ಕಾಮಸೂತ್ರ to ಬಿಎ ಪಾಸ್; ಪೋಷಕರು ಹಾಗೂ ಮಕ್ಕಳೊಂದಿಗೆ ನೀವು ನೋಡಲೇ ಬಾರದ 11 ಸಿನಿಮಾಗಳು
ಭಾರತೀಯ ಸಿನಿಮಾಗಳ ವೀಕ್ಷಣೆ ಕುಟುಂಬದೊಂದಿಗೆ ಕಾಲ ಕಳೆಯಲು ಉತ್ತಮ ಕಾರಣವೆಂದೂ ಹೇಳಬಹುದು. ಆದರೆ, ಕೆಲವೊಂದು ಸಿನಿಮಾಗಳನ್ನು ಮಕ್ಕಳು ಹಾಗೂ ಪೋಷಕರು ಒಟ್ಟಿಗೆ ಕುಳಿತುಕೊಂಡು ನೋಡಲಾಗದಂತಹ ಸಿನಿಮಾಗಳಿವೆ. ಅದರಲ್ಲಿ ಅಶ್ಲೀಲ ದೃಶ್ಯಗಳನ್ನು ಒಳಗೊಂಡಿರುವ ಈ 11 ಸಿನಿಮಾಗಳನ್ನು ಮಾತ್ರ ಮಕ್ಕಳು ಅಥವಾ ಪೋಷಕರೊಂದಿಗೆ ಕುಳಿತು ನೋಡಬೇಡಿ..
ಕಾಮ ಸೂತ್ರ ( Kama Sutra ) : ಭಾರತೀಯ ಐತಿಹಾಸಿಕ ಕಾಮಪ್ರಚೋದಕ ಪ್ರಣಯ ಚಲನಚಿತ್ರವು 1996 ರಲ್ಲಿ ಬಿಡುಗಡೆಯಾಯಿತು. ಈ ಚಲನಚಿತ್ರವು ಅದರ ಬಿಡುಗಡೆಯ ಸಮಯದಲ್ಲಿ ವಿವಾದವನ್ನು ಸೃಷ್ಟಿಸಿತು. ಜೊತೆಗೆ ಅದರ ಕಾಮಪ್ರಚೋದಕ ವಿಷಯ ಮತ್ತು ಲೈಂಗಿಕ ವಿಷಯದ ಕಾರಣದಿಂದಾಗಿ ಭಾರತದಲ್ಲಿ ನಿಷೇಧಿಸಲಾಯಿತು.
ಜಿಸ್ಮ್ ಸರಣಿ ( Jism series ) : ಇದು 2003ರಲ್ಲಿ ಬಿಡುಗಡೆಯಾದ ಕಾಮ ಪ್ರಚೋದಕ ಥ್ರಿಲ್ಲರ್ ಚಲನಚಿತ್ರವಾಗಿದೆ. ಇದು ನೀಲಿ ಚಿತ್ರ ತಾರೆಯಾಗಿದ್ದ ಸನ್ನಿ ಲಿಯೋನ್ ಅವರು ಬಾಲಿವುಡ್‌ಗೆ ಪ್ರವೇಶ ಪಡೆಯಲೂ ವೇದಿಕೆ ಕಲ್ಪಿಸಿತುಯ.
ಉತ್ಸವ್ ( Utsav ): ನಟಿ ರೇಖಾ (Actress Rekha ) ಅವರ 1984ರ ಕಾಮಪ್ರಚೋದಕ ಚಲನಚಿತ್ರವು ಅಂದಿನ ವರ್ಷಗಳಲ್ಲಿ ಹೆಣ್ಣು ಭ್ರೂಣಹತ್ಯೆಯಿಂದಾಗಿ ಭವಿಷ್ಯದಲ್ಲಿ ಭಾರತೀಯ ಜನಸಂಖ್ಯೆಯ ಮೇಲಾಗುವ ಪರಿಣಾಮವನ್ನು ಬಿಂಬಿಸಲಾಗಿದೆ.
ಮಾತೃಭೂಮಿ ( Matrubhoomi ) : ಈ ಚಲನಚಿತ್ರವು ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆ ಮತ್ತು ಲಿಂಗ ಅಸಮತೋಲನವನ್ನು ಆಧರಿಸಿದೆ. ಇದು 2003ರಲ್ಲಿ ಬಿಡುಗಡೆಯಾಯಿತು.
ಬಿಎ ಪಾಸ್ ( BA Pass ): ಈ ಚಲನಚಿತ್ರವು ಮೋಹನ್ ಸಿಕ್ಕಾ ಅವರ 2009 ರ 'ದಿ ರೈಲ್ವೇ ಆಂಟಿ' ಎಂಬ ಸಣ್ಣ ಕಥೆಯನ್ನು ಆಧರಿಸಿದೆ. ಈ ಕತೆಯಾಧಾರಿತ ಚಿತ್ರವು 2013 ರಲ್ಲಿ ಬಿಡುಗಡೆಯಾಯಿತು.
ಡರ್ಟಿ ಪಿಕ್ಚರ್ ( The Dirty Picture ) : ಈ ಚಲನಚಿತ್ರವು ದಕ್ಷಿಣ ಭಾರತದ ನೃತ್ಯತಾರೆ (ಐಟಂ ಸಾಂಗ್ ಡ್ಯಾನ್ಸರ್) ಸಿಲ್ಕ್ ಸ್ಮಿತಾ ಅವರ ಜೀವನ ಚರಿತ್ರೆಯ ಸಿನಿಮಾವಾಗಿದೆ. ಇದರಲ್ಲಿ ವಿದ್ಯಾಬಾಲನ್ ನಟಿಸಿದ್ದಾರೆ. ಕಾಮಪ್ರಚೋದಕ ಪಾತ್ರಗಳಿಗೆ ಹಸರಾಗಿದ್ದ ಸಿಲ್ಕ್ ಸ್ಮಿತಾ ಜೀವನದಲ್ಲಿ ಎದುರಿಸಿದ್ದ ಎಲ್ಲ ಕಷ್ಟಗಳನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿತ್ತು. ಈ ಸಿನಿಮಾ 2011ರಲ್ಲಿ ಬಿಡುಗೆ ಆಗಿದೆ.
ಹಂಟರ್ ( Hunter ): ಇದು 2015 ರಲ್ಲಿ ಬಿಡುಗಡೆಯಾದ ವಯಸ್ಕರ ಹಾಸ್ಯ ಚಿತ್ರವಾಗಿದೆ. ಈ ಚಲನಚಿತ್ರವನ್ನು ಶ್ರೀನಿವಾಸ್ ಅವಸರಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ 2017 'ಬಾಬು ಬಾಗಾ ಬ್ಯುಸಿ' ಎಂದು ತೆಲುಗಿನಲ್ಲಿ ರೀಮೇಕ್ ಮಾಡಲಾಯಿತು.
ಪರ್ಚ್ಡ್ ( Parched ): ಈ ಚಿತ್ರವು ಗುಜರಾತ್‌ನ ನಾಲ್ವರು ಮಹಿಳೆಯರು ಪುರುಷರು, ಲೈಂಗಿಕತೆ ಮತ್ತು ಜೀವನದ ಕುರಿತದ್ದಾಗಿದೆ. ಜೊತೆಗೆ, ತಮ್ಮೊಂದಿಗಿರುವ ರಕ್ಷಸೀ ಪ್ರೌರುತ್ತಿಯ ಪುರುಷರನ್ನು ಹೇಗೆ ಎದುರಿಸುತ್ತಾರೆ ಎಂಬುದರ ಕುರಿತದ್ದಾಗಿದೆ.
ಬ್ಯಾಂಡಿಟ್ ಕ್ವೀನ್ ( Bandit Queen ): 1994ರಲ್ಲಿ ಫೂಲನ್ ದೇವಿಯ ಜೀವನವನ್ನು ಆಧರಿಸಿದ ಜೀವನಚರಿತ್ರೆಯ ಚಲನಚಿತ್ರವಾಗಿದೆ. ಆಕೆ ಜೀವನದಲ್ಲಿ ಎದುರಿಸಿದ ಕಷ್ಟಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.
ಫೈರ್ ( Fire ): ಇದು ಸಲಿಂಗಕಾಮಿ ಸಂಬಂಧಗಳನ್ನು ಸ್ಪಷ್ಟವಾಗಿ ತೋರಿಸುವ ಬಾಲಿವುಡ್ ಮೊದಲ ಮುಖ್ಯವಾಹಿನಿಯ ಚಲನಚಿತ್ರಗಳಲ್ಲಿ ಒಂದಾಗಿದೆ. ಸಲಿಂಗಕಾಮಿ ಸಂಬಂಧವನ್ನು ಪ್ರದರ್ಶಿಸಿದ ಮೊದಲನೆಯ ಚಿತ್ರವಾಗಿದೆ.
ಸಿನ್ಸ್ ( Sins ) : ಈ ಚಿತ್ರವು ಚಿಕ್ಕ ಹುಡುಗಿಯ ವೃದ್ಧ ಪಾದ್ರಿಯೊಂದಿಗೆ ಅಸಾಂಪ್ರದಾಯಿಕ ಪ್ರೇಮ ಮತ್ತು ಭಾವೋದ್ರಿಕ್ತ ಸಂಬಂಧವನ್ನು ಹೊಂದುವದರ ಕುರಿತದ್ದಾಗಿದೆ. ಈ ಚಿತ್ರವು 2005 ರಲ್ಲಿ ಬಿಡುಗಡೆಯಾಯಿತು.