ದಿಢೀರ್ ಹಾಟ್ ಫೋಟೋ ಹರಿಬಿಟ್ಟ ರಾಶಿ ಖನ್ನಾ; ನಟಿಯ ಬೋಲ್ಡ್ ಪೋಸ್ಗೆ ದಂಗಾದ ನೆಟ್ಟಿಗರು
ನಟಿ ರಾಶಿ ಖನ್ನಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಾಟ್ ಫೋಟೋಗಳನ್ನು ಹರಿಬಿಟ್ಟಿದ್ದಾರೆ. ರಾಶಿ ಖನ್ನಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿತ್ತು. ರಾಶಿ ಫೋಟೋಗಳನ್ನು ನೋಡಿ ದಂಗಾದ ನೆಟ್ಟಿಗರು ಕ್ಷಣಾರ್ಧದಲ್ಲಿ ವೈರಲ್ ಮಾಡಿದ್ದರು.
ಉತ್ತರ ಭಾರತ ಮೂಲದ ದಕ್ಷಿಣ ಭಾರತದ ಖ್ಯಾತ ನಟಿ ರಾಶಿ ಖನ್ನಾ ಇತ್ತೀಚಿಗಷ್ಟೆ ತಮಿಳು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಧನುಷ್ ನಾಯಕನಾಗಿ ನಟಿಸಿರುವ ತಿರುಚಿತ್ರಂಬಲಂ ಸಿನಿಮಾದಲ್ಲಿ ರಾಶಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಆದ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಾಟ್ ಫೋಟೋಗಳನ್ನು ಹರಿಬಿಟ್ಟಿದ್ದಾರೆ.
ರಾಶಿ ಖನ್ನಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿತ್ತು. ರಾಶಿ ಫೋಟೋಗಳನ್ನು ನೋಡಿ ದಂಗಾದ ನೆಟ್ಟಿಗರು ಕ್ಷಣಾರ್ಧದಲ್ಲಿ ವೈರಲ್ ಮಾಡಿದ್ದರು.
ಬಳಿ ಬಣ್ಣದ ಬಟ್ಟೆ ಧರಿಸಿರುವ ರಾಶಿ ಫೋಟೋಗೆ ಡೇ ಮತ್ತು ಡ್ರೀಮರ್ ಎಂದು ಕ್ಯಾಪ್ಷನ್ ನೀಡಿದ್ದಾರೆ. ಕ್ಯಾಮರಾಗೆ ತರಹೇವಾರಿ ಪೋಸ್ ನೀಡಿರುವ ರಾಶಿ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಹರಿದುಬರುತ್ತಿದೆ. ನೆಟ್ಟಿಗರು ಹಾಡಿಹೊಗಳಿ ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಕಳುಹಿಸುತ್ತಿದ್ದರೆ.
ರಾಶಿ ಖನ್ನಾ ಸದಾ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಈ ಪರಿ ಹಾಟ್ ಫೋಟೋಗಳನ್ನು ಶೇರ್ ಮಾಡುವುದು ತೀರಾ ಅಪರೂಪ. ಹಾಗಾಗಿ ಅಭಿಮಾನಿಗಳಿಗೆ ಅಚ್ಚರಿ ಜೊತೆಗೆ ಖುಷಿಯೂ ಆಗಿದೆ. ನೆಚ್ಚಿನ ನಟಿಯ ತರಹೇವಾರಿ ಫೋಟೋಗಳನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.
ಹಿಂದಿ ಸಿನಿಮಾ ಮೂಲಕ ಬಣ್ಣದ ಲೋಕದ ಜರ್ನಿ ಪ್ರಾರಂಭಿಸಿದ ನಟಿ ರಾಶಿ ಖನ್ನಾ ಬಳಿಕ ಮನಮ್ ಸಿನಿಮಾ ಮೂಲಕ ದಕ್ಷಿಣ ಭಾರತಕ್ಕೆ ಎಂಟ್ರಿ ಕೊಟ್ಟರು. ಮನಮ್ ಸಿನಿಮಾದಲ್ಲಿ ರಾಶಿ ಪ್ರೇಮಾ ಎನ್ನುವ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಬಳಿಕ ರಾಶಿ ತೆಲುಗು ಸಿನಿಮಾರಂಗದಲ್ಲೇ ಫಿಕ್ಸ್ ಆದರು.
ಬಳಿಕ ರಾಶಿ ಖನ್ನಾ ಮಲಯಾಳಂ ಮತ್ತು ತಮಿಳು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ತಮಿಳಿನ ಅನೇಕ ಸಿನಿಮಾಗಳಲ್ಲಿ ರಾಶಿ ಖನ್ನಾ ಮಿಂಚಿದ್ದಾರೆ. ಸದ್ಯ ರಾಶಿ ತಮಿಳು ಜೊತೆಗೆ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನೇಕ ವರ್ಷಗಳ ಬಳಿಕ ರಾಶಿ ಹಿಂದಿ ಸಿನಿಮಾರಂಗಕ್ಕೆ ಕೊಟ್ಟಿದ್ದಾರೆ.
ತೆಲುಗಿನಲ್ಲಿ ರಾಶಿ ಖನ್ನಾ ಕೊನೆಯದಾಗಿ ಥ್ಯಾಂಕ್ ಯು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನಾಗ ಚೈತನ್ಯ ನಾಯಕನಾಗಿ ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೇಳಿಕೊಳ್ಳುವಷ್ಟು ಕಮಾಯಿ ಮಾಡಿಲ್ಲ.
ಸದ್ಯ ತಮಿಳಿನ ಸರ್ದಾರ್ ಮತ್ತು ಹಿಂದಿಯ ಯೋಧ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಜೊತೆಗೆ ವೆಬ್ ಸೀರಿಸ್ ನಲ್ಲೂ ನಟಿಸಿದ್ದಾರೆ. ರುದ್ರ ವೆಬ್ ಸೀರಿಸ್ ಬಳಿಕ ಫಾರ್ಜಿ ಎನ್ನುವ ಮತ್ತೊಂದು ಹಿಂದಿ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ.