ಸಾರಾ-ಜಾಹ್ನವಿ ಒಟ್ಟಾಗಿ ವರ್ಕೌಟ್ ಮಾಡಿದ್ರೆ ಹೇಗಿರುತ್ತೆ? ಅಭಿಮಾನಿಗಳಿಗೆ ಹಬ್ಬ!
ಮುಂಬೈ(ಏ. 20) ನಟಿ ಸಾರಾ ಅಲಿ ಖಾನ್ ಮತ್ತು ಜಾಹ್ನವಿ ಕಪೂರ್ ಒಟ್ಟಾಗಿ ವರ್ಕ್ ಔಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳಿಗೆ ಮೋಡಿ ಮಾಡಿದ್ದಾರೆ.
ಸಾರಾ ಅಲಿ ಖಾನ್ ತಮ್ಮ ಇಸ್ಟಾ ಪೇಜ್ ನಲ್ಲಿ ಕಪೂರ್ ಜತೆ ಯೋಗ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ಗೋಚಾ, ಮಾಲ್ಡೀವ್ಸ್ ಎಂದು ಓಡಾಡಿಕೊಂಡಿದ್ದ ನಟಿ ಮಣಿಯರು ಇದೀಗ ಮನೆಯಲ್ಲಿಯೇ ವರ್ಕೌಟ್ ಶುರು ಮಾಡಿದ್ದಾರೆ.
ಇದಕ್ಕೆಲ್ಲ ಕಾರಣ ಕೊರೋನಾ ಎಂದು ಹೊಸದಾಗಿ ಹೇಳಬೇಲಕಿಲ್ಲ.
ಮಾಲ್ಡೀವ್ಸ್ ನಲ್ಲಿ ದಿನಕಳೆಯುತ್ತಿದ್ದ ಜಾಹ್ನವಿ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಂಡು ಬಿಸಿ ಹೆಚ್ಚಿಸಿದ್ದರು .
ಕೊರೋನಾ ಕಾರಣಕ್ಕೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಮುಂಬೈ ತೊರೆದ ವರದಿಗಳು ಬಂದಿದ್ದವು.