ಮನೆಯಲ್ಲೇ ಪರ್ಫೆಕ್ಟ್ ಮೊಸರು ತಯಾರಿಸಲು ಇಲ್ಲಿವೆ ಉಪಯುಕ್ತ ಟಿಪ್ಸ್
ಬಹಳಷ್ಟು ಜನ ಮನೆಯಲ್ಲೇ ಮೊಸರು ತಯಾರಿಸುತ್ತಾದರೂ ಇದರಲ್ಲಿ ಹೆಚ್ಚು ಹುಳಿ, ಸಪ್ಪೆ ಮೊಸರು ಹೀಗೆ ಭಿನ್ನವಿರುತ್ತದೆ. ಪರಿಮಳಯುಕ್ತ, ಸ್ವಾದಿಷ್ಟ ಮೊಸರು ತಯಾರಿಸೋಕೆ ಇಲ್ಲಿವೆ ಕೆಲವು ಉಪಯುಕ್ತ ಟಿಪ್ಸ್.
ಮನೆಯಲ್ಲಿ ಸ್ವಲ್ಪ ಮೊಸರು ಬೇಕೇ ಬೇಕು. ಚಡ್ನಿ ಪುಡಿಗೆ ಸೇರಿಸಿ ದೋಸೆ ತಿನ್ನೋಕೆ, ಸ್ವಲ್ಪ ಮೊಸರನ್ನ ಮಾಡೋಕೆ, ಊಟದ ನಂತ್ರ ಸಿಹಿ ಜೊತೆ ಸೇರಿಸಿ ತಿನ್ನೋಕೆ.. ಹೀಗೆ ಎಲ್ಲದಕ್ಕೂ ಮೊಸರು ಬೇಕು.
ನಮ್ಮ ಆಹಾರವನ್ನು ಪರಿಪೂರ್ಣವಾಗಿಸುವುದು ಒಂದು ಕಪ್ ಮೊಸರು. ಮನೆಯಲ್ಲೇ ಮಾಡೋ ಮೊಸರಿಗೆ ವಾವ್ ಎನಿಸುವ ಪರಿಮಳವೂ ಇರುತ್ತೆ.
ಬಹಳಷ್ಟು ಜನ ಮನೆಯಲ್ಲೇ ಮೊಸರು ತಯಾರಿಸುತ್ತಾದರೂ ಇದರಲ್ಲಿ ಹೆಚ್ಚು ಹುಳಿ, ಸಪ್ಪೆ ಮೊಸರು ಹೀಗೆ ಭಿನ್ನವಿರುತ್ತದೆ.
ಪರಿಮಳಯುಕ್ತ, ಸ್ವಾದಿಷ್ಟ ಮೊಸರು ತಯಾರಿಸೋಕೆ ಇಲ್ಲಿವೆ ಕೆಲವು ಉಪಯುಕ್ತ ಟಿಪ್ಸ್.
ಹಾಲು: ದಪ್ಪ ಮೊಸರಿನ ಹಿಂದಿನ ಸೀಕ್ರೆಟ್ ಹೋಲ್ ಫ್ಯಾಟ್ ಹಾಲು. ಚಳಿಗಾಲದ ಸಂದರ್ಭ ಹಾಲಿನ ಗುಣದಿಂದ ಮೊಸರು ಒಡೆಯುವ ಸಾಧ್ಯತೆ ಇದೆ. ಹಾಲನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು.
ಮಿಕ್ಸಿಂಗ್: ಹಾಲಿಗೆ ಮೊಸರು ಸೇರಿಸಿ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ 1-2 ಚಮಚ ಮೊಸರಿದ್ದರೂ ಸಾಕು. ಎರಡೂ ಚೆನ್ನಾಗಿ ಮಿಕ್ಸ್ ಆಗಲಿ. ಇದಕ್ಕೆ ಅಂಗಡಿಯ ಮೊಸರು ಸೇರಿಸಿದರೆ ಫಲ ಸಿಗದು. ಇದು ಮೊಸರಿಗೆ ಅಂಟು ಕೊಡುತ್ತದೆ.
ಹಾಲು ಮಿಶ್ರಣ: ಹಾಲನ್ನು ಎರಡು ಪಾತ್ರೆ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕನಿಷ್ಠ 6-7 ಸಲ ಮಿಕ್ಸ್ ಮಾಡಿ.
ಬಿಸಿ ಟೆಂಪರೇಚರ್: ಮೊಸರು ಮಾಡಲು ನೀವು ಯಾವಾಗಲೂ ಬೆಚ್ಚಗಿನ ಹಾಲನ್ನು ಬಳಸಬೇಕು. ಇದು ಬಿಸಿಯಾಗಿ ಕುದಿಯಬಾರದು ಅಥವಾ ತಂಪಾಗಿಯೂ ಇರಬಾರದು. ಬೇಸಿಗೆಯಲ್ಲಿ ಸ್ವಲ್ಪ ತಣ್ಣಗಿನ ಹಾಲನ್ನು ಬಳಸಿ, ಚಳಿಗಾಲದಲ್ಲಿ ಬೆಚ್ಚಗಿನ ಹಾಲು ಒಳ್ಳೆಯದು.
Green Chilly
ಕಂಟೇನರ್: ಮೊಸರು ಮಾಡಲು ಸ್ಟೆನ್‌ಲೆಸ್ ಸ್ಟೀಲ್ ಉತ್ತಮ. ಮಣ್ಣಿನ ಮಡಕೆಯನ್ನು ಸಹ ಬಳಸಬಹುದು. ಇದಕ್ಕಾಗಿ ಬಹಳಷ್ಟು ಜನ ಚೀನಾ ಭರಣಿ ಪಾತ್ರೆ ಮತ್ತು ಸೆರಾಮಿಕ್ ಪಾತ್ರೆ ಸಹ ಬಳಸುತ್ತಾರೆ. ನಿಮಗೆ ಸೂಕ್ತವಾದದನ್ನು ಆರಿಸಿಕೊಳ್ಳಬಹುದು.
ಬೆಚ್ಚಗಿನ ಜಾಗದಲ್ಲಿ ತೆಗೆದಿಡಿ: ಚೆನ್ನಾಗಿ ಬೆರೆಸಿ ಪಾತ್ರೆಯಲ್ಲಿ ಹಾಕಿದ ನಂತರ ಬೆಚ್ಚಗೆ ಸಂಗ್ರಹಿಸಬೇಕು. ನೀವು ಕಂಟೇನರ್ ಅನ್ನು ದಪ್ಪ ಬಟ್ಟೆಯಿಂದ ಕಟ್ಟಬಹುದು. ಅಥವಾ ದೊಡ್ಡ ಬಟ್ಟಲಿನಲ್ಲಿ ನೀವು ಸ್ವಲ್ಪ ಬೆಚ್ಚಗಿನ ನೀರನ್ನು ಸುರಿಯಬಹುದು ಮತ್ತು ನಿಮ್ಮ ಮೊಸರು ಪಾತ್ರೆಯನ್ನು ಬಟ್ಟಲಿನಲ್ಲಿ ಇರಿಸಿ ಹೆಚ್ಚು ಕಾಲ ಉಷ್ಣತೆಯನ್ನು ಉಳಿಸಿಕೊಳ್ಳಬಹುದು.
ಒಮ್ಮೆ ಇಟ್ಟ ಮೇಲೆ ಪದೇ ಪದೇ ಮುಟ್ಟಬೇಡಿ: ಮೊಸರಿನ ಪಾತ್ರೆ ಮುಟ್ಟದೆ ಬಿಡಿ. ಒಮ್ಮೆ ಬೆಚ್ಚಗಿನ ಸ್ಥಳದಲ್ಲಿ ಇರಿಸಿ, ಸುಮಾರು 6-7 ಗಂಟೆಗಳ ಕಾಲ ಬಿಡಿ. ಮೊಸರು ರೆಡಿಯಾಗುವುದಕ್ಕೆ ತೆಗೆದುಕೊಳ್ಳುವ ಸಮಯ ವಾತಾವರಣದ ಉಷ್ಣತೆ ಮೇಲೆ ಅವಲಂಬಿತವಾಗಿರುತ್ತದೆ.