Astrology Tips: ಕನಸಿನಲ್ಲಿ ಆಹಾರ ತಿಂದಂತೆ ಕಂಡ್ರೆ ನಿಮ್ಮ ಭವಿಷ್ಯ ಅದ್ಭುತವಾಗಿರುತ್ತೆ!
ಕನಸಿನಲ್ಲಿ ಕೆಲವೊಂದು ವಿಷ್ಯಗಳನ್ನು ನೋಡುವುದು ನಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಕೆಲವು ಚಿಹ್ನೆಗಳನ್ನು ನೀಡುತ್ತದೆ. ಕನಸಿನಲ್ಲಿ ನೀವು ಆಹಾರವನ್ನು ತಿನ್ನುವುದನ್ನು ನೋಡಿದರೆ, ಅದು ನಿಮ್ಮ ಜೀವನದ ಅನೇಕ ಘಟನೆಗಳ ಬಗ್ಗೆ ಹೇಳುತ್ತದೆ. ಅಂತಹ ಕನಸಿನ ಅರ್ಥ ಏನಿರುತ್ತೆ ಅನ್ನೋದನ್ನು ನೋಡೋಣ.
ತಿನ್ನುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಕನಸಿನಲ್ಲಿ ನೀವು ಅಥವಾ ಬೇರೆ ಯಾರಾದರೂ ತಿನ್ನುವುದನ್ನು ನೋಡಿದರೆ ಅದು ವಿಭಿನ್ನ ಅರ್ಥಗಳನ್ನು ಹೊಂದಿರುತ್ತದೆ ಎಂದು ನಂಬಲಾಗಿದೆ. ಹೆಚ್ಚಿನ ಜನರು ದೈನಂದಿನ ಜೀವನದೊಂದಿಗೆ ಏನಾದರೂ ಸಂಬಂಧ ಹೊಂದಿರುವ ಕನಸುಗಳನ್ನು ನೋಡುತ್ತಾರೆ. ಕನಸಿನಲ್ಲಿ ತಿನ್ನೋದು (dream of eating) ಕಂಡ್ರೆ ಅದರ ಅರ್ಥ ಏನು ಅನ್ನೋದನ್ನು ನೋಡೋಣ.
ಕನಸುಗಳು ಕೆಲವು ಸಮಯದಲ್ಲಿ ಭವಿಷ್ಯವನ್ನು ಸಹ ಸೂಚಿಸುತ್ತವೆ ಎಂದು ನಂಬಲಾಗಿದೆ. ಜ್ಯೋತಿಷ್ಯದಲ್ಲಿ, ಕೆಲವು ಕನಸುಗಳು ನಿಮ್ಮ ಜೀವನದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿವೆ. ನೀವು ಕನಸಿನಲ್ಲಿ ಆಹಾರವನ್ನು ಸೇವಿಸಿದರೆ ಭವಿಷ್ಯದ ಜೀವನಕ್ಕೆ (future life) ಏನಾಗುತ್ತದೆ ಅನ್ನೋದನ್ನು ತಿಳಿಯೋಣ.
ಆಹಾರ ಸೇವಿಸುವಂತೆ ಕನಸು ಕಂಡ್ರೆ ಅದು ಪ್ರೀತಿಯ ಸಂಕೇತವಾಗಿದೆ
ಕನಸಿನಲ್ಲಿ ಕೆಲವು ರುಚಿಕರವಾದ ಆಹಾರವನ್ನು ತಿನ್ನುವುದು ಬೇರೊಬ್ಬರ ಮೇಲಿನ ನಿಮ್ಮ ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ನಿಜವಾದ ಪ್ರೀತಿ ಮತ್ತು ಕಾಳಜಿಯ ಸ್ವಭಾವವನ್ನು ಸೂಚಿಸುತ್ತದೆ. ಈ ಕನಸು ನೀವು ತೃಪ್ತಿಯಾಗಿದ್ದೀರಿ ಎಂದು ಹೇಳುತ್ತೆ.
ನೀವು ತಿನ್ನುವಾಗ ಸ್ವಯಂ ತೃಪ್ತಿಯನ್ನು ಪಡೆಯುತ್ತೀರಿ ಅಲ್ವಾ?, ಅದಕ್ಕಾಗಿಯೇ ಕನಸಿನಲ್ಲಿ ತಿನ್ನೋದನ್ನು ನೋಡುವುದು ಸಹ ಮನಸ್ಸು ಮತ್ತು ದೇಹದ ತೃಪ್ತಿಯನ್ನು ಸೂಚಿಸುತ್ತದೆ. ಅಂತಹ ಕನಸನ್ನು ಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ನೀವು ಪ್ರಸ್ತುತ ಜೀವನದ ಎಲ್ಲಾ ಅಗತ್ಯಗಳನ್ನು ಚೆನ್ನಾಗಿ ಪೂರೈಸುತ್ತಿದ್ದೀರಿ. ನಿಮ್ಮ ಮುಂದಿನ ಜೀವನ ಸಂತೋಷದಿಂದ ಕೂಡಿರಲಿದೆ ಅನ್ನೋದನ್ನು ಸೂಚಿಸುತ್ತೆ.
ಕನಸಿನಲ್ಲಿ ಆಹಾರ ನೋಡೋದು ನೀವು ಆರಾಮಾಗಿದ್ದೀರಿ ಅನ್ನೋದರ ಸೂಚಕ
ನೀವು ಕನಸಿನಲ್ಲಿ ತಿನ್ನುತ್ತಿದ್ದರೆ ನೀವು ನಿಜ ಜೀವನದಲ್ಲಿ ತುಂಬಾ ಸಂತೋಷವಾಗಿದ್ದೀರಿ ಮತ್ತು ನಿಮ್ಮ ಸುತ್ತಲೂ ಯಾವುದೇ ಸಮಸ್ಯೆ ಹೊಂದಿಲ್ಲ, ಆರಾಮದಾಯಕ ಜೀವನ ನಡೆಸುತ್ತೀರಿ ಎಂದರ್ಥ. ಅಂತಹ ಕನಸನ್ನು ನಿಮ್ಮ ಜೀವನದಲ್ಲಿ ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಕನಸಿನಲ್ಲಿ ಅಡುಗೆ ಮಾಡುವುದು
ಅಡುಗೆ ಮಾಡುವ (dream of cooking) ಕನಸು ನಿಮ್ಮ ಆಸೆಗಳ ಈಡೇರಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ನೀವು ಕನಸಿನಲ್ಲಿ ಇತರರಿಗಾಗಿ ಅಡುಗೆ ಮಾಡುತ್ತಿದ್ದರೆ, ಅದು ನೀವು ನಿಮ್ಮೊಂದಿಗೆ ಇತರರ ಅಗತ್ಯಗಳನ್ನು ಪೂರೈಸುತ್ತಿದ್ದೀರಿ ಎಂಬುದರ ಸಂಕೇತವಾಗಿದೆ. ಈ ಕನಸು ನೀವು ಇತರರ ಬಗ್ಗೆ ಕಾಳಜಿ ಹೊಂದಿದ್ದೀರಿ ಅನ್ನೋದನ್ನು ಸೂಚಿಸುತ್ತೆ. ನಿಮ್ಮ ಸುತ್ತಲಿನ ಜನರ ಎಲ್ಲಾ ಆಸೆಗಳನ್ನು ಪೂರೈಸಲು ನಿಮಗೆ ಸಾಧ್ಯವಾಗುತ್ತದೆ ಎನ್ನೋದನ್ನು ಸಹ ಇದು ಸೂಚಿಸುತ್ತೆ.
ಆಹಾರದಾನ
ನೀವು ಕನಸಿನಲ್ಲಿ ಬಡ ವ್ಯಕ್ತಿಗೆ ಆಹಾರವನ್ನು ನೀಡುತ್ತಿದ್ದರೆ, ಈ ಕನಸು ಕೆಲವು ಮಿಶ್ರ ಪರಿಣಾಮಗಳನ್ನು ಬೀರಬಹುದು. ಕನಸಿನಲ್ಲಿ ಆಹಾರ ದಾನ ಮಾಡುವುದರಿಂದ ನೀವು ನಿಜ ಜೀವನದಲ್ಲಿಯೂ ಯಾರಿಗಾದರೂ ಏನನ್ನಾದರೂ ದಾನ ಮಾಡಬೇಕು ಎಂದು ಹೇಳುತ್ತದೆ. ಇದು ನಿಮ್ಮ ಪೂರ್ವಜರು ನಿಮ್ಮಿಂದ ಆಹಾರವನ್ನು ಬಯಸುತ್ತಿದ್ದಾರೆ ಎಂಬುದರ ಸಂಕೇತವೂ ಆಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಬಡ ವ್ಯಕ್ತಿಗೆ ಆಹಾರವನ್ನು ನೀಡಬೇಕು.
ಕನಸಿನಲ್ಲಿ ಆಹಾರವನ್ನು ಕೇಳುವುದು
ಕನಸಿನಲ್ಲಿ ನೀವು ಯಾರಿಂದಲಾದರೂ ಆಹಾರಕ್ಕೆ (asking food with others) ಬೇಡುತ್ತಿದ್ದರೆ, ನಿಮ್ಮ ಕೆಲವೊಂದು ಆಸೆಗಳು ಪೂರೈಸಿಲ್ಲ ಅನ್ನೋದನ್ನು ಇದು ಸೂಚಿಸುತ್ತೆ. ಆದರೆ ಅದನ್ನು ಪೂರೈಸಲು ನಿಮಗೆ ಸಾಧ್ಯವಾಗಿಲ್ಲ ಎಂದು ಅರ್ಥಮಾಡಿಕೊಳ್ಳಿ. ಆಹಾರವನ್ನು ಕೇಳುವುದು ನಿಮ್ಮ ಅದೇ ಬಯಕೆಯನ್ನು ಸೂಚಿಸುತ್ತದೆ. ಆದರೆ ನೀವು ಆಹಾರವನ್ನು ಕೇಳಿದಾಗ ನಿಮಗೆ ಆಹಾರ ಸಿಕ್ಕರೆ, ನಿಮ್ಮ ಆಸೆ ಶೀಘ್ರದಲ್ಲೇ ಈಡೇರುತ್ತದೆ ಎಂದು ಅರ್ಥಮಾಡಿಕೊಳ್ಳಿ.