British Fashion Awards: ರೆಡ್ ಕಾರ್ಪೆಟ್ನಲ್ಲಿ ಹಾಟ್ ಕಪಲ್, ಪತ್ನಿಯ ಡ್ರೆಸ್ ಸರಿ ಮಾಡಿದ ನಿಕ್
ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ(Priyanka chopra) ನಿಕ್ ಜೋನಸ್(Nick Jonas) ಅವರಿಂದ ವಿಚ್ಚೇದನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ವೈರಲ್(Viral) ಆದ ಬೆನ್ನಲ್ಲೇ ಈ ಹಾಟ್ ಜೋಡಿ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಿದ್ದಾರೆ. ಟ್ರೋಲ್ ಮಾಡ್ಕೊಳ್ಳೋರು ಉರ್ಕೊಳ್ರಪ್ಪಾ ಎಂದಿದ್ದಾರೆ ಪಿಗ್ಗಿ ಫ್ಯಾನ್ಸ್.
2021 ರ ಬ್ರಿಟಿಷ್ ಫ್ಯಾಷನ್ ಅವಾರ್ಡ್ಸ್ನಲ್ಲಿ ಪತಿ ನಿಕ್ ಜೋನಾಸ್ ಅವರೊಂದಿಗೆ ರೆಡ್ ಕಾರ್ಪೆಟ್ ಮೇಲೆ ಆಗಮಿಸಿದ ಪ್ರಿಯಾಂಕಾ ಚೋಪ್ರಾ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಸ್ಟೈಲಾಗಿ ಬಂದ ಜೋಡಿಯನ್ನು ನೋಡಿ ಮೆಚ್ಚಿಕೊಂಡಿದ್ದರು ಜನ.
ಪ್ರಿಯಾಂಕಾ ತನ್ನ ತೋಳಿನ ಮೇಲೆ ವಿಶ್ರಾಂತಿ ಪಡೆದಿರುವ ಚಿತ್ರವನ್ನು ಹಂಚಿಕೊಂಡ ನಿಕ್ ಇನ್ಸ್ಟಾಗ್ರಾಮ್ನಲ್ಲಿ ನೋಟ್ ಒಂದನ್ನು ಶೇರ್ ಮಾಡಿದ್ದಾರೆ.
ಕಾರ್ಯಕ್ರಮದ ತಾರೆ. ಪ್ರಿಯಾಂಕಚೋಪ್ರಾ ಎಂದು ಬರೆಯಲಾಗಿದೆ. ಪ್ರಿಯಾಂಕಾ ಮ್ಯಾಚಿಂಗ್ ಓವರ್ಕೋಟ್ನೊಂದಿಗೆ ಮೇಲಿನಿಂದ ಕೆಳಕ್ಕೆ ಪ್ರಿಂಟೆಡ್ ಬಾಡಿಸೂಟ್ನಲ್ಲಿ ಕಂಡುಬಂದಿದ್ದಾರೆ. ನಿಕ್ ಕಪ್ಪು ಬಣ್ಣದ ಸೂಟ್ನಲ್ಲಿ ಕೆಂಪು ಶರ್ಟ್ ಧರಿಸಿದ್ದರು.
ಆನ್ಲೈನ್ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ನಿಕ್ ಅವರು ಪ್ರಿಯಾಂಕಾ ಅವರ ಓವರ್ಕೋಟ್ ಸರಿ ಮಾಡಲು ಸಹಾಯ ಮಾಡುವುದನ್ನು ಸಹ ಕಾಣಬಹುದು. ಅವರು ಫೋಟೋಗೆ ಪೋಸ್ ಕೊಡಲು ರೆಡಿಯಾಗುತ್ತಿರುವಾಗ ಪ್ರಿಯಾಂಕ ಡ್ರೆಸ್ ಸರಿ ಮಾಡುತ್ತಾರೆ.
ಅಭಿಮಾನಿಯೊಬ್ಬರು ವೀಡಿಯೊಗೆ ಪ್ರತಿಕ್ರಿಯಿಸಿ ಯಾವಾಗಲೂ ನಮ್ಮ ನಿಕ್ ಸಂಭಾವಿತ ವ್ಯಕ್ತಿ ಎಂದಿದ್ದರೆ , ಇನ್ನೊಬ್ಬರು ಇಡೀ ದೊಡ್ಡತನವೇ ಅಂತಹ ಸಂಭಾವಿತ ವ್ಯಕ್ತಿಯಾಗಿರುವುದು. ಪ್ರಿಯಾಂಕ ಬಗ್ಗೆ ನಿಕ್ ಕೊಡೋ ಗಮನವನ್ನು ನಾನು ಇಷ್ಟಪಡುತ್ತೇನೆ ಎಂದಿದ್ದಾರೆ.
ಬಹಳಷ್ಟು ಜನರು ನಿಕ್-ಪಿಗ್ಗಿ ಲವ್ ನೋಡಿ ವಿಚ್ಚೇದನೆಗೆ ಟ್ರೋಲ್ ಮಾಡಿದವರು ಈಗ ಉರ್ಕೊಳ್ಳಿ ಎಂದು ಕಾಲೆಳೆದಿದ್ದಾರೆ. ಪ್ರಿಯಾಂಕಾ ಇತ್ತೀಚೆಗೆ Instagram ಮತ್ತು Twitter ನಲ್ಲಿ ತನ್ನ ಉಪನಾಮದಿಂದ ಜೋನಾಸ್ ಅನ್ನು ತೆಗೆದುಹಾಕಿದ ನಂತರ ತನ್ನ ಅಭಿಮಾನಿಗಳು ಚಿಂತಿತರಾಗಿದ್ದರು.
ಸ್ಟಾರ್ ಕಪಲ್ ಬೇರೆಯಾಗುತ್ತೀದ್ದಾರಾ ಎಂಬ ಗಾಸಿಪ್ನ್ನು ಪ್ರಿಯಾಂಕಾ ಅವರ ತಾಯಿ ಮಧು ಚೋಪ್ರಾ ತಳ್ಳಿಹಾಕಿದ್ದಾರೆ. ಪ್ರಿಯಾಂಕಾ ಪ್ರಸ್ತುತ ಹಾಲಿವುಡ್ ಚಿತ್ರ ದಿ ಮ್ಯಾಟ್ರಿಕ್ಸ್ ರಿಸರ್ಕ್ಷನ್ಸ್ ಬಿಡುಗಡೆಗೆ ಸಜ್ಜಾಗಿದ್ದಾರೆ. ಕೀನು ರೀವ್ಸ್ ನಾಯಕಿಯಾಗಿರುವ ಚಿತ್ರದಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.