ಕಾಂಟ್ರವರ್ಸಿ ಸಾಕು, ಸುಮ್ಮನಿದ್ದು ನಟನಿಗೆ ಗೌರವ ಸಲ್ಲಿಸಿ: ಸುಶಾಂತ್ ಬಗ್ಗೆ ವಿದ್ಯಾ ಬಾಲನ್ ಹೇಳಿದ್ದಿಷ್ಟು..!
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಗ್ಗೆ ಬಾಲಿವುಡ್ ನಟಿ ವಿದ್ಯಾ ಬಾಲನ್ ಪ್ರತಿಕ್ರಿಯಿಸಿದ್ದಾರೆ. ಆತ್ಮಹತ್ಯೆ, ಬಾಲಿವುಡ್ ನೆಪೊಟಿಸಂ ಬಗ್ಗೆ ತೀವ್ರ ಚರ್ಚೆಗಳಾಗುತ್ತಿರುವಾಗ ನಟಿ ಈ ಬಗ್ಗೆ ಹೇಳಿರೋದೇನು..? ಇಲ್ಲಿ ಓದಿ
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಗ್ಗೆ ಬಾಲಿವುಡ್ ನಟಿ ವಿದ್ಯಾ ಬಾಲನ್ ಪ್ರತಿಕ್ರಿಯಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಾಲಿವುಡ್ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ನೆಪೊಟಿಸಂ ಬೆಳೆಸುವ ಬಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ಸುಶಾಂತ್ ಅಭಿಮಾನಿಗಳು ಕಿಡಿ ಕಾರಿದ್ದಾರೆ.
ಇನ್ನೂ ಕೆಲವು ಸಿನಿಮಾ ನಟ, ನಟಿಯರೂ ಸುಶಾಂತ್ ಪರ ನಿಂತು ಸಿಬಿಐ ತನಿಖೆ ಬೇಕೆಂದು ಒತ್ತಾಯಿಸುತ್ತಿದ್ದಾರೆ. ಅಂತೂ ಸದ್ಯದಲ್ಲಿ ಈ ಕಾಂಟ್ರವರ್ಸಿ ಮುಗಿಯೋ ಯಾವ ಸೂಚನೆಯೂ ಕಾಣಸುತ್ತಿಲ್ಲ.'
ಈಗ ಜನ ಸುಶಾಂತ್ ಆತ್ಮಕ್ಕೆ ಶಾಂತಿ ಸಿಗುವುದಕ್ಕೆ ಬಿಡಬೇಕು. ಈ ಮೂಲಕ ನಟ ಸುಶಾಂತ್ ಆತ್ಮಕ್ಕೆ ಶಾಂತಿ ಕೋರಬೇಕು ಎಂದಿದ್ದಾರೆ.
ಸಾವಿನ ನಂತರ ಆ ವಿಷಯವನ್ನೇ ಹಿಡಿದು ಮಾತನಾಡುತ್ತಲೇ ಇರುವುದು ಮೃತ ನಟಿನಿಗೋ, ಆತನ ಸಂಬಂಧಿಗಳಿಗೋ ಇಷ್ಟವಾಗುವಂತದ್ದಲ್ಲ ಎಂದು ಅವರು ಹೇಳಿದ್ದಾರೆ.
ಈಗ ಜನ ಬೇರೇನೂ ಮಾತನಾಡದೆ ಆತನ ಆತ್,ಕ್ಕೆ ಚಿರ ಶಾಂತಿ ಕೋರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ನೆಪೊಟಿಸಂ ಇದೆ, ಆದರೆ ಅದು ನನ್ನ ದಾರಿಗೆ ಅಡ್ಡ ಬಂದಿಲ್ಲ ಎಂದು ವಿದ್ಯಾ ಬಾಲನ್ ಹೇಳಿದ್ದಾರೆ.
ನಟ ಸುಶಾಂತ್ ಜೂನ್ 14ರಂದು ಮುಂಬೈನ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.