ವೈಕುಂಠ ಏಕಾದಶಿ ದಿನ ಯಾಕೆ ಉಪವಾಸ ಮಾಡುತ್ತಾರೆ?

First Published Dec 25, 2020, 12:06 PM IST

ವೈಕುಂಠ ಏಕಾದಶಿ ಹಿಂದುಗಳಿಗೆ ಅದರಲ್ಲೂ ವೈಷ್ಣವ ಪಂತದವರಿಗೆ ಅತ್ಯಂತ ಒಳ್ಳೆಯ ದಿನ ಎಂದು ಹೇಳುತ್ತಾರೆ. ಈ ದಿನ ಸ್ವರ್ಗದ ಅಥವಾ ವೈಕುಂಠದ ಬಾಗಿಲು ತೆರೆಯುತ್ತದೆ ಎಂಬ ಪ್ರತೀತಿ. ಇದು ಹೆಚ್ಚಾಗಿ ವರ್ಷಕೊಮ್ಮೆ ಬರುತ್ತದೆ ಅಥವಾ ಎರಡು ಬಾರಿ ಬರುವುದು ಉಂಟು. ಇದು ಹಿಂದು ಪಂಚಾಂಗ ಪ್ರಕಾರ ಮಾರ್ಗಶಿರ ಮಾಸದ ಶುಕ್ಲ ಪಕ್ಷ ಅಂದರೆ ಡಿಸೆಂಬರ್ ಅಥವಾ ಜನವರಿಯಲ್ಲಿ ಬರುತ್ತದೆ.  ಈ ವರ್ಷದ ವೈಕುಂಠ ಏಕಾದಶಿ ಡಿಸೆಂಬರ್ 25 ರಂದು ಇದೆ.

ವೈಕುಂಠ ಏಕಾದಶಿಯನ್ನು 'ಮೋಕ್ಷದ ಏಕಾದಶಿ' ಎನ್ನುತ್ತಾರೆ.ಈ ದಿನ ಎಲ್ಲ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ, ಯಜ್ಞ ಯಾಗಾದಿಗಳು ನಡೆಯುತ್ತದೆ. ಈ ದಿನ ಎಲ್ಲ ದೇವಾಲಯಗಳಲ್ಲಿ ವೈಕುಂಠದ ದ್ವಾರದ ರಚನೆಯನ್ನು ಮಾಡಿ ತೆರೆಯುತ್ತಾರೆ.ಈ ದಿನ ತೀರಿಕೊಂಡವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ.

ಕೆಲವರು ಈ ದಿನ ವಿಷ್ಣು ದೇವಾಲಯ ಈ ಸ್ವರ್ಗದ ಬಾಗಿಲನ್ನು ಪ್ರವೇಶಿಸಿ ಹೊರಬಂದರೆ ನಮ್ಮ ಸರ್ವ ಪಾಪಗಳು ನಾಶವಾಗುತ್ತದೆ ಎಂದು ಹೇಳುತ್ತಾರೆ. ಇದು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಆಚರಣೆಯಲ್ಲಿದೆ.

ವಿಷ್ಣು ಪುರಾಣದ ಪ್ರಕಾರ ಈ ದಿನ ಉಪವಾಸಮಾಡಿದರೆ ವರ್ಷದಲ್ಲಿ ಬರುವ 23 ಏಕಾದಶಿಗಳ ಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ವೈಷ್ಣವರಲ್ಲಿ ಏಕಾದಶಿ ಮಾಡಬೇಕು ಎಂದು ಇದೆ. ಆದರೆ ಮಾಡಲಾಗದವರು ಈ ಏಕಾದಶಿಗೆ ಉಪವಾಸ ಮಾಡಬಹುದು. ಏಕಾದಶಿಯ ದಿನ ಯಾವ ಆಹಾರ ತಿನ್ನಬೇಕು, ತಿನ್ನಬಾರದು ಎಂದು ತಿಳಿಸಿದ್ದಾರೆ. ಕಠಿಣ ಉಪವಾಸ ಮಾಡುವವರು ಇದ್ದಾರೆ. ಮಾಡಲಾಗದವರು ಹಣ್ಣು  ಹಾಲು ಕೆಲವರು ಸಾಬೂದಾನ, ಅವಲಕ್ಕಿ ತಿನ್ನುತ್ತಾರೆ.

ಉಪವಾಸ ಮಾಡುವವರು ಅಕ್ಕಿ, ದವಸಧಾನ್ಯ, ಬೇಳೆಕಾಳುಗಳು, ಈರುಳ್ಳಿ , ಬೆಳ್ಳುಳಿ, ಗೋಧಿ ಇವುಗಳನ್ನು ತಿನ್ನಬಾರದು

ಇಂದು ಆದಷ್ಟು ದೇವರ ಮಂತ್ರಗಳನ್ನು ಓದುವುದು, ಭಗವದ್ಗೀತೆ, ವಿಷ್ಣು ಸಹಸ್ರನಾಮ ಜಪಮಾಡುವುದು, ವಿಷ್ಣು ದೇವಾಲಯಗಳಿಗೆ ಭೇಟಿನೀಡುವುದು ಹಾಗು ಸೇವೆಗಳನ್ನು ಕೊಡುವುದು. ಅಲ್ಲದೆ ಉಪವಾಸ ವಿರುವುದು. ಬಹಳ ಒಳ್ಳೆಯದು ಎಂದು ಹೇಳುತ್ತಾರೆ.

ಎಲ್ಲದಕ್ಕೂ ಮುಖ್ಯವಾಗಿ ಈ ದಿನ ಯಾಕೆ ಉಪವಾಸ ಇರಬೇಕು ಎಂಬ ಪ್ರಶ್ನೆ ಅನೇಕರನ್ನು ಕಾಡಿರುತ್ತದೆ. ಸತ್ಯವೇನೆಂದರೆ ಧಾರ್ಮಿಕವಾಗಿ, ವೈಜ್ಞಾನಿಕವಾಗಿ ಹಿರಿಯರು ನಮ್ಮನ್ನ ಏಕಾದಶಿ ಮಾಡಲು ಪ್ರೋತ್ಸಾಹಿಸಲು ಕಾರಣವೂ ಇತ್ತು .

ನಮಗೆ ತಿಳಿದಿರುವ ಹಾಗೆ ಚಂದ್ರನಿಂದ ಸಮುದ್ರದ ಮೇಲೆ ಬಹಳ ಪರಿಣಾಮ ಬೀಳುವುದು ನೋಡಿದ್ದೇವೆ . ಹೇಗೆ ಹುಣ್ಣಿಮೆಯಂದು ಸಮುದ್ರದ ಅಲೆಗಳು ಎತ್ತರದಲ್ಲಿ ಅಪ್ಪಳಿಸಲು ಪ್ರಾರಂಭಿಸುತ್ತದೆ. ಹಾಗೆಯೇ ನಮ್ಮ ದೇಹ ಶೇಕಡಾ 60 % ನೀರಿನಿಂದಲೂ ಕೂಡಿದೆ. ಅಲ್ಲದೇ ದೇಹದಲ್ಲಿ ಲವಣಗಳ ಅಂಶಗಳು ಇವೆ ಈ ಕಾರಣದಿಂದಾಗಿ ಚಂದ್ರನ ಪ್ರಭಾವ ನಮ್ಮ ದೇಹದ ಮೇಲೆ ಅಲ್ಲದೇ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರುತ್ತದೆ.

ಹಾಗಾಗಿ ಹಿರಿಯರು ಏಕಾದಶಿಯಂದು ಉಪವಾಸವಿರುವಂತೆ ಸೂಚಿಸುತ್ತಾರೆ. ನಮ್ಮ ದೇಹದ ಬೇಡದ ಕಲ್ಮಶಗಳು ಹೊರಹಾಕಲು ಈ ಸಮಯ ಸಹಾಯ ಮಾಡುತ್ತದೆ. ಹಾಗಾಗಿ ಹುಣ್ಣಿಮೆಯ ಮೂರು ದಿನದ ಮೊದಲು ಅಂದರೆ ಏಕಾದಶಿಯಂದು ಉಪವಾಸ ಮಾಡಿದರೆ ಒಳ್ಳೆಯದು ಎನ್ನುತ್ತಾರೆ.

ಏಕಾದಶಿ ಉಪವಾಸ ಎಲ್ಲರು ಮಾಡಲೇ ಬೇಕು ಎಂಬ ಒತ್ತಾಯವಿಲ್ಲ. ಮಾಡಬೇಕು ಎನ್ನುವವರು ವರ್ಷದಲ್ಲಿ ಎರಡೂ ಮೂರು ಏಕಾದಶಿ ಮಾಡಿದರೆ ಒಳ್ಳೆಯದು ಎಂದು  ತಿಳಿದವರು ಎನ್ನುತ್ತಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?