ಅಪ್ರಾಪ್ತ ಮಗಳ ಮೇಲೆ 1 ತಿಂಗಳು ರೇಪ್ ಮಾಡಿದ ಅಪ್ಪ, ವಿಡಿಯೋ ವೈರಲ್ ಮಾಡುವ ಬೆದರಿಕೆ!
ಉತ್ತರ ಪ್ರದೇಶದಲ್ಲಿ ತಂದೆ ಮಗಳ ಸಂಬಂಧಕ್ಕೆ ಕಳಂಕ ತಂದಿರುವ ಘಟನೆ ಬೆಳಕಿಗೆ ಬಂದಿದೆ. ಇಲ್ಲೊಬ್ಬ ತಂದೆ ತನ್ನ ಹದಿನೈದು ವರ್ಷದ ಮಗಳ ಮೇಲೆ ಒಂದು ತಿಂಗಳು ಅತ್ಯಾಚಾರ ನಡೆಸಿದ್ದಾನೆ. ಈ ವೇಳೆ ತಾಯಿ ತನ್ನ ಮಗಳನ್ನು ರಕ್ಷಿಸಲು ಯತ್ನಿಸಿದ್ದಾಳೆ. ಆದರೆ ಆಕೆಗೂ ಗಂಡ ಥಳಿಸಿದ್ದು, ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಹೀಗಿರುವಾಗ ಮಗಳು ತನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯ ಕುರಿತಾಗಿ ತನ್ನ ಮಾವನಿಗೆ ಕರೆ ಮಾಡಿ ತಿಳಿಸಿದ್ದಾಳೆ. ಹೀಗಾಗಿ ಈ ವಿಇಚಾರ ಬಹಿರಂಗಗೊಂಡಿದ್ದು, ಪೊಲೀಸರು ಆರೋಪಿ ತಂದೆ ಮೇಲರೆ ಕೇಸ್ ದಾಖಲಿಸಿ ಬಂಧಿಸಿದ್ದಾರೆ.
ಘಟನೆ ಉತ್ತರ ಪ್ರದೇಶದ ನೊಯ್ಡಾದ ಜೇವರ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಸಹೋದರಿ ಮಗಳ ಮೇಲೆ ಆಕೆಯ ತಂದೆಯೇ ದೌರ್ಜನ್ಯವೆಸಗುತ್ತಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದಾನೆ. ಮಾಹಿತಿ ಪಡೆದ ಪೊಲೀಸರು ಒಂದು ಬಾರಿ ದಂಗಾಗಿದ್ದಾರೆ.
ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಇದು ನಿಜವೆಂದು ತಿಳಿದ ಬೆನ್ನಲ್ಲೇ ಪೊಲೀಸರು ಅತ್ಯಾಚಾರಿ ತಂದೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೊಳಪಡಿಸಿದೆ.
ಪೊಲೀಸ್ ಉಪ ಆಯುಕ್ತ ರಾಕೇಶ್ ಕುಮಾರ್ ಸಿಂಗ್ ಈ ಸಂಬಂಧ ಮಾಹಿತಿ ನೀಡುತ್ತಾ ಬಾಲಕಿಯ ಮಾವ ನೀಡಿದ ದೂರಿನ ಅನ್ವಯ ಆರೋಪಿ ತಂದೆ ಕಳೆದ ಒಂದು ತಿಂಗಳಿಂದ ತನ್ನ ಮಗಳ ಮೇಲೆಅತ್ಯಾಚಾರ ನಡೆಸುತ್ತಿದ್ದ. ಮಗಳನ್ನು ರಕ್ಷಿಸಲು ತಾಯಿ ಮುಂದಾದಾಗ ಆಕೆಯನ್ನೂ ಥಳಿಸಿದ್ದಾನೆ.
ಇನ್ನು ಆರೋಪಿ ತಂದೆ ಕುಡುಕನಾಗಿದ್ದು, ಅನೇಕ ದಿನಗಳಿಂದ ಮಗಳ ಮೇಲೆ ಆತ ಕೆಟ್ಟ ದೃಷ್ಟಿ ಬೀರಿದ್ದ. ಒಂದು ದಿನ ಹೆಂಡತಿ ಮನೆಯಲ್ಲಿ ಇಲ್ಲದ ವೇಳೆ ಆತ ಮಗಳ ಮೇಲೆ ರೇಪ್ ಮಾಡಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಇದಾದ ಬಳಿಕ ತಂದೆ ಇದನ್ನೇ ಚಟವಾಗಿಸಿಕೊಂಡಿದ್ದಾನೆ. ಮಗಳು ತಾಯಿಗೆ ಈ ಬಗ್ಗೆ ತಿಳಿಸಿದ್ದಾಳೆ. ಆದರೆ ಕಾಮುಕ ತಂದೆ ತನ್ನ ಹೆಂಡತಿಗೂ ಹಿಗ್ಗಾ ಮುಗ್ಗಾ ಥಳಿಸಿದ್ದಾನೆ. ಹೀಗಿರುವಾಗ ಮಗಳು ಒಂದು ದಿನ ನೆರೆ ಮನೆಯವರ ಮೊಬೈಲ್ ಫೋನ್ ಪಡೆದು ತನ್ನ ಮಾವನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ.