ತುಳುನಾಡ ಸಂಪ್ರದಾಯ ಬಿಡದ ಐಶ್: ಕೈಯ್ಯಲ್ಲಿರುತ್ತೆ ಈ ವಿಶೇಷ ಉಂಗುರ!

First Published 19, Mar 2020, 3:55 PM

ತುಳುನಾಡ ಮಗಳು, ವಿಶ್ವ ಸುಂದರಿ, ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಮೂಲತಃ ದಕ್ಷಿಣ ಕನ್ನಡದವರು ಎಂಬ ವಿಚಾರ ಎಲ್ಲರಿಗೂ ತಿಳಿದಿರುವಂತಹುದ್ದೇ. ಸದ್ಯ ಬಚ್ಚನ್ ಕುಟುಂಬದ ಸೊಸೆಯಾಗಿರುವ ಐಶ್, ಅದೆಷ್ಟೇ ಫ್ಯಾಷನೇಬಲ್ ಆಗಿದ್ದರೂ, ಮಂಗಳೂರಿನ ಅದರಲ್ಲೂ ವಿಶೇಷವಾಗಿ ತಾನು ಹುಟ್ಟಿ ಬೆಳೆದ ಬಂಟ ಸಮುದಾಯದ ಸಂಪ್ರದಾಯವನ್ನು ಮರೆತಿಲ್ಲ. ಹೌದು ಸಿನಿಮಾ ಜಗತ್ತಿಗೆ ಎಂಟ್ರಿ ಕೊಟ್ಟ ಬಳಿಕ ನಿಜ ಜೀವನದಲ್ಲಿ ಬದಲಾಗದಿದ್ದರೂ, ನಟನೆ ವೇಳೆ ಕೆಲ ವಿಚಾರಗಳನ್ನು ಮರೆತು ಬದಲಾವಣೆಯನ್ನು ಳವಡಿಸಿಕೊಳ್ಳಬೇಕಾಗುತ್ತದೆ. ಆದರೆ ಐಶ್ ಮಾತ್ರ ಬಂಟ ಸಮುದಾಯದ ಸಂಪ್ರದಾಯವೊಂದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಪರದೆ ಹಿಂದಿರಲಿ, ಆನ್ ಸ್ಕ್ರೀನ್ ಆಗಿರಲಿ ಈ ತುಳುನಾಡ ಕುವರಿ ಒಂದು ವಿಚಾರದಲ್ಲಿ ಮಾತ್ರ ಬದಲಾಗಿಲ್ಲ. 

ಐಶ್ವರ್ಯಾ ರೈ, ಮಂಗಳೂರಿನಲ್ಲಿ ಜನಿಸಿದ ಈ ತುಳುನಾಡ ಮಗಳು ಸದ್ಯ ಬಚ್ಚನ್ ಕುಟುಂಬದ ಸೊಸೆಯಾಗಿ ಮುಂಬೈನಲ್ಲಿ ನೆಲೆಸುತ್ತಿದ್ದಾರೆ.

1994ರಲ್ಲಿ ವಿಶ್ವ ಸುಂದರಿಯಾಗಿ ಹೊರ ಹೊಮ್ಮಿದ ಐಶ್ವರ್ಯಾ ಬಳಿಕ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಬೇಡಿಕೆಯ ನಟಿಯಾಗಿ ಮಾರ್ಪಾಡಾಗುತ್ತಾರೆ.

ತನ್ನ ನೀಲಿಗಣ್ಣುಗಳಿಂದಲೇ ಅನೇಕರ ಮನ ಕದ್ದಿದ್ದ ಐಶ್ವರ್ಯಾ, ಸಕ್ಕತ್ ಫ್ಯಾಷನೇಬಲ್ ಕೂಡಾ.

ಅಮಿತಾಬ್ ಬಚ್ಚನ್ ಪುತ್ರ, ಅಭಿಷೇಕ್ ಬಚ್ಚನ್ ಮಡದಿಯಾಗಿರುವ ಐಶ್ವರ್ಯಾ ರೈ ಒಂದು ಮಗುವಿನ ತಾಯಿ. ಹೀಗಿದ್ದರೂ ಬಾಲಿವುಡ್‌ನಲ್ಲಿ ಇಂದಿಗೂ ಇವರಿಗೆ ಬೇಡಿಕೆ ಇದೆ.

ಹೀಗಿದ್ದರೂ ಮದುವೆ ಬಳಿಕ ಸಿನಿ ಕ್ಷೇತ್ರದಿಂದ ಕೊಂಚ ದೂರವೇ ಉಳಿದಿರುವ ನೀಲಿಗಣ್ಣಿನ ಸುಂದರಿ, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ.

ಇನ್ನು ಐಶ್ವರ್ಯಾ ರೈ ಮಾಯಾನಗರಿಗೆ ಹಾರಿ, ವಿಶ್ವ ಸುಂದರಿಯಾಗಿ ಹೊರಹೊಮ್ಮಿ, ಬಾಲಿವುಡ್‌ನ ಬಹು ಬೇಡಿಕೆಯ ನಟಿಯಾಗಿದ್ದರೂ ಮಂಗಳೂರಿನ ಸಂಸ್ಕೃತಿ ಮಾತ್ರ ಮರೆತಿಲ್ಲ.

ಮಂಗಳೂರಿನ ಅತ್ಯಂತ ಪ್ರಭಾವಿ ಬಂಟ ಸಮುದಾಯದಲ್ಲಿ ಹುಟ್ಟಿ ಬೆಳೆದ ಐಶ್ವರ್ಯಾ ಇಂದಿಗೂ ತುಳು ಭಾಷೆಯನ್ನು ಚೆನ್ನಾಗಿ ಮಾತನಾಡುತ್ತಾರೆ.

ತುಳು ಭಾಷೆಯಷ್ಟೇ ಅಲ್ಲ, ಅವರು ಯಾವತ್ತೂ ಧರಿಸುವ ಒಡ್ಡಿಂಗಿಲ[ಒಡ್ಡಿಯುಣಗುರ] ಕೂಡಾ ಅವರಿನ್ನೂ ತುಳುನಾಡ ಸಂಪ್ರದಾಯಕ್ಕೆ ಎಷ್ಟು ಮಹತ್ವ ನೀಡುತ್ತಾರೆ ಎಂಬುವುದಕ್ಕೆ ಸಾಕ್ಷಿಯಾಗಿದೆ.

ಬಹುತೇಕವಾಗಿ ಫ್ಯಾಷನ್ ಲೋಕಕ್ಕೆ ಎಂಟ್ರಿ ನೀಡಿದ ಬಳಿಕ ಇಂತಹ ಸಂಪ್ರದಾಯಕ್ಕೆ ಗುಡ್‌ ಬೈ ಎನ್ನುವವರೇ ಅನೇಕರಿರುತ್ತಾರೆ. ಇಂತಹವರ ಮಧ್ಯೆ ಐಶ್ವರ್ಯಾ ಭಿನ್ನವಾಗಿ ಕಂಡು ಬರುತ್ತಾರೆ.

ಸಿನಿ ಕ್ಷೇತ್ರದಲ್ಲಿರುವವರು ಆಫ್ ಸ್ಕ್ರೀನ್ ಅಲ್ಲದಿದ್ದರೂ, ಆನ್‌ ಸ್ಕ್ರೀನ್‌ನಲ್ಲಾದರೂ ನಿರ್ದೇಶಕರು ಹೇಳುವ ಬದಲಾವಣೆಗೆ ತಲೆದೂಗಿ ಅವುಗಳನ್ನು ಅನುಸರಿಸುತ್ತಾರೆ. ಆದರೆ ಐಶ್ವರ್ಯಾ ಮದುವೆಯಾದ ಬಳಿಕದ ಪ್ರತಿಯೊಂದೂ ಫೋಟೋ, ವಿಡಿಯೋ ಅಷ್ಟೇ ಯಾಕೆ? ಜಾಹೀರಾತು ಹಾಗೂ ಸಿನಿಮಾಗಳಲ್ಲೂ ಈ ಉಂಗುರವನ್ನು ತೆಗೆದಿರಿಸಿಲ್ಲ.

ಬಂಟ ಸಮುದಾಯದಲ್ಲಿ ನಿಶ್ಚಿತಾರ್ಥಕ್ಕೆ ಹಾಕುವ ಉಂಗುರವನ್ನು 'ಒಡ್ಡಿಂಗಿಲ' ಅನ್ನುತ್ತಾರೆ. 'ವಿ' ಆಕಾರದಲ್ಲಿ ಇರುವ ಈ ಉಂಗುರ ಧರಿಸಿದ್ದರೆ ನಿಶ್ಚಿತಾರ್ಥವಾಗಿದೆ ಎಂದು ಪರಿಗಣಿಸುವುದು ವಾಡಿಕೆ.

ಒಡ್ಡಿಂಗಿಲವು ಸರಳವಾಗಿ ಇರುವುದೂ ಉಂಟು. 'ವಿ' ಆಕಾರದ ತುದಿಯಲ್ಲಿ ವಜ್ರವನ್ನು ಇರಿಸಿ ಮಾಡುವ, ಅಥವಾ ಹರಳುಗಳನ್ನೇ ಇರಿಸಿ ಮಾಡುವ ಉಂಗುರಗಳು ಇವೆ. ಖರ್ಚು ಮಾಡುವ ಸಾಮರ್ಥ್ಯಕ್ಕೆ ಅನುಗುಣವಾಗಿ ಅಕ್ಕಸಾಲಿಗರು ವಿನ್ಯಾಸವನ್ನು ತೋರಿಸುತ್ತಾರೆ.

ಬಂಟ ಸಮುದಾಯದಲ್ಲಿ ವಿವಾಹಿತ ಮಹಿಳೆ ತಪ್ಪದೇ ಧರಿಸುವ ಈ ಉಂಗುರು ಅವರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಐಶ್ವರ್ಯಾ ಫ್ಯಾಷನ್‌ ವಿಚಾರದಲ್ಲೂ ಎತ್ತಿದ ಕೈ, ಹೀಗಿದ್ದರೂ ಅದೆಷ್ಟೇ ಫ್ಯಾಷನೇಬಲ್ ಬಟ್ಟೆ ಧರಿಸಿದರೂ ಇವರು ತಮ್ಮ ಕೈಯ್ಯಲ್ಲಿರುವ ಈ ಉಂಗುರನ್ನು ಮಾತ್ರ ತಪ್ಪದೇ ಅವರ ಕೈಯ್ಯಲ್ಲಿರುತ್ತದೆ.

ನಟಿಯಾಗಿರುವ ಐಶ್ವರ್ಯಾ ರೈ ಬಚ್ಚನ್ ಮನೆ ಸೊಸೆಯಾಗಿ, ತುಳುನಾಡಿನ ಮಗಳಾಗಿ ಕುಟುಂಬದ ಜವಾಬ್ದಾರಿ ವಹಿಸಿಕೊಂಡು ಸಾಗುತ್ತಿದ್ದಾರೆ.

ಇನ್ನು ಇದು ನಿಜಾನಾ? ಎಂದು ಪ್ರಶ್ನಿಸುವವರು ಐಶ್ವರ್ಯಾ ರೈ ನಿಶ್ಚಿತಾರ್ಥ, ಮದುವೆ ಬಳಿಕದ ಫೋಟೋಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅನುಮಾನ ಪರಿಹರಿಸಿಕೊಳ್ಳಬಹುದು

loader