ಫೆ.17 ರಿಂದ ಹೊಸ ಫಾಸ್ಟ್ಯಾಗ್ ನಿಯಮ, ದುಬಾರಿ ದಂಡ ಕಟ್ಟುವ ಮೊದಲು ಅಪ್‌ಡೇಟ್ ಮಾಡಿ
ವಾಹನ ಫಾಸ್ಟ್ಯಾಗ್ ಹಲವು ಅಪ್‌ಡೇಟ್ ಆಗಿದೆ. ಇದೀಗ ಫೆಬ್ರವರಿ 17 ರಿಂದ ಹೊಸ ನಿಯಮ ಜಾರಿಗೆ ಬರುತ್ತಿದೆ. ಬ್ಲಾಕ್‌ಲಿಸ್ಟ್, ಲೋ ಬ್ಯಾಲೆನ್ಸ್, ಕೆವೈಸಿ ಸೇರಿದಂತೆ ಕೆಲ ನಿಯಮಗಳಲ್ಲಿ ಮಹತ್ತದ ಬದಲಾವಣೆಯಾಗುತ್ತಿದೆ. ಪ್ರಯಾಣಕ್ಕೂ ಮುನ್ನ ನಿಮ್ಮ ಫಾಸ್ಟ್ಯಾಗ್ ಚೆಕ್ ಮಾಡಿ.

ಟೋಲ್ ಸಂಗ್ರಹದಲ್ಲಿ ಕೆಲ ಬದಲಾಣೆಗಳಾಗುತ್ತಿದೆ. ಹೌದು, ಇದೀಗ NPCI ಫಾಸ್ಟ್ಯಾಗ್ ನಿಮಯದಲ್ಲಿ ಕೆಲ ಬದಲಾವಣೆಗಳಾಗುತ್ತಿದೆ. ಹೊಸ ನಿಯಮ ಫೆಬ್ರವರಿ 17 ರಿಂದ ಜಾರಿಗೆ ಬರುತ್ತಿದೆ. ಹೀಗಾಗಿ ಹೊಸ ಅಪ್‌ಡೇಟ್ ಗೊತ್ತಿಲ್ಲದೆ ಹಾಗೆ ಪ್ರಯಾಣ ಮಾಡಿ ದುಬಾರಿ ದಂಡ ಪಾವತಿಸುವ ಸಂಕಷ್ಟಕ್ಕೆ ಸಿಲುಕ ಬೇಡಿ. ಇದಕ್ಕೂ ಮುನ್ನವೇ ನಿಮ್ಮ ವಾಹನದ ಫಾಸ್ಟ್ಯಾಗ್ ಪರಿಶೀಲನೆ ಮಾಡಿ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ( NPCI) ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರಂತೆ ಫಾಸ್ಟ್ಯಾಗ್ ನಿಯಮಗಳು ಕಟ್ಟುನಿಟ್ಟಾಗಿದೆ. ಫಾಸ್ಟ್ಯಾಗ್ ವ್ಯಾಲಿಡೇಶನ್ ಅಡಿಯಲ್ಲಿ ಮಹತ್ವದ 2 ಬದಲಾವಣೆಯಾಗಿದೆ. ಈ ಎರಡೂ ಬದಲಾವಣೆಗೆ ತಕ್ಕಂತೆ ನಿಮ್ಮ ವಾಹನದ ಫಾಸ್ಟ್ಯಾಗ್ ಅಪ್‌ಡೇಟ್ ಆಗಿದೆಯಾ ಅನ್ನೋದು ಚೆಕ್ ಮಾಡಿಕೊಳ್ಳಿ. ಏನೆಲ್ಲಾ ಬದಲಾವಣೆ? ಈ ಕೆಳಗಿನಂತಿದೆ.
ಬ್ಲಾಕ್‌ಲಿಸ್ಟ್‌ಲ್ಲಿರುವ ಫಾಸ್ಟ್ಯಾಗ್, ಹಾಟ್‌ಲೈನ್ ಅಥವಾ ಲೋ ಬ್ಯಾಲೆನ್ಸ್ ಆಗಿರುವ ಫಾಸ್ಟ್ಯಾಗ್ ವಾಹನಗಳಿಗೆ ಫಾಸ್ಟ್ಯಾಗ್‌ನಲ್ಲಿ ಪ್ರವೇಶ ನಿರಾಕರಿಸಲಾಗುತ್ತದೆ. ಇದು ಹೊಸ ನಿಯಮವಲ್ಲ. ಆದರೆ ಲೋ ಬ್ಯಾಲೆನ್ಸ್ ಅಥವಾ ಇತರ ಕಾರಣದಿಂದ ಬ್ಲಾಕ್‌ಲಿಸ್ಟ್‌ನಲ್ಲಿರುವ ಫಾಸ್ಟ್ಯಾಗ್, ಟೋಲ್ ಪ್ರವೇಶಿಸುವ ಕನಿಷ್ಠ 60 ನಿಮಿಷ ಅಥವಾ 1 ಗಂಟೆ ಮೊದಲು ರೀಚಾರ್ಜ್ ಮಾಡಿರಬೇಕು. ತಕ್ಷಣ ರೀಚಾರ್ಜ್ ಮಾಡಿ, ಟೋಲ್ ದಾಡುವ ಪ್ರಯತ್ನ ಇನ್ನು ಸಾಧ್ಯವಿಲ್ಲ.
ಸಮರ್ಪಕ ಬ್ಯಾಲೆನ್ಸ್ ಇಲ್ಲದೆ, ಕೆವೈಸಿ ಪೂರ್ಣಗೊಳಿಸದೆ, ವಾಹನದ ಚಾಸಿ ನಂಬರ್ ಮಿಸ್ ಮ್ಯಾಚ್, ವಾಹನದ ನೋಂದಣಿ ಸಂಖ್ಯೆ ಮಿಸ್ ಮ್ಯಾಚ್ ಸೇರಿದಂತೆ ಕೆಲ ಕಾರಣಗಳಿಂದ ಫಾಸ್ಟ್ಯಾಗ್ ಬ್ಲಾಕ್ಲಿಸ್ಟ್ ಸೇರಿಕೊಳ್ಳಲಿದೆ. ಹೀಗಾಗಿ ಈ ನೀವು ಕೆವೈಸಿ, ಬ್ಯಾಲೆನ್ಸ್ ಸೇರಿದಂತೆ ನಿಮ್ಮ ಫಾಸ್ಟ್ಯಾಗ್ ಸ್ಟೇಟಸ್ ಚೆಕ್ ಮಾಡಿದರೆ ಉತ್ತಮ.
ಈ ರೀತಿ ಬ್ಲಾಕ್‌ಲಿಸ್ಟ್ ಗೊಂಡಿರುವ ಫಾಸ್ಟ್ಯಾಗ್ ವಾಹನ ಟೋಲ್ ಪ್ರವೇಶಿಸಿದರೆ ಸಿಸ್ಟಮ್‌ನಲ್ಲಿ ಎರರ್ ಕೋಡ್ 176 ತೋರಿಸಲಿದೆ. ಎರರ್ ಕೋಡ್ 176 ದಾಖಲಾದರೆ ದುಪ್ಪಟ್ಟು ಟೋಲ್ ಪಾವತಿಸಬೇಕು. ಅಂದರೆ ದಂಡದ ರೂಪದಲ್ಲಿ ಹಣ ಪಾವತಿಸಬೇಕು. ಉದಾಹರಣೆಗೆ 50 ರೂಪಾಯಿ ಟೋಲ್ ಚಾರ್ಜ್ ಇದ್ದರೆ, ಫಾಸ್ಟ್ಯಾಗ್ ಎರರ್ ಕೋಡ್ ಬಂದರೆ ಅಷ್ಟೇ ಮೊತ್ತ ದಂಡ ಪಾವತಿಸಬೇಕು. ಅಂದರೆ ಒಟ್ಟು 100 ರೂಪಾಯಿ ಪಾವತಿಸಬೇಕಾಗುತ್ತದೆ.
ಫಾಸ್ಟ್ಯಾಗ್ ಪಾವತಿ, ಅಡೆ ತಡೆ ಇಲ್ಲದ ಪ್ರಯಾಣ ಹಾಗೂ ಹೆಚ್ಚಿನ ಸುರಕ್ಷತೆಗಾಗಿ ಈ ಅಪ್‌ಡೇಟ್ ಮಾಡಲಾಗಿದೆ. ಹೀಗಾಗಿ ವಾಹನ ಮಾಲೀಕರು ತಮ್ಮ ಫಾಸ್ಟ್ಯಾಗ್ ಅಪ್‌ಡೇಟ್ ಮಾಡುವುದು ಅನಿವಾರ್ಯವಾಗಿದೆ. ಕಡೆಗಣಿಸಿದರೆ ಟೋಲ್ ಬೂತ್ ಮೂಲಕ ಸಾಗಲು ಪರದಾಡಬೇಕಾಗುತ್ತದೆ.