14 ವರ್ಷವಿದ್ದಾಗ ಬಾಲಿವುಡ್ ನಟಿ ಮೇಲೆ ಪಾಕ್ನಲ್ಲಿ ಅತ್ಯಾಚಾರ
ಶಾಕಿಂಗ್ ವಿಚಾರ ರಿವೀಲ್ ಮಾಡಿದ ಬಾಲಿವುಡ್ ನಟಿ | 5,9 ವರ್ಷದವಳಾಗಿದ್ದಾಗಲೇ ನಡೆದಿತ್ತು ಲೈಂಗಿಕ ದೌರ್ಜನ್ಯ
ಪಾಕಿಸ್ತಾನ ಮೂಲದ ಸೋಮಿ ಅಲಿ 90 ರ ದಶಕದಲ್ಲಿ ತನ್ನ ಸಿನಿಮಾಗಳಿಂದ ಬಾಲಿವುಡ್ನಲ್ಲಿ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ.
ನಟಿ ಈಗ ನಟನೆಯನ್ನು ಬಿಟ್ಟು ಬಹಳಷ್ಟು ಸಮಯವಾಗಿದೆ
ಈಕೆ ಸದ್ಯ ನೋ ಮೋರ್ ಟಿಯರ್ಸ್ ಎಂಬ ಹೆಸರಿನ ಎನ್ಜಿಒ ನಡೆಸುತ್ತಿದ್ದಾರೆ.
ಅತ್ಯಾಚಾರಕ್ಕೊಳಗಾದವರನ್ನು ಮತ್ತು ಲೈಂಗಿಕ ಕಿರುಕುಳಕ್ಕೊಳಗಾದ ಮಕ್ಕಳನ್ನು ರಕ್ಷಿಸುತ್ತಿರುವ ನಟಿ ತಾನು ಅದಕ್ಕೆ ಬಲಿಯಾಗಿದ್ದನ್ನು ಬಹಿರಂಗಪಡಿಸಿದ್ದಾರೆ.
ಪೀಪಿಂಗ್ ಮೂನ್ ಅವರೊಂದಿಗಿನ ವೀಡಿಯೊ ಸಂದರ್ಶನದಲ್ಲಿ ಸೋಮಿ ಭಯಾನಕ ಘಟನೆಗಳನ್ನು ಬಹಿರಂಗಪಡಿಸಿದ್ದಾರೆ.
5, 9 ಮತ್ತು ಮತ್ತೆ 14 ನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾಳೆ ಎಂದು ಸೋಮಿ ಹೇಳಿದ್ದಾರೆ
ಸೋಮಿ ಈ ವಿಚಾರದ ಬಗ್ಗೆ ತಮ್ಮನ್ನು ತಾವು ತೆರೆದುಕೊಳ್ಳಲು ಬಹಳ ಸಮಯ ಹಿಡಿಯಿತು ಎಂದಿದ್ದಾರೆ. 14 ವರ್ಷಗಳ ಕಾಲ ಈ ಎನ್ಜಿಒ ನಡೆಸಿದ ನಂತರ ತನ್ನಷ್ಟಕ್ಕೆ ತಾನೇ ಮಾತನಾಡದಿದ್ದಕ್ಕಾಗಿ ನಾನು ಸುಳ್ಳುಗಾತಿ ಎಂದು ಭಾವಿಸುತ್ತಿದ್ದೆ ಎಂದಿದ್ದಾರೆ
ನಾನು ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ಲೈಂಗಿಕ ಕಿರುಕುಳಕ್ಕೊಳಗಾದಾಗ, ನನಗೆ 5 ವರ್ಷ.
ಸೇವಕರ ಕ್ವಾರ್ಟರ್ಸ್ನಲ್ಲಿ 3 ಘಟನೆಗಳು ನಡೆದಿವೆ. ನಾನು ನನ್ನ ಅಮ್ಮ ಮತ್ತು ತಂದೆಗೆ ಹೇಳಿದೆ. ಆದರೆ ನನ್ನ ಪೋಷಕರು ಯಾರಿಗೂ ಹೇಳಬೇಡ ಎಂದರು.