ಇಲ್ಲಿನ ಬಹುತೇಕ ಪ್ರೌಢಶಾಲೆಗಳಲ್ಲಿ ಕಾಂಡೋಮ್ ವಿತರಣಾ ಯಂತ್ರಗಳಿವೆ
ಪ್ಯಾರಿಸ್(ಮಾ. 31) ಫ್ರಾನ್ಸ್ ನ ಶೇ. 96 ಶಾಲೆಗಳಲ್ಲಿ ಕಾಂಡೋಮ್ ವಿತರಣಾ ಯಂತ್ರ ಇಡಲಾಗಿದೆ. ಹೌದು ಈ ಸುದ್ದಿಯನ್ನು ನಂಬಲೇಬೇಕು. ಇದಕ್ಕೆ ಕಾರಣಗಳು ಇವೆ.
ಲೈಂಗಿಕ ಶಿಕ್ಷಣ ಮತ್ತು ಎಚ್‌ಐವಿ ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಅಲ್ಲಿ ಈ ಹೆಜ್ಜೆ ಇಟ್ಟಿದೆ.
ಆಕಸ್ಮಿಕ ಗರ್ಭಧಾರಣೆ ಮತ್ತು ಎಚ್‌ಐವಿಯಿಂದ ಕಾಪಾಡಲು ಇಂಥ ಕ್ರಮ ಅನಿವಾರ್ಯ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಯುರೋಪಿಯನ್ ರಾಷ್ಟ್ರಗಳಲ್ಲಿ ಏಡ್ಸ್ ಬೆನ್ನು ಹತ್ತಿದ ಕಾರಣ 1992 ರಲ್ಲಿ ಮೊಟ್ಟ ಮೊದಲ ಸಾರಿ ಪ್ರೌಢಶಾಲೆಯೊಂದರಲ್ಲಿ ಕಾಂಡೋಮ್ ವಿತರಣಾ ಯಂತ್ರ ಅಳವಡಿಕೆ ಮಾಡಲಾಗಿತ್ತು.
ಯುರೋಪಿಯನ್ ರಾಷ್ಟ್ರಗಳಲ್ಲಿ ಏಡ್ಸ್ ಬೆನ್ನು ಹತ್ತಿದ ಕಾರಣ 1992 ರಲ್ಲಿ ಮೊಟ್ಟ ಮೊದಲ ಸಾರಿ ಪ್ರೌಢಶಾಲೆಯೊಂದರಲ್ಲಿ ಕಾಂಡೋಮ್ ವಿತರಣಾ ಯಂತ್ರ ಅಳವಡಿಕೆ ಮಾಡಲಾಗಿತ್ತು.
ಈ ವಿಚಾರಕ್ಕೆ ಸಂಬಂಧಿಸಿ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಪ್ರತಿಕ್ರಿಗಳು ವ್ಯಕ್ತವಾಗಿವೆ.
ಮಕ್ಕಳಿಗೆ ಲೈಂಗಿಕ ಶಿಕ್ಷಣ ಅಗತ್ಯ ಎಂದು ಹಲವರು ಹೇಳಿದ್ದಾರೆ.
ಈ ಅವಕಾಶಗಳು ಮಕ್ಕಳನ್ನು ದಿಕ್ಕು ತಪ್ಪಿಸುತ್ತದೆ ಎನ್ನುವುದು ಕೆಲವರ ವಾದ
ಭಾರತೀಯರು ಪ್ರತಿಕ್ರಿಯೆ ನೀಡಿದ್ದು ಕಾಂಡೋಮ್ ಯಂತ್ರದ ಬದಲಾಗಿ ಭಾರತದಲ್ಲಿ ಸ್ಯಾನಿಟರಿ ಪ್ಯಾಡ್ ಸಿಗುವಂತೆ ಮಾಡಿ ಎಂದು ಕೇಳಿಕೊಂಡಿದ್ದಾರೆ.