ಬಾಲಿವುಡ್ನ ಹಾಟ್ ಆ್ಯಂಡ್ ಸೆಕ್ಸಿ ಹೀರೋಗಳಿವರು!
ಫಿಟ್ ಆ್ಯಂಡ್ ಹಾಟ್ ಬಾಡಿ ಮೈಟೇನ್ ಮಾಡುವುದು ಈಗ ಸಿನಿಮಾ ಸ್ಟಾರ್ಸ್ನಲ್ಲಿ ಕಾಮನ್. ಇದು ಕೇವಲ ಹೀರೋಯನ್ಗಳಿಗೆ ಮಾತ್ರ ಸೀಮಿತವಾಗಿಲ್ಲ. ಬಾಲಿವುಡ್ನ ಹಲವು ಹೀರೋಗಳ ಸೆಕ್ಸಿ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ತೆರೆ ಮೇಲಿನ ಅವರ ಹಾಟ್ ಬಾಡಿ ನೋಡಲು ಜನ ಕಾಯುತ್ತಾರೆ. ಬಾಲಿವುಡ್ನ ಕೆಲವು ನಟರು ತಮ್ಮ ಫಿಟ್ ಬಾಡಿಯಿಂದ ಸಖತ್ ಫೇಮಸ್ ಆಗಿದ್ದಾರೆ.
ಹೃತಿಕ್ ರೋಷನ್ನಿಂದ ಜಾನ್ ಅಬ್ರಾಹಂವರೆಗಿನ ಕೆಲವು ನಟರು ತಮ್ಮ ಫಿಟ್ ಬಾಡಿಯಿಂದ ಸಖತ್ ಲೇಡಿ ಫ್ಯಾನ್ ಕ್ಲಬ್ ಹೊಂದಿದ್ದಾರೆ. ಬಾಲಿವುಡ್ನ ಹಾಟ್ ಆಂಡ್ ಸೆಕ್ಸಿ ಹೀರೋಗಳಿವರು.
ರಣವೀರ್ಸಿಂಗ್:
ಬಾಲಿವುಡ್ನ ಮೋಸ್ಟ್ ಫೇಮಸ್ ನಟರಲ್ಲಿ ರಣವೀರ್ ಒಬ್ಬರು. ತಮ್ಮ ನಟನೆಯ ಜೊತೆ ಬಾಡಿಯನ್ನು ಸಖತ್ ಇಂಪ್ರೂವ್ ಮಾಡಿಕೊಂಡಿದ್ದಾರೆ ಗಲ್ಲಿ ಬಾಯಿ ನಟ. ರಣವೀರ್ ತಮ್ಮ ಡಯಟ್ ಹಾಗೂ ವರ್ಕೌಟ್ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ.
ವರುಣ್ ಧವನ್:
ಬಾಲಿವುಡ್ನ ಯುವ ನಟರಲ್ಲಿ ವರುಣ್ ಧವನ್ ಫಿಟ್ ಬಾಡಿಗೆ ಫೇಮಸ್. ಆಗಾಗ ತಮ್ಮ ಪೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.
ಟೈಗರ್ ಶ್ರಾಫ್:
ಬಾಲಿವುಡ್ನಲ್ಲಿ ಬೆಸ್ಟ್ ಬಾಡಿ ಹೊಂದಿರುವ ನಟರಲ್ಲಿ ಟೈಗರ್ ಶ್ರಾಫ್ ಒಬ್ಬರು. ಟೈಗರ್ ಫಿಟ್ನೆಸ್ ಫ್ರೀಕ್ ಹಾಗೂ ಇವರ ಹಾಟ್ ಪೋಟೋಗಳು ಇಂಟರ್ನೆಟ್ ಹರಿದಾಡುತ್ತಿರುತ್ತವೆ.
ಹೃತಿಕ್ ರೋಷನ್:
ಗ್ರೀಕ್ ಗಾಡ್ ಆಫ್ ಬಾಲಿವುಡ್ ಎಂದೇ ಫೇಮಸ್ ಈ ನಟ. ಹೃತಿಕ್ರ ಹಾಟ್ ಆ್ಯಂಡ್ ಸೆಕ್ಸಿ ಬಾಡಿಗೆ ಫಿದಾ ಆಗದವರೇ ಇಲ್ಲ ಎನ್ನಬಹುದು.
ಜಾನ್ ಅಬ್ರಾಹಂ:
ಈ ಪಟ್ಟಿಯಲ್ಲಿ ಜಾನ್ ಅಬ್ರಾಹಂ ಹೆಸರು ಸೇರಿಸದೇ ಬಿಡುವ ಹಾಗೇ ಇಲ್ಲ. ಜಾನ್ರ ಕಿಲ್ಲಿಂಗ್ ಹಾಗೂ ಸೆಕ್ಸಿ ಬಾಡಿಯನ್ನು ಹಲವಾರು ಬಾರಿ ತೆರೆ ಮೇಲೂ ತೋರಿಸಿದ್ದಾರೆ.