ತೂಕ ಹೆಚ್ಚಿಸಿಕೊಂಡು ಸೆಕ್ಸಿಯಾದ ಬಾಲಿವುಡ್ ನಟಿಯರು
ಸಿನಿಲೋಕದಲ್ಲಿ ಕಲಾವಿದರು ದಿಢೀರ್ ಅಂತ ದಪ್ಪ ಆಗ್ತಾರೆ ಮತ್ತು ಬೇಕೆಂದಾಗ ಬಳಕುವ ಮಿಂಚಿನ ಬಳ್ಳಿಯಂತೆ ಆಗ್ತಾರೆ. ಸಿನಿಮಾ ನಟಿಯರು ದೈಹಿಕ ಸೌಂದರ್ಯಕ್ಕಾಗಿ ಹೆಚ್ಚು ಸಮಯ ವ್ಯಯ ಮಾಡುತ್ತಾರೆ.
ಸದ್ಯ ಹಾಲಿವುಡ್, ಬಾಲಿವುಡ್ ಸೇರಿದಂತೆ ಝೀರೋ ಫಿಗರ್ ಎಂಬ ಕಲ್ಪನೆ ಇದೆ. ಕೆಲವೊಮ್ಮೆ ಸಿನಿಮಾಗಳಿಗೆ ತೂಕ ಹೆಚ್ಚಿಸಿಕೊಂಡರೂ ಶೂಟಿಂಗ್ ಮುಗಿಯುತ್ತಿದ್ದಂತೆ ದೇಹ ದಂಡಿಸಿ ತೆಳ್ಳಗಾಗುತ್ತಾರೆ. ಆದ್ರೆ ಕೆಲ ನಟಿಯರು ದಪ್ಪಗಾದ್ಮೇಲೆಯೂ ಬೇಡಿಕೆಯ ನಟಿಯಾಗಿದ್ದಾರೆ.
ಬಾಲಿವುಡ್ ಬಿಂದಾಸ್ ಚೆಲುವೆ ವಿದ್ಯಾಬಾಲನ್ ದೇಹದ ತೂಕ ಹೆಚ್ಚಿಸಿಕೊಂಡ ನಂತರವೇ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಡರ್ಟಿ ಪಿಕ್ಚರ್ ಬಳಿಕ ವಿದ್ಯಾ ಬಾಲನ್ ಹಿಂದಿರುಗಿ ನೋಡಿಯೇ ಇಲ್ಲ.
ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಮದುವೆ ಬಳಿಕ ದಪ್ಪ ಆಗಿದ್ದರು. ಝೀರೋ ಫಿಗರ್ ಪರಿಕಲ್ಪನೆಯನ್ನು ಇಂದಿಗೂ ಪಾಲಿಸಿಕೊಂಡು ಬಂದಿರುವ ಕರೀನಾ, ದಬಾಂಗ್ -2 ಚಿತ್ರದ ಫೆವಿಕಾಲ್ ಹಾಡಿನ ಶೂಟ್ ವೇಳೆ ದಪ್ಪ ಆಗಿದ್ದರು. ಬೇಬೋ ಸೆಕ್ಸಿಯಾಗಿ ಕಾಣಿಸುತ್ತಿದ್ದರು ಎಂದು ಅಭಿಮಾನಿಗಳು ಮಾತನಾಡುತ್ತಿದ್ದರು
ಜರೀನಾ ಖಾನ್ ತಮ್ಮ ಮೊದಲ ಚಿತ್ರದ ಬಳಿಕ ತೂಕ ಹೆಚ್ಚಿಸಿಕೊಂಡರು. ವೀರ್, ರೆಡಿ ಸಿನಿಮಾದಲ್ಲಿ ಸಪೂರವಾಗಿದ್ದ ಜರೀನಾ ಹೇಟ್ ಸ್ಟೋರಿಯಲ್ಲಿ ಬಬ್ಲಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದ ರೊಮ್ಯಾಂಟಿಕ್ ಸೀನ್ ಮೂಲಕ ಪಡ್ಡೆಹೈಕಳ ಹಾಟ್ ಫೇವರೆಟ್ ಆದರು.
ಹುಮಾ ಖುರೇಷಿ ಡಬಲ್ ಎಕ್ಸ್ ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದರು. ಡಬಲ್ ಎಕ್ಸ್ ಚಿತ್ರದ ಪ್ರಮೋಷನ್ ವೇಳೆ ಬಿಗಿಯಾದ ಉಡುಪುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಯುವಕರ ಹೃದಯಕ್ಕೆ ಮಿಂಚು ಹರಿಸಿದ್ದರು.
ಸೋನಾಕ್ಷಿ ಸಿನ್ಹಾ ತೂಕದಲ್ಲಿ ಕೊಂಚ ಏರಿಕೆಯಾಗಿದ್ದು, ಅಭಿಮಾನಿಗಳಿಗೆ ಇಷ್ಟವಾಗಿದೆ. ದಬಾಂಗ್ ಮೂಲಕ ಸೋನಾಕ್ಷಿ ಸಿನ್ಹಾ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದರು. ದಬಾಂಗ್ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಸೋನಾಕ್ಷಿ ನಟಿಸಿದ್ದಾರೆ.
ಇನ್ನು ನಟಿ, ಸಂಸದೆ ಕಂಗನಾ ರಣಾವತ್ ತಲೈವಿ ಸಿನಿಮಾಗಾಗಿ ತೂಕ ಹೆಚ್ಚಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ತೂಕ ಹೆಚ್ಚಿಸಿಕೊಂಡಿದ್ದರು ಕಂಗನಾ ಮುದ್ದಾಗಿ ಕಾಣಿಸಿದ್ದರು. ಈ ಸಿನಿಮಾ ದೊಡ್ಡ ಪ್ರಮಾಣದಲ್ಲಿ ಯಶಸ್ಸು ಕಂಡಿತ್ತು. ಚಿತ್ರದ ನಂತರ ಕಂಗನಾ ತೂಕ ಇಳಿಸಿಕೊಂಡಿದ್ದಾರೆ.
ರಾಧಿಕಾ ಆಪ್ಟೆ, ಅನುಷ್ಕಾ ಶೆಟ್ಟಿ, ಪರಿಣಿತಿ ಚೋಪ್ರಾ, ಸಿನಿಮಾಗಾಗಿ ತೂಕ ಹೆಚ್ಚಿಸಿಕೊಂಡಿದ್ದರು. ಅದೇ ರೀತಿ ಅಮೀರ್ ಖಾನ್ ದಂಗಲ್ ಸಿನಿಮಾಗಾಗಿ ತೂಕ ಹೆಚ್ಚಿಸಿಕೊಂಡಿದ್ದರು.