, ಮದ್ದೂರು ವಡಾ
ಸ್ಥಳ: 7ನೇ ಕ್ರಾಸ್, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ, ಬೆಂಗಳೂರು 560055
ಸಮಯ: ಬೆಳಿಗ್ಗೆ 7:30 ರಿಂದ ರಾತ್ರಿ 9:30, ಸೋಮವಾರದಿಂದ ಭಾನುವಾರ
ಎರಡಕ್ಕೆ ವೆಚ್ಚ: 150 ರೂ.
ತಾಜಾ ತಿಂಡಿ ( Taaza Thindi)
ಇದು ಹಳೆಯ ಸಂಸ್ಥೆಯಾಗಿದ್ದು, ರೆಸ್ಟೋರೆಂಟ್ ಅನ್ನು ಹೆಚ್ಚು ಸಂಘಟಿತ ಮತ್ತು ಪರಿಣಾಮಕಾರಿಯಾಗಿ ಮಾಡಲು ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಆಹಾರವು ಕೈಗೆಟುಕುವ ದರದಲ್ಲಿ ರುಚಿಕರವಾಗಿ ಸಿಗುತ್ತೆ, ಇಲ್ಲಿನ ಮೆನು ದೋಸೆ, ಇಡ್ಲಿ, ವಡಾ, ಕೇಸರಿ ಬಾತ್, ಟೀ ಮತ್ತು ಕಾಫಿಗೆ ಸೀಮಿತವಾಗಿದೆ.
ಪಾಕಪದ್ಧತಿಗಳು: ದಕ್ಷಿಣ ಭಾರತೀಯ
ನೀಡುವ ವಿಧಗಳು: ಇಡ್ಲಿ, ವಡಾ, ಕೇಸರಿ ಬಾತ್,
ಸ್ಥಳ: 1004, 26ನೇ ಮೇನ್, 4ನೇ ಟಿ ಬ್ಲಾಕ್, ಎಚ್ಡಿಎಫ್ಸಿ ಬ್ಯಾಂಕ್ ಎದುರು, ಜಯನಗರ, ಬೆಂಗಳೂರು 560041
ಸಮಯ: ಬೆಳಿಗ್ಗೆ 7:30 ರಿಂದ ರಾತ್ರಿ 9:30, ಸೋಮವಾರದಿಂದ ಭಾನುವಾರ
ಎರಡಕ್ಕೆ ವೆಚ್ಚ: 100 ರೂ.
ದಿ ಬೆಂಗಳೂರು ಕೆಫೆ ( The Bengaluru Cafe)
ಬೆಚ್ಚಗಿನ ವಾತಾವರಣ ಮತ್ತು ಗಮನಾರ್ಹ ಮೆನುವನ್ನು ಹೊಂದಿರುವ ಬೆಂಗಳೂರು ಕೆಫೆ ಭೇಟಿ ನೀಡಲು ಆಹ್ಲಾದಕರ ಸ್ಥಳವಾಗಿದೆ. ಇಲ್ಲಿ ಭಾರತೀಯ, ಇಟಾಲಿಯನ್ ಮತ್ತು ಚೈನೀಸ್ ಪಾಕಪದ್ಧತಿ ಸೇರಿದಂತೆ ವಿವಿಧ ಸಸ್ಯಾಹಾರಿ ಭಕ್ಷ್ಯಗಳನ್ನು ನೀಡುತ್ತಾರೆ, ಜೊತೆಗೆ ಫ್ಯೂಷನ್ ತಿಂಡಿಗಳು, ಚಾಟ್ಗಳು ಸಹ ಲಭ್ಯವಿದೆ.
ಪಾಕಪದ್ಧತಿಗಳು: ಕಾಂಟಿನೆಂಟಲ್
ನೀಡುವ ವಿಧಗಳು: ಗೆಣಸು ಸೂಪ್, ನಿಂಬೆ ಕೊತ್ತಂಬರಿ ಮಸಾಲೆ ಸೂಪ್, ತಂದೂರಿ ಅನಾನಸ್, ಲಿಟ್ಟಿ ಚೋಖಾ, ತವಾ ಪುಲಾವ್, ವುಡ್ ಫೈರ್ ಪಿಜ್ಜಾ
ಸ್ಥಳ: 4, ಕೆಎಚ್ ರಸ್ತೆ, ಡಬಲ್ ರೋಡ್ ಬಳಿ, ಶಾಂತಿ ನಗರ, ಬೆಂಗಳೂರು 560027
ಸಮಯ: ಮಧ್ಯಾಹ್ನ 12 ರಿಂದ ಬೆಳಿಗ್ಗೆ 1, ಸೋಮವಾರದಿಂದ ಭಾನುವಾರ
ಎರಡಕ್ಕೆ ವೆಚ್ಚ: 900 ರೂ.