ಇಳಕಲ್ ಸೀರೆ ಉಟ್ಕ್ಕೊಂಡು... ನಾರಿಯ ಲುಕ್ ಹೆಚ್ಚಿಸೋ ದೇಸೀ ಸೀರೆ
First Published Dec 9, 2020, 6:25 PM IST
ಇಳಕಲ್ ಸೀರೆ ಸಾಂಪ್ರದಾಯಿಕ ಉಡುಗೆಯಲ್ಲಿ ಒಂದು. ಈ ಸೀರೆಯನ್ನು ಯಾವುದೇ ಮಹಿಳೆ ಸುಲಭದಲ್ಲಿ ಉಡಬಹುದಾದಂತ ಧಿರಿಸು. ಈ ಸೀರೆ ಉಡಲು ಹಗುರವಾಗಿರುವ ಕಾರಣ ಅಜ್ಜಿಯಂದಿರಿಗೂ ಅಚ್ಚುಮೆಚ್ಚು. ಈ ಸೀರೆಗೆ ಇಳಕಲ್ ಎಂಬ ಹೆಸರು ಬರಲು ಕಾರಣ ಕರ್ನಾಟಕಕದ ಬಾಗಲಕೋಟೆಯ ಇಳಕಲ್ ಎಂಬ ಸ್ಥಳ.

ಇಳ್ಕಲ್‌ನಲ್ಲಿ ನೇಕಾರರು ನೇಯ್ಗೆ ಹಾಕುವ ಕಾರಣ ಇದು ಕೈಮಗ್ಗ ಸೀರೆ. ಈ ಸೀರೆಯನ್ನು ಖಾಟನ್, ಸಿಲ್ಕ್, ಆರ್ಟ್ ಸಿಲ್ಕ್ ನಿಂದಲೂ ತಯಾರಿಸುತ್ತಾರೆ. ಇಳ್ಕಲ್ ಸೀರೆ ಭಾರತ ಸರ್ಕಾರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ವತಿಯಿಂದ ಜಿಯೋಗ್ರಫಿಕಲ್ ಇಂಡಿಕೇಷನ್ ಸಂಖ್ಯೆ 76 ನ್ನು ಹೊಂದಿದೆ. ಇದನ್ನು ಜಿ ಐ ಟ್ಯಾಗ್ ಎನ್ನುತ್ತಾರೆ.

ಈ ಟ್ಯಾಗ್ ಅನ್ನು ಸರ್ಕಾರ ಆಹಾರ ಕೃಷಿ ಉತ್ಪನ್ನ, ಕಸೂತಿ, ಕರಕುಶಲತೆ ಕೈಮಗ್ಗ ಉತ್ಪನ್ನಗಳಿಗೆ ಕೊಡುವ ಸಂಖ್ಯೆ. ಬೇರೆ ಬೇರೆ ರಾಜ್ಯಗಳಿಗೆ ಅಲ್ಲಿಯ ಉತ್ಪನ್ನಗಳ ಪ್ರಸಿದ್ಧಿಯ ಮೇರೆಗೆ ಕೊಡುವ ಸಂಖ್ಯೆ ಇದಾಗಿದೆ
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?