Janhvi Kapoor: ಜಾನ್ವಿ ಕಪೂರ್ ಬೋಲ್ಡ್ ಸೀರೆ ಫೋಟೋಶೂಟ್ ವೈರಲ್
ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಫ್ಯಾಷನ್ಸೆನ್ಸ್ ಯಾವಾಗಲೂ ಗಮನ ಸೆಳೆಯುತ್ತದೆ. ಅದರಲ್ಲೂ ಸೀರೆ ಜೊತೆಯ ಜಾನ್ವಿ ಕಪೂರ್ ಯಾವುದೇ ತಪ್ಪು ಮಾಡಲಾರರು ಎಂದು ಅವರ ಹೊಸ Instagram ಫೋಟೋಗಳಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ನಟಿ ಕಂದು ಬಣ್ಣದ ಸೀರೆಯಲ್ಲಿ ಸಖತ್ ಬೋಲ್ಡ್ ಮತ್ತು ಸೆಕ್ಸಿ ಆಗಿ ಕಾಣಿಸಿಕೊಂಡಿದ್ದಾರೆ.
ಜಾನ್ವಿ ಕಪೂರ್ ಮಮತ್ತೊಮ್ಮೆ ತಮ್ಮ ಬೋಲ್ಡ್ ಹಾಗೂ ಸೆಕ್ಸಿ ಲುಕ್ ಮೂಲಕ ಇಂಟರ್ನೆಟ್ಗೆ ಬೆಂಕಿ ಹಂಚಿದ್ದಾರೆ. ನಟಿ ತನ್ನ ಫೋಟೋಶೂಟ್ ಒಂದರಿಂದ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಶುಕ್ರವಾರ Instagram ಖಾತೆಯಲ್ಲಿ ಈ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫುಲ್ ಡಿಫ್ರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಜಾನ್ವಕಂದು ಬಣ್ಣದ ಸೀರೆಯನ್ನು ಧರಿಸಿ ಸುಂದರವಾದ ಮೂಗುತಿಯೊಂದಿಗೆ ತನ್ನ ಉಡುಪನ್ನು ಪೂರ್ಣಗೊಳಿಸಿದ್ದಾರೆ.
ಈ ಬಾರಿ ಸನ್ ಕಿಸ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ ಜಾನ್ವಿ. ತನ್ನ ಕೂದಲನ್ನು ಬಿಡದೆ ಗ್ಲಾಮ್ ಮೇಕ್ಅಪ್ನಲ್ಲಿ ಅವರು ಗೋಲ್ಡನ್ ಅವರ್ ಬೆಳಕಿನಲ್ಲಿ ಕ್ಯಾಮೆರಾಗೆ ವಿವಿಧ ಭಂಗಿಗಳಲ್ಲಿ ಪೋಸ್ ನೀಡಿದ್ದಾರೆ.
ದೀಪದ ಎಮೋಜಿಯ ಜೊತೆ ಫೋಟೋದ ಶೀರ್ಷಿಕೆಯನ್ನು ಶಾರ್ಟ್ ಆಂಡ್ ಸ್ವೀಟ್ ಆಗಿ ಇರಿಸಿದ್ದಾರೆ. ಆಕೆಯ ವದಂತಿಯ ಪ್ರೇಮಿ ಶಿಖರ್ ಪಹಾರಿಯಾ ಹೃದಯದ ಎಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ. ಅಂಶುಲಾ ಕಪೂರ್, 'Brooooo (ಬೆಂಕಿಯ ಎಮೋಜಿ)' ಎಂದು ಪ್ರತಿಕ್ರಿಯಿಸಿದ್ದಾರೆ. ಗಾಯಕ ಅಂತರಾ ಮಿತ್ರ ಬರೆದಿದ್ದಾರೆ, "ತುಂಬಾ ಅದ್ಭುತವಾಗಿದೆ!' ಎಂದಿದ್ದಾರೆ.
ಈ ನಡುವೆ ಅಭಿಮಾನಿಯೊಬ್ಬರು 'ನಾನು ಬಿದ್ದಿದ್ದೇನೆ ಮತ್ತು ಎದ್ದೇಳಲು ಸಾಧ್ಯವಾಗುತ್ತಿಲ್ಲ' ಎಂದು ಬರೆದಿದ್ದಾರೆ. 'ಉಸಿರಾಡಲೂ ಆದ್ರೂ ಬಿಡಿ, ಇನ್ನೂ ಬಿಳಿ ಸೀರೆಯ ಹ್ಯಾಂಗೊವರ್ ಇದೆ' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಜಾನ್ವಿ ಅವರ ಈ ಲುಕ್ಗೆ ಫ್ಯಾನ್ಸ್ ಹಾಗೂ ಫಾಲೋವರ್ಸ್ ಬೋಲ್ಡ್ ಆಗಿದ್ದಾರೆ. 'ತುಂಬಾ ಚೆನ್ನಾಗಿದೆ , ತುಂಬಾ ಮುದ್ದಾಗಿದೆ, ಸುಂದರವಾಗಿ ಮತ್ತು ಹಾಟ್ ಆಗಿ ಕಾಣುತ್ತಿದ್ದಿರಾ, ಅದ್ಭುತ, ನೀವು ವಿಭಿನ್ನವಾಗಿ ಕಾಣುತ್ತೀರಿ' ಎಂದೆಲ್ಲಾ ಕಾಮೆಂಟ್ ಮಾಡಿ ಮೆಚ್ಚಗೆ ಸೂಚಿಸಿದ್ದಾರೆ.
ಜಾಹ್ನವಿ ಕಪೂರ್ 2022 ರಲ್ಲಿ ಸಖತ್ ಬ್ಯುಸಿಯಾಗಿದ್ದರು. ಎರಡು ಚಿತ್ರಗಳು ಬ್ಯಾಕ್-ಟು-ಬ್ಯಾಕ್ ಬಿಡುಗಡೆಯಾಗಿವೆ. ಆಕೆಯ ಮೊದಲ ಚಿತ್ರ, ಗುಡ್ ಲಕ್ ಜೆರ್ರಿ ಮತ್ತು ಎರಡನೆಯದು ಮಲಯಾಳಂ ಚಲನಚಿತ್ರ ಹೆಲೆನ್ನ ಅಧಿಕೃತ ಹಿಂದಿ ಆವೃತ್ತಿ ಮಿಲಿ.
ಜಾನ್ವಿ ಕಪೂರ್ ಮತ್ತು ಅವರ ಸಹನಟ ರಾಜ್ಕುಮಾರ್ ರಾವ್ ಮಿಸ್ಟರ್ ಆಂಡ್ ಮಿಸಸ್ ಮಾಹಿ ಸಿನಿಮಾದನಲ್ಲಿ ಕ್ರಿಕೆಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಜಾನ್ವಿ ಕಪೂರ್ ಮತ್ತು ರಾಜ್ಕುಮಾರ್ ರಾವ್ ಜೊತೆಗೆ, ಅಭಿಷೇಕ್ ಬ್ಯಾನರ್ಜಿ, ಕುಮುದ್ ಮಿಶ್ರಾ, ಜರೀನಾ ವಹಾಬ್, ರಾಜೇಶ್ ಶರ್ಮಾ ಮತ್ತು ಇತರರು ತಾರಾಗಣದಲ್ಲಿದ್ದಾರೆ.
ಭಾರತ ತಂಡದ ಮಾಜಿ ನಾಯಕ ಹಾಗೂ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಸುತ್ತ ಕಥೆ ಸಾಗಲಿದೆ. ಚಿತ್ರದಲ್ಲಿ ಮಹೇಂದ್ರ ಪಾತ್ರದಲ್ಲಿ ರಾಜ್ಕುಮಾರ್ ನಟಿಸಿದ್ದರೆ, ಮಹಿಮಾ ಪಾತ್ರದಲ್ಲಿ ಜಾನ್ವಿ ನಟಿಸುತ್ತಿದ್ದಾರೆ. ಇದಲ್ಲದೆ ವರುಣ್ ಧವನ್ ಜೊತೆಗಿನ ನಿತೇಶ್ ತಿವಾರಿ ಅವರ ಬವಾಲ್ ಚಿತ್ರ ಕೂಡ ಅವರ ಜೋಳಿಗೆಯಲ್ಲಿದೆ.