ಸಖತ್ ಹಾಟ್ ಮಗಾ! 52ರಲ್ಲೂ 18ರ ಸೆಕ್ಸೀ ಲುಕ್ ಹೊಂದಿರೋ ಚಕ್ ದೇ ಹುಡುಗಿ ವಿದ್ಯಾ ಫಿಟ್ನೆಸ್ಗೆ ಫ್ಯಾನ್ಸ್ ಫಿದಾ
2007ರಲ್ಲಿ 'ಚಕ್ ದೇ' ಪಾತ್ರದ ಮೂಲಕ ಕೋಟ್ಯಂತರ ಜನರ ಕ್ರಶ್ ಆಗಿದ್ದ ವಿದ್ಯಾ, ಒಮ್ಮೆ ಆತ್ಮಹತ್ಯೆ ಬಗ್ಗೆ ಯೋಚಿಸುತ್ತಿದ್ದರು. ಈಗ 52ರಲ್ಲಿ 18ರ ಹುಡುಗಿಯಂತೆ ಫಿಟ್ನೆಸ್ ಕಾಯ್ದುಕೊಂಡಿರುವ ವಿದ್ಯಾ ಪಾಸಿಟಿವ್ ಥಿಂಕಿಂಗ್ ಬೆಲೆ ಅರಿತಿದ್ದಾರೆ.
ಎಲ್ಲೋ ನೋಡಿದ ನೆನಪಾಯಿತಾ? ಈಕೆ ಶಾರೂಖ್ ಖಾನ್ ಜೊತೆ 'ಚಕ್ ದೇ' ಚಿತ್ರದಲ್ಲಿ ಹಾಕಿ ತಂಡದ ನಾಯಕಿಯ ಪಾತ್ರ ವಹಿಸಿ, ಕೋಟ್ಯಂತರ ಯುವಕರ ಕ್ರಶ್ ಆಗಿದ್ದರು ವಿದ್ಯಾ ಮಲವಾಡೆ.
ಇಂದು 17 ವರ್ಷಗಳ ಬಳಿಕ, ಅಂದರೆ, ವಿದ್ಯಾ ತಮ್ಮ 52ನೇ ವಯಸ್ಸಿನಲ್ಲಿ ಕಾಯ್ದುಕೊಂಡಿರೋ ಫಿಟ್ನೆಸ್ ಕೂಡಾ ಕೋಟ್ಯಂತರ ಜನರಿಗೆ ಮಾದರಿಯಾಗಿದೆ.
ವಿದ್ಯಾ ಫೋಟೋ ನೋಡಿದವರೆಲ್ಲ, ಅಬ್ಬಬ್ಬಾ ಏನ್ ಹಾಟ್ ಗುರೂ, ಸಖತ್ ಸೆಕ್ಸೀ ಎನ್ನುತ್ತಾ, ಈಕೆಯ ವಯಸ್ಸು ಹಿಂದೆಯೇ ನಿಂತ ಬಗ್ಗೆ ಅಚ್ಚರಿ ಪಡುತ್ತಾರೆ. ಅದರ ಹಿಂದೆ ಅವರ ಸಂಪೂರ್ಣ ಡೆಡಿಕೇಶನ್ ಇದೆ.
ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತುಂಬಾ ಸಕ್ರಿಯರಾಗಿರುವ ವಿದ್ಯಾ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಒಂದೊಮ್ಮೆ ವಿದ್ಯಾ ಆತ್ಮಹತ್ಯೆಯ ಯೋಚನೆಯನ್ನೂ ಮಾಡಿದ್ದರು.
ಹೌದು, 1997ರಲ್ಲಿ ಏರ್ ಹಾಸ್ಟೆಸ್ ಆಗಿದ್ದ ವಿದ್ಯಾ ಅರವಿಂದ್ ಬಗ್ಗ ಅವರನ್ನು ವಿವಾಹವಾದರು. ಆದರೆ, ಮೂರೇ ವರ್ಷದಲ್ಲಿ ವಿಮಾನ ಅಪಘಾತದಲ್ಲಿ ಆಕೆಯ ಪತಿ ಸಾವಿಗೀಡಾದರು.
ಈ ಸಂದರ್ಭದಲ್ಲಿ ಖಿನ್ನತೆಗೆ ಜಾರಿದ್ದ ವಿದ್ಯಾ, ಖಿನ್ನತೆಗೆ ಜಾರಿ ಆತ್ಮಹತ್ಯೆ ಬಗ್ಗೆ ಯೋಚಿಸುತ್ತಿದ್ದರಂತೆ. ಆದರೆ, ಪೋಷಕರ ಬೆಂಬಲದ ಜೊತೆ ವಿದ್ಯಾ ಕೈ ಹಿಡಿದು ನಡೆಸಿದ್ದು ಯೋಗ ಮತ್ತು ಪ್ರಾಣಾಯಾಮ.
ಹೌದು, ವಿದ್ಯಾಗೆ ಈ ಹಿರಿಯ ವಯಸ್ಸಲ್ಲೂ ಕಿರಿಯ ಹುಡುಗಿಯರೊಂದಿಗೆ ಫಿಟ್ನೆಸ್ನಲ್ಲಿ ಸ್ಪರ್ಧೆಗೆ ಬೀಳುವಂತ ದೇಹವಿರಲು ಕಾರಣ ಕೂಡಾ ಅದೇ ಯೋಗ ಮತ್ತು ಪ್ರಾಣಾಯಾಮವಂತೆ.
2009 ರಲ್ಲಿ ಚಿತ್ರಕಥೆ ಬರಹಗಾರ ಮತ್ತು ಸಹ ನಿರ್ದೇಶಕ ಸಂಜಯ್ ಡೈಮಾ ಅವರನ್ನು ಎರಡನೇ ವಿವಾಹವಾಗಿರುವ ವಿದ್ಯಾ, ಆಗಾಗ ಒಂದಿಲ್ಲೊಂದು ಚಿತ್ರಗಳಲ್ಲಿ, ವೆಬ್ ಸಿರೀಸ್ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.
ನಾನು ಎಲ್ಲವನ್ನೂ ಬಹಳ ಉತ್ಸಾಹ, ಹೃದಯ ಮತ್ತು ಸಾಕಷ್ಟು ಸಾವಧಾನದಿಂದ ಮಾಡುತ್ತೇನೆ ಮತ್ತು ಫಲಿತಾಂಶದ ಕಡೆ ಗಮನ ಹರಿಸುವುದಿಲ್ಲ. ಇದು ಸಾಧ್ಯವಾಗಿರುವುದು ಯೋಗದಿಂದ.
ಮನಸ್ಸು ಮತ್ತು ದೈಹಿಕ ಫಿಟ್ನೆಸ್ಗೆ ಯೋಗವೊಂದೇ ದಾರಿ ಎಂಬುದು ನನ್ನ ಅನುಭವ ಎನ್ನುತ್ತಾರೆ ವಿದ್ಯಾ. ಈ ಹಾಟ್ ಬೆಡಗಿಯು ಸದ್ಯ ರುಸ್ಲಾನ್ ಚಿತ್ರದಲ್ಲಿ ಮತ್ತು ಗುಪ್ತ್ ವಿಗ್ನಾನ್ ಎಂಬ ಟಿವಿ ಸೀರೀಸ್ನಲ್ಲಿ ನಟಿಸುತ್ತಿದ್ದಾರೆ.