ಮತ್ತಷ್ಟು ಹಾಟ್ ಆದ 'ಹೆಬ್ಬುಲಿ' ನಟಿ; ಭಾರತದ ರಿಹಾನ್ನಾ ಎಂದ ನೆಟ್ಟಿಗರು
ಸೆಲೆಬ್ರಿಟಿಗಳ ನೆಚ್ಚಿನ ತಾಣ ಮಾಲ್ಡೀವ್ಸ್ ನಲ್ಲಿ ನಟಿಯರು ಬಿಕಿನಿ ಧರಿಸಿ ಪೋಸ್ ಕೊಡುವುದೇ ಒಂದು ಟ್ರೆಂಡ್ ಆಗಿದೆ. ಇದೀಗ ನಟಿ ಅಮಲಾ ಪೌಲ್ ಕೂಡ ಮಾಲ್ಡೀವ್ಸ್ ನಲ್ಲಿದ್ದು ಮಸ್ತ್ ಮಜಾ ಮಾಡುತ್ತಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಸದ್ಯ ಮಾಲ್ಡೀವ್ಸ್ ನಲ್ಲಿದ್ದಾರೆ. ಮಾಲ್ಡೀವ್ಸ್ ಬೀಚ್ ಎಂಜಾಯ್ ಮಾಡುತ್ತಿರುವ ನಟಿ ಅಮಲಾ ಪೌಲ್ ಮಸ್ತ್ ಮಜಾ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಸೆಲೆಬ್ರಿಟಿಗಳ ನೆಚ್ಚಿನ ತಾಣ ಮಾಲ್ಡೀವ್ಸ್ ನಲ್ಲಿ ನಟಿಯರು ಬಿಕಿನಿ ಧರಿಸಿ ಪೋಸ್ ಕೊಡುವುದು ಟ್ರೆಂಡ್ ಆಗಿದೆ. ಭಾರತದ ಬಹುತೇಕ ನಟಿಯರು ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗುತ್ತಿರುತ್ತಾರೆ. ಇದೀಗ ಅಮಲಾ ಪೌಲ್ ಕೂಡ ಮಾಲ್ಡೀವ್ಸ್ ನಲ್ಲಿದ್ದು ಮಸ್ತ್ ಪೋಸ್ ನೀಡಿದ್ದಾರೆ.
ಇತ್ತೀಚಿಗಷ್ಟೆ ಬಿಕಿನಿಯಲ್ಲಿ ಪೋಸ್ ನೀಡಿದ್ದ ಫೋಟೋಗಳನ್ನು ಹಂಚಿಕೊಂಡಿದ್ದ ಅಮಲಾ ಇದೀಗ ಮತ್ತಷ್ಟು ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆರೆಂಜ್ ಬಣ್ಣದ ಸ್ವಿಮ್ಸೂಟ್ ನಲ್ಲಿ ಅಮಲಾ ಪೌಲ್ ಹಾಟ್ ಪೋಸ್ ನೀಡಿದ್ದಾರೆ.
ಅಮಲಾ ಪೌಲ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೆ ಮಾಜಿ ಪ್ರಿಯತಮ ಭವನೀಂದನ್ ಸಿಂಗ್ ಧತ್ ವಿರುದ್ಧ ವಂಚನೆ ಮತ್ತು ಕಿರುಕುಳ ಪ್ರಕರಣ ದಾಖಲಿಸಿ ಸುದ್ದಿಯಾಗಿದ್ದರು. ಭಾವನೀಂದರ್ ಸಿಂಗ್ ಬ್ಯುಸಿನೆಸ್ ಡೀಲ್ ನಲ್ಲಿ ಮೊಸ ಮಾಡಿದ್ದಾರೆ ಹಾಗೂ ತನ್ನ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿರುವ ಅಮಲಾ ಪೌಲ್ ವಿಲ್ಲುಪುರಂ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದರು.
ಇದರ ಬೆನ್ನಲ್ಲೇ ಇದೀಗ ಅಮಲಾ ಪೌಲ್ ಮಾಲ್ಡೀವ್ಸ್ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಹಾಟ್ ಫೋಟೋ ಶೇರ್ ಮಾಡಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಅಮಲಾ ಫೋಟೋಗಳಿಗೆ ತರವಹೇವಾರಿ ಕಾಮೆಂಟ್ ಹರಿದುಬಂದಿವೆ. ಕೆಲವರು ಭಾರತದ ರಿಹಾನ್ನಾ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆವರು ಹಾಟ್, ಬೆಂಕಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಮಲಾ ಪೌಲ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಸಿನಿಮಾ ಜೊತೆಗೆ ವೆಬ್ ಸೀರಿಸ್ ನಲ್ಲೂ ಬ್ಯುಸಿಯಾಗಿದ್ದಾರೆ. ಟೀಚರ್, ಕ್ರಿಸ್ಟೋಪರ್ ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ತಮಿಳಿನ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ.
ದಕ್ಷಿಣ ಭಾರತದ ಸುಂದರಿ ಅಮಲಾ ಪೌಲ್ ಕನ್ನಡ ಸಿನಿಮಾದಲ್ಲೂ ಮಿಂಚಿದ್ದಾರೆ. ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾದಲ್ಲಿ ಅಮಲಾ ಪೌಲ್ ನಟಿಸುವ ಮೀೂಲಕ ಕನ್ನಡ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನಿಮಾ ಬಳಿಕ ಮತ್ತೆ ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ.