MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • Ugadi 2023: ಹಬ್ಬಕ್ಕೆ ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟೋದ್ಯಾಕೆ?

Ugadi 2023: ಹಬ್ಬಕ್ಕೆ ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟೋದ್ಯಾಕೆ?

ಎಲ್ಲಾ ಪ್ರಮುಖ ಹಿಂದೂ ಹಬ್ಬಗಳು ಮತ್ತು ಮಂಗಳಕರ ಸಂದರ್ಭಗಳಲ್ಲಿ ಮನೆಗಳ ಬಾಗಿಲುಗಳನ್ನು ಮಾವಿನ ಎಲೆಗಳಿಂದ ಅಲಂಕರಿಸುವುದನ್ನು ನೀವು ನೋಡಿರಬಹುದು. ಇದರ ಹಿಂದಿರುವ ಕಾರಣವೇನು?

2 Min read
Vinutha Perla
Published : Mar 22 2023, 01:06 PM IST| Updated : Mar 22 2023, 01:09 PM IST
Share this Photo Gallery
  • FB
  • TW
  • Linkdin
  • Whatsapp
18

ಹಿಂದೂ ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳು, ಊರ ಹಬ್ಬ, ಜಾತ್ರೆ, ಸಾಮೂಹಿಕ ಸಮಾರಂಭಗಳು ಅಥವಾ ಮನೆಗಳಲ್ಲಿ ಮದುವೆ, ಮುಂಜಿ, ನಾಮಕರಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಸದಾ ನಡೆಯುತ್ತಲೇ ಇರುತ್ತವೆ. ಇಂಥಾ ಕಾರ್ಯಕ್ರಮವಿದ್ದಾಗ ಸಾಮಾನ್ಯವಾಗಿ ಎದ್ದು ಕಾಣುವ ಅಂಶವೆಂದರೆ ಮನೆಯ ಮುಂದೆ ರಂಗೋಲಿ ಹಾಗೂ ಬಾಗಿಲಿಗೆ ಮಾವಿನ ತಳಿರು ತೋರಣ. 

28

ಹಬ್ಬದ ಸಂದರ್ಭದಲ್ಲಿ ಊರ ಬಾಗಿಲು, ದೇವಸ್ಥಾನದ ಮುಖ್ಯದ್ವಾರ, ಮನೆಯ ಮುಂಬಾಗಿಲು, ದೇವರ ಕೋಣೆ ಮೊದಲಾದ ಕಡೆ ಮಾವಿನ ಎಲೆಯ ತೋರಣವನ್ನು ಕಟ್ಟುತ್ತಾರೆ. ಇದೆಲ್ಲಾ ಇಲ್ಲದೆ ಹಬ್ಬ ಕಳೆಗಟ್ಟುವುದೇ ಇಲ್ಲ. ಎಲ್ಲಾ ಶುಭ ಕಾರ್ಯಕ್ರಮಗಳಲ್ಲಿಯೂ ಮಾವಿನ ತಳಿರು ತೋರಣ ಕಣ್ಣಿಗೆ ಎದ್ದು ಕಾಣುತ್ತಿರುತ್ತದೆ ಮತ್ತು ಇದು ಅತ್ಯಂತ ಮಹತ್ವವನ್ನು ಪಡೆದಿರುತ್ತದೆ. ಹಾಗಾದರೆ ಮಾವಿನ ಎಲೆಯ ತೋರಣವನ್ನೇ ಏಕೆ ಕಟ್ಟಬೇಕು? ಅದರ ಮಹತ್ವವೇನು?

38
Image: Getty Images

Image: Getty Images

ಹಬ್ಬದ ಸಂಭ್ರಮ
ಹಬ್ಬ ಹರಿದಿನ ಉಲ್ಲಾಸಕರವಾಗುವುದೇ ನಾವು ಮಾಡುವ ಕೆಲವು ಚಟುವಟಿಕೆಗಳಿಂದ. ಅದರಲ್ಲಿ ಮನೆ ಮುಂದೆ ರಂಗೋಲಿ ಹಾಕುವುದು, ಬಾಗಿಲಿಗೆ ತೋರಣ ಕಟ್ಟುವುದು ಮೊದಲಾದ ವಿಚಾರಗಳು ಸೇರುತ್ತವೆ. ಮನೆಯ ಮುಂಬಾಗಿಲು ಮತ್ತು ದೇವರ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟುವುದರಿಂದ ಮನೆಯಲ್ಲಿ ಹಬ್ಬದ ವಾತಾವರಣ ಮೂಡಿ ಎಲ್ಲರ ಮನಸ್ಸು ಉತ್ಸಾಹ ಮತ್ತು ಆಹ್ಲಾದಕರವಾಗಿಡಲು ಸಹಾಯ ಮಾಡುತ್ತದೆ.

48

ಮನೆಯನ್ನು ಪ್ರವೇಶಿಸುತಿದ್ದಂತೆಯೇ ಹಚ್ಚ ಹಸಿರ ತೋರಣ ಕಣ್ಣಿಗೆ ತಂಪನ್ನು ನೀಡುತ್ತದೆ. ಮನಸ್ಸು ತಾಜಾತನವಾಗಿ ಮತ್ತು ಧನಾತ್ಮಕವಾಗಿ ಯೋಚಿಸಲು ಸಹಕಾರಿಯಾಗಿರುತ್ತದೆ.ಹಾಗೆಯೇ ಮನೆಯ ಬಾಗಿಲಿಗೆ ಮಾವಿನ ತಳಿರು ತೋರಣದ ಜೊತೆಗೆ ಬೇವಿನ ಸೊಪ್ಪಿನ ಎಲೆಯನ್ನು ಸಿಕ್ಕಿಸುವುದು ಶುಭ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಮಾವು ಮತ್ತು ಬೇವಿನ ಎಲೆಯಲ್ಲಿ ಔಷಧೀಯ ಗುಣಗಳು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ, ಮನೆಯ ದ್ವಾರದ ಮೂಲಕ ಪ್ರವೇಶಿಸುವ ಗಾಳಿಯೊಂದಿಗೆ ಮನೆಯೊಳಗೆಲ್ಲಾ ಹರಡಿ ಆರೋಗ್ಯ ದೃಷ್ಟಿಯಿಂದ ಮನೆಯಲ್ಲಿ ಉತ್ತಮ ವಾತಾವರಣ ಮೂಡುತ್ತದೆ.

58

ದೇವರ ಅಂಗಗಳ ಸಂಕೇತ
ಪೂರ್ಣಕುಂಭ ಎಂಬ ಹಿಂದೂ ಆಚರಣೆಯನ್ನು ಪೂರ್ಣಗೊಳಿಸಲು ಆಚರಣೆಗಳ ಮೊದಲು ಮಾವಿನ ಮರದ ಎಲೆಗಳನ್ನು ನೀರಿನ ಮಡಕೆ (ಕಲಸ್ಕ್) ಮೇಲೆ ಇರಿಸಲಾಗುತ್ತದೆ. ಎಲೆಗಳು ದೇವರ ಅಂಗಗಳನ್ನು ಸಂಕೇತಿಸುತ್ತವೆ ಎಂದು ಹೇಳಲಾಗುತ್ತದೆ. ಮಾವಿನ ಎಲೆಗಳು ಲಕ್ಷ್ಮಿ ದೇವತೆಯನ್ನು ಸೂಚಿಸುತ್ತವೆ ಮತ್ತು ನಕಾರಾತ್ಮಕ ಶಕ್ತಿಯನ್ನು ದೂರವಿಡುತ್ತವೆ ಎಂದು ಹಿರಿಯರು ಹೇಳುತ್ತಾರೆ.

68

ಔಷಧೀಯ ಗುಣಗಳು
ಮಾವಿನ ಎಲೆಯಲ್ಲಿ ಆಂಟಿಬ್ಯಾಕ್ಟೀರಿಯಲ್ ಮತ್ತು ನಂಜುನಿರೋಧಕ ಗುಣಲಕ್ಷಣಗವೆ. ಇದನ್ನು ಹೊರತುಪಡಿಸಿ, ಹೆಚ್ಚಿನ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ವಿಶಿಷ್ಟ ಸಾಮರ್ಥ್ಯದ ಕಾರಣದಿಂದ ಮಾವಿನ ಎಲೆಗಳನ್ನು ದೊಡ್ಡ ಧಾರ್ಮಿಕ ಕೂಟಗಳು ಮತ್ತು ಹಬ್ಬಗಳ ಸಮಯದಲ್ಲಿ ಟೋರನ್ಸ್ ಅಥವಾ ಬಂಧನ್ವಾರ್ ಆಗಿ ಬಳಸಲಾಗುತ್ತದೆ.

78

ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಯು ಅತ್ಯಂತ ಹೆಚ್ಚು ಕಾಲ ಹಚ್ಚ ಹಸಿರಾಗಿರುತ್ತದೆ ಮತ್ತು ಮರದಿಂದ ಕಿತ್ತು ತಂದ ಬಹಳ ಕಾಲಗಳ ನಂತರವೂ ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ ಆಮ್ಲಜನಕವವನ್ನು ಉತ್ಪತ್ತಿ ಮಾಡುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಗಳನ್ನೇ ತೋರಣಕ್ಕಾಗಿ ಬಳಸುತ್ತಾರೆ. 

88

ಶುಭ-ಸಮಾರಂಭಗಳಲ್ಲಿ ಅತಿ ಹೆಚ್ಚಿನ ಜನರು ಒಂದೆಡೆ ಸೇರಿದಾಗ, ಜನದಟ್ಟಣೆಯಿಂದ ಆಮ್ಲಜನಕದ ಕೊರತೆ ಉಂಟಾಗಬಹುದು ಹಾಗಾಗಿ ಅಂತಹ ಆಮ್ಲಜನಕದ ಕೊರತೆಯನ್ನು ನೀಗಿಸಲು ಸಮಾರಂಭದ ಮಂಟಪದ ಸುತ್ತಮುತ್ತಲೂ ತೋರಣ ಕಟ್ಟುವ ಸಂಪ್ರದಾಯವಿದೆ. ಅದರಲ್ಲೂ ಮಾವಿನ ಎಲೆಯನ್ನೇ ತೋರಣವನ್ನಾಗಿ ಏಕೆ ಕಟ್ಟುತ್ತಾರೆಂದರೆ 

About the Author

VP
Vinutha Perla
ಹಬ್ಬ
ಆರೋಗ್ಯ
ಯುಗಾದಿ ಹಬ್ಬ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved