ನಾ ನಿಮ್ಮ ಫ್ಯಾನ್ ಎಂದ ಜನಪ್ರಿಯ ನಿರ್ದೇಶಕ ಮಣಿರತ್ನಂ, ಶಾಕ್ ಆದ ಸಾಯಿ ಪಲ್ಲವಿ ಹೀಗ್ ಮಾಡಿದ್ರು!
ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಜೊತೆಯಾಗಿ ನಟಿಸಿರುವ ಚಿತ್ರ ಅಮರನ್ ನ ಆಡಿಯೋ ಬಿಡುಗಡೆ ಸಮಾರಂಭದಲ್ಲಿ, ಮಣಿರತ್ನಂ ವೇದಿಕೆ ಮೇಲೆ ನಿಂತು ನಾನು ನಿಮ್ಮ ಅಭಿಮಾನಿ ಎಂದು ಸಾಯಿ ಪಲ್ಲವಿಗೆ ಹೇಳಿದ್ದಾರೆ.
ಅಲ್ಫೋನ್ಸ್ ಪುತ್ರನ್ ಅವರ ಪ್ರೇಮಂ (2015) ಚಿತ್ರದ ಬ್ಲಾಕ್ಬಸ್ಟರ್ ಯಶಸ್ಸಿನ ನಂತರ, ಸಾಯಿ ಪಲ್ಲವಿ (Sai Pallavi) ಮನೆಮಾತಾದರು. ನಿವಿನ್ ಪೌಲಿ ಅಭಿನಯದ ಚಿತ್ರದ ಪ್ರಭಾವ ಎಷ್ಟಿತ್ತೆಂದರೆ ಸಾಯಿ ಪಲ್ಲವಿ ಕೇರಳದಲ್ಲಿ ಮಾತ್ರವಲ್ಲ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲೂ ಖ್ಯಾತಿಯನ್ನು ಗಳಿಸಿದರು.
ಸಾಯಿ ಪಲ್ಲವಿ ತಮಿಳು ಮೂಲದವರಾಗಿದ್ದರೂ, ದಿಯಾ (2018) ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡುವ ಮೊದಲು ಅವರು ಒಂದು ಮಲಯಾಳಂ ಚಿತ್ರ (ಕಾಳಿ) ಮತ್ತು ಎರಡು ತೆಲುಗು ಚಿತ್ರಗಳಲ್ಲಿ (ಫಿದಾ, ಮಿಡಲ್ ಕ್ಲಾಸ್ ಅಬ್ಬಾಯಿ) ನಟಿಸಿದ್ದಾರೆ. ನಿರ್ದೇಶಕ ಮಣಿರತ್ನಂ (Director Maniratnam) ಅವರು 2017 ರ ತಮ್ಮ ಚಿತ್ರ ಕಾಟ್ರು ವೆಲಿಯಿಡೈ ಮೂಲಕ ಅವರನ್ನು ತಮಿಳಿನಲ್ಲಿ ಪರಿಚಯಿಸಬೇಕಿತ್ತು. ಆದರೆ ಕಾರಣಾಂತರಗಳಿಂದ, ಆ ಪಾತ್ರವನ್ನು ನಂತರ ಅದಿತಿ ರಾವ್ ಹೈದರಿ ನಿರ್ವಹಿಸಿದರು.
ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಅಮರನ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಣಿರತ್ನಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆ ಏರಿ ಮಾತನಾಡಿದ ಜನಪ್ರಿಯ ನಿರ್ದೇಶಕ ಮಣಿರತ್ನಂ ಸಾಯಿ ಪಲ್ಲವಿ ಅವರಿಗೆ "ನಾನು ನಿಮ್ಮ ದೊಡ್ಡ ಅಭಿಮಾನಿ (I am Bigg Fan of You). ಒಂದು ದಿನ ನಾನು ನಿಮ್ಮೊಂದಿಗೆ ಕೆಲಸ ಮಾಡುತ್ತೇನೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
ಭಾರತದ ಜನಪ್ರಿಯ ನಿರ್ದೇಶಕ ಮಣಿ ರತ್ನಂ ಅವರು ನಾನು ನಿಮ್ಮ ಅಭಿಮಾನಿ ಎಂದು ಹೇಳ್ತಿರೋದನ್ನ ಕೇಳಿ ಸಾಯಿ ಪಲ್ಲವಿ ಒಂದು ಕ್ಷಣ ಶಾಕ್ ಆಗಿದ್ದಾರೆ. ಒಂದ ಕ್ಷಣ ಗೊಂದಲಕ್ಕೂ ಒಳಗಾದರು ನಟಿ. ಜೊತೆಗೆ ಸಂತಸವನ್ನು ಪ್ರದರ್ಶಿಸುತ್ತಾ, ಕೂತಲ್ಲಿಂದಲೇ ನಾನು ನಿಮ್ಮ ಜೊತೆ ನಟಿಸಬೇಕು ಎಂದು ಹೇಳಿದ್ದಾರೆ. ಸದ್ಯ ಸಾಯಿಪಲ್ಲವಿ ಮತ್ತು ಮಣಿರತ್ನಂ ಅವರ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿದೆ.
ಈ ಪ್ರಶಂಸೆಗೆ ಪ್ರತಿಕ್ರಿಯಿಸಿದ ಸಾಯಿ ಪಲ್ಲವಿ, ಚಲನಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳ ಆಯ್ಕೆಗೆ ಹೇಗೆ ಜವಾಬ್ದಾರರಾಗಿರುತ್ತಾರೆ ಎಂಬುದರ ಬಗ್ಗೆ ಮಾತನಾಡಿದರು. "ಚಿತ್ರರಂಗಕ್ಕೆ ಬರುವ ಮೊದಲು, ಮಣಿರತ್ನಂ ಹೊರತುಪಡಿಸಿ ನನಗೆ ಯಾವ ನಿರ್ದೇಶಕರ ಹೆಸರುಗಳು ತಿಳಿದಿರಲಿಲ್ಲ. ನಿಜ ಹೇಳಬೇಕು ಅಂದ್ರೆ , ನಾನು ಸ್ಕ್ರಿಪ್ಟ್ಗಳು ಮತ್ತು ಪಾತ್ರಗಳ ಬಗ್ಗೆ ಆಯ್ಕೆ ಮಾಡೋದಕ್ಕೆ ಇಷ್ಟೊಂದು ಚೂಸಿಯಾಗಿರಲು ಕಾರಣವೇ ಮಣಿರತ್ನಂ ಸರ್ ಎಂದು ಹೇಳಿದ್ದಾರೆ ಸಾಯಿ ಪಲ್ಲವಿ. .
ದಿವಂಗತ ಮೇಜರ್ ಮುಕುಂದ್ ವರದರಾಜನ್ ಅವರ ಜೀವನವನ್ನು ಆಧಾರಿತ ಅಮರಾನ್ ಸಿನಿಮಾದಲ್ಲಿ ಮೇಜರ್ ಮುಕುಂದ್ ಪಾತ್ರವನ್ನು ಮಾಡಿದ ಶಿವಕಾರ್ತಿಕೇಯನ್ (Sivakarthikeyan) ಅವರನ್ನು ಸಹ ಹೊಗಳಿದ ಮಣಿರತ್ನಂ "ಕೆಲವು ನಟರು ಪಾದಾರ್ಪಣೆ ಮಾಡಿದ ಕೂಡಲೇ ದೊಡ್ಡ ಹೀರೋಗಳಾಗುತ್ತಾರೆ. ಇನ್ನೂ ಕೆಲವರು ಹಂತ ಹಂತವಾಗಿ ಯಶಸ್ಸಿನ ಏಣಿಯನ್ನು ಏರಬೇಕು. ಆ ರಂಗದಲ್ಲಿ, ನೀವು ಎರಡನೆಯವರಂತೆ ಇದ್ದೀರಿ ... ನನ್ನಂತೆಯೇ ಎಂದು ಹೇಳಿದ್ದಾರೆ.
ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಮತ್ತು ಸೋನಿ ಪಿಕ್ಚರ್ಸ್ ಇಂಟರ್ನ್ಯಾಷನಲ್ ಬೆಂಬಲದೊಂದಿಗೆ ಅಮರನ್ ಚಿತ್ರವನ್ನು ರಾಜ್ಕುಮಾರ್ ಪೆರಿಯಸಾಮಿ ನಿರ್ದೇಶಿಸಿದ್ದಾರೆ. ಸಿಎಚ್ ಸಾಯಿ ಅವರ ಛಾಯಾಗ್ರಹಣ ಮತ್ತು ಜಿ.ವಿ.ಪ್ರಕಾಶ್ ಕುಮಾರ್ ಅವರ ಸಂಗೀತದೊಂದಿಗೆ, ಅಮರನ್ ಈ ದೀಪಾವಳಿಗೆ ತೆರೆಗೆ ಬರಲಿದೆ.