ರೆಡ್ ಡ್ರೆಸ್ನಲ್ಲಿ 48 ವರ್ಷದ Mlaika Arora ಒಂಟಿಯಾಗಿ ಟೂರ್ ಮಾಡ್ತಿದ್ದಾರೆ!
48 ವರ್ಷದ ಮಲೈಕಾ ಅರೋರಾ (Malaika Arora)ಈ ದಿನಗಳಲ್ಲಿ ಟರ್ಕಿಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಅವರು ರಜೆಯನ್ನು ಆನಂದಿಸುತ್ತಿರುವ ಫೋಟೋಗಳು ಮುನ್ನೆಲೆಗೆ ಬಂದಿದ್ದು, ಅಭಿಮಾನಿಗಳು ಮಲೈಕಾರ ಹಾಟ್ನೆಸ್ಗೆ ಫುಲ್ ಫಿದಾ ಆಗಿದ್ದಾರೆ ಹೊರಬಿದ್ದ ಫೋಟೋಗಳಲ್ಲಿ, ಮಲೈಕಾ ತುಂಬಾ ಬೋಲ್ಡ್ ಮತ್ತು ಸೆಕ್ಸಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ರಜೆ ಸಮಯದಲ್ಲಿ, ಮಲೈಕಾ ಕೆಂಪು ಮಾದಕ ಕಫ್ತಾನ್ ಧರಿಸಿ ಕಾಣಿಸಿಕೊಂಡಿದ್ದಾರೆ. ಅವರು ಕೈಯಲ್ಲಿ ದೊಡ್ಡ ಕೆಂಪು ಬಳೆಗಳನ್ನು ಧರಿಸಿದ್ದಾರೆ. ಭಾರವಾದ ಕಿವಿಯೋಲೆಗಳೊಂದಿಗೆ ತಮ್ಮ ಕೂದಲನ್ನು ಹಾಗೇ ಬಿಟ್ಟಿದ್ದಾರೆ ಮತ್ತು ಅವರು ನ್ಯೂಡ್ ಮೇಕಪ್ ಜೊತೆ ತನ್ನ ನೋಟವನ್ನು ಪೂರ್ಣಗೊಳಿಸಿದರು.
ಮಲೈಕಾ ಅರೋರಾ ಇಲ್ಲಿ ಭರ್ಜರಿ ಫೋಟೋಶೂಟ್ ಕೂಡ ಮಾಡಿದ್ದಾರೆ. ಅವರ ಬೋಲ್ಡ್ ಮತ್ತು ಗ್ಲಾಮರಸ್ ಫೋಟೋಗಳನ್ನು ನೋಡಿದ ಅಭಿಮಾನಿಗಳು ಅವರ ಲುಕ್ ಬಗ್ಗೆ ತೀವ್ರವಾಗಿ ಕಮೆಂಟ್ ಮಾಡುತ್ತಿದ್ದಾರೆ.
ಮಲೈಕಾ ಅರೋರಾ ಅವರು ಇಲ್ಲಿ ಏಕಾಂಗಿಯಾಗಿ ರಜೆಯನ್ನು ಆನಂದಿಸುತ್ತಿದ್ದಾರೆ ಎಂದು ಫೋಟೋಗಳಿಂದ ಊಹಿಸಲಾಗಿದೆ. ಅವಳ ಎಲ್ಲಾ ಫೋಟೋಗಳಲ್ಲಿ ಅವಳು ಒಬ್ಬಂಟಿಯಾಗಿ ಕಾಣುತ್ತಾರೆ.
ಮಲೈಕಾ ಅರೋರಾ ಅವರ ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಅರ್ಜುನ್ ಕಪೂರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ ಮತ್ತು ಅರ್ಜುನ್ ಎಲ್ಲಿ ಎಂದು ಅಭಿಮಾನಿಗಳು ಕಾಮೆಂಟ್ ಮೂಲಕ ಕೇಳುತ್ತಿದ್ದಾರೆ.
ಮಲೈಕಾ ಅರೋರಾ ಬಾಲಿವುಡ್ನ ಹಾಟ್ ಆಂಡ್ ಫಿಟ್ ನಟಿಯರಲ್ಲಿ ಒಬ್ಬರು ಮತ್ತು ಅವರು ತಮ್ಮ ಕೂಲ್ ಲೈಫ್ಸ್ಟೈಲ್ಗೆ ಹೆಸರುವಾಸಿಯಾಗಿದ್ದಾರೆ. ಮಲೈಕಾ ಅರೋರಾ ಬಹಳ ದಿನಗಳಿಂದ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಅವರು ಹೆಚ್ಚಿನ ಚಿತ್ರಗಳಲ್ಲಿ ಐಟಂ ನಂಬರ್ಗಳನ್ನು ಮಾಡಿದ್ದಾರೆ
ಇತ್ತೀಚೆಗಷ್ಟೇ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಮದುವೆ ಬಗ್ಗೆ ಚರ್ಚೆ ನಡೆದಿದೆ. ಈ ವರ್ಷಾಂತ್ಯಕ್ಕೆ ಇವರಿಬ್ಬರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ.