ಕೇರಳದಲ್ಲಿ ಓಣಂ ಸಂಭ್ರಮ; ಹತ್ತು ದಿನಗಳ ಉತ್ಸವದಲ್ಲಿ ವಿಶೇಷತೆ ಏನು?
ಕೇರಳದ ಜನರ ಪ್ರೀತಿಯ ಹಬ್ಬ ಓಣಂ. ಇದನ್ನು ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ಇದನ್ನು ಸುಗ್ಗಿಯ ಹಬ್ಬ ಎಂದು ಕರೆಯಲಾಗುತ್ತದೆ.ಇದು ಕೇರಳದ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಏಕೈಕ ಹಬ್ಬ. ಹತ್ತು ದಿನಗಳ ಕಾಲ ಓಣಂ ಆಚರಣೆ ನಡೆಯಲಿದೆ. ಉತ್ತರ ಭಾರತದಲ್ಲಿ ದೀಪಾವಳಿ ಹಬ್ಬವನ್ನು ಹೇಗೆ ಆಚರಿಸಲಾಗುತ್ತದೆಯೋ ಅದೇ ರೀತಿ ದಕ್ಷಿಣ ಭಾರತದಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರಮುಖವಾಗಿ ಕೇರಳದಲ್ಲಿ ಇದನ್ನು ಹೆಚ್ಚಾಗಿ ಆಚರಿಸುತ್ತಾರೆ. ಇದನ್ನು ತಿರುವೋಣಂ ಎಂದು ಸಹ ಕರೆಯುತ್ತಾರೆ. 10 ದಿನಗಳ ಓಣಂ ಉತ್ಸವದಲ್ಲಿ ಯಾವ ರೀತಿ ಆಚರಣೆ ಮಾಡುತ್ತಾರೆ ಎಂಬ ಮಾಹಿತಿ ಇಲ್ಲಿದೆ.
ಅಥಂ
ಇದು ಓಣಂನ ಮೊದಲನೇ ದಿನ. ಅಥಂನ ದಿನ ಜನರು ತಮ್ಮ ಮನೆಯನ್ನು ಹಳದಿ ಹೂವುಗಳಿಂದ ಅಲಂಕಾರ ಮಾಡುತ್ತಾರೆ. ಈ ಹೂವುಗಳನ್ನು ಪೂಕಳಂ ಎಂದು ಕರೆಯಲಾಗುತ್ತದೆ.
ಚಿತಿರಾ
ಇದು ಹಬ್ಬದ ಎರಡನೇ ದಿನ. ಈ ದಿನದಂದು ಇಡೀ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಲಾಗುತ್ತದೆ. ಈ ದಿನ ಹಳದಿ ಹೂವಿನ ಜೊತೆ ಇನ್ನೊಂದು ಹೂವನ್ನು ಸೇರಿಸಿ ರಂಗೋಲಿ ಹಾಕಲಾಗುತ್ತದೆ.
ಚೋಡಿ
ಹಬ್ಬದ ಮೂರನೇ ದಿನವನ್ನು ಚೋಡಿ ಎಂದು ಕರೆಯುತ್ತಾರೆ. ಈ ದಿನದಂದು ಕುಟುಂಬ ಸದಸ್ಯರು ತಮ್ಮ ಆತ್ಮೀಯರನ್ನು ಭೇಟಿ ಮಾಡಿ ಉಡುಗೊರೆಗಳನ್ನು ಮತ್ತು ಆಭರಣಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಾಚರಣೆ ಮಾಡುತ್ತಾರೆ.
ವಿಶಾಖಂ
ಕೇರಳದ ಜನರ ಪ್ರೀತಿಯ ಹಬ್ಬ ಓಣಂ. ಈ ದಿನ ಹಬ್ಬದ ಪ್ರಮುಖ ದಿನಗಳಲ್ಲಿ ಒಂದು. ವಿಷಾಖಂ ದಿನದಂದು ಜನರು ಓಣಂ ಸದ್ಯಕ್ಕೆ ತಯಾರಿ ನಡೆಸುತ್ತಾರೆ.
ತ್ರಿಕೆಟ್ಟ
ಕೇರಳದಲ್ಲಿ ಹಬ್ಬದ ಆಚರಣೆಗಾಗಿ ಈ ದಿನ ಶಾಲೆಗಳು ಮುಚ್ಚಲಾಗುತ್ತದೆ ಮತ್ತು ಮಕ್ಕಳು ಹಬ್ಬದ ಪ್ರಾರ್ಥನೆಗಳನ್ನು ಸಿದ್ಧ ಮಾಡಿಕೊಳ್ಳುತ್ತಾರೆ.
ಅನಿಝಮ್
ಕೆರಳದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಏಕೈಕ ಹಬ್ಬಈ ದಿನದಂದು, ಹಾವು ದೋಣಿ ಓಟದ ಸ್ಪರ್ಧೆಯಾದ ವಲ್ಲಂಕಳಿ ಆರಂಭವಾಗುತ್ತದೆ.
ಉತ್ತರಾಡಂ
ಇದು ಹಬ್ಬದ ಕೊನೆಯ ದಿನದ ಹಿಂದಿನ ದಿನ. ಈ ದಿನ ತರಕಾರಿ ಮತ್ತು ಹಣ್ಣುಗಳಿಂದ ಆಹಾರ ಪದಾರ್ಥವನ್ನು ಸಿದ್ಧ ಮಾಡಿ, ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.
ಪೂರದಂ
ಓಣಂ ನ 8ನೇ ದಿನ ರಾಜ ಮಹಾಬಲಿ ಮತ್ತು ವಾಮನ ಮೂರ್ತಿಗಳನ್ನು ಭಕ್ತರು ಸ್ವಚ್ಛಗೊಳಿಸಿ ಹಬ್ಬದ ಆಚರಣೆ ಸಿದ್ಧತೆ ಮಾಡಿಕೊಳ್ಳುತ್ತಾರೆ.
ಮೂಲಂ
ಓಣಂ ಸದ್ಯ ಈ ದಿನ ಆರಂಭವಾಗುತ್ತದೆ. ಹಬ್ಬದ ಉತ್ಸಾಹವನ್ನು ಹೆಚ್ಚಿಸಲು ಜನರು ನೃತ್ಯ ಪ್ರದರ್ಶನಗಳನ್ನು ಮಾಡುವ ಮೂಲಕ ಈ ದಿನವನ್ನು ಆಚರಿಸುತ್ತಾರೆ.
ತಿರುವೋಣಂ
ಇದು ಹಬ್ಬದ ಪ್ರಮುಖ ದಿನ ಮತ್ತು ಬಹಳ ಪವಿತ್ರವಾದ ದಿನ ಕೂಡ ಹೌದು. ಈ ದಿನ ಹೆಚ್ಚಿನವರು ಇಪ್ಪತ್ತಾರು ಬಗೆಯ ಭಕ್ಷ್ಯವನ್ನು ಸಿದ್ಧಪಡಿಸಿ ಓಣಂ ಸದ್ಯವನ್ನು ಸವಿಯುತ್ತಾರೆ.