ಪೋಟೋದಿಂದಲೇ ಹವಾ ಎಬ್ಬಿಸಿದ ರಶ್ಮಿಕಾ, ಹಾಟ್ ಎಂದ ಆಶಿಕಾ
ಹೈದರಾಬಾದ್ (ಜೂ. 15) ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ್ದಾರೆ. ವಿಶಿಷ್ಟ ಪೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಕೃಪೆ; ರಶ್ಮಿಕಾ ಮಂದಣ್ಣ ಇಸ್ಟಾಗ್ರ್ಯಾಮ್
ದೊಡ್ಡ ಕೆಲಸವನ್ನು ಮಾಡಲು ಹೊರಟಿರುವ ಹುಡುಗಿ ಚಿಕ್ಕ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.. ಈ ಮಾತನ್ನು ನನಗೆ ಅನ್ವಯ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಅವರು ಹಂಚಿಕೊಂಡಿರುವ ಪೋಟೋ ವೈರಲ್ ಆಗುತ್ತಿದ್ದು ಕಮೆಂಟ್ ಗಳು ಹರಿದು ಬರುತ್ತಿವೆ.
ಸ್ಯಾಂಡಲ್ವುಡ್ ನಟಿ ಆಶಿಕಾ ರಂಗನಾಥ್ ಸಹ ಈ ಪೋಟೋಕ್ಕೆ ಮೆಚ್ಚುಗೆ ಸೂಚಿಸಿದ್ದು 'ಹಾಟ್' ಎಂದು ಕರೆದಿದ್ದಾರೆ.
ಬಾಲಿವುಡ್ ನಲ್ಲಿಯೂ ಅವಕಾಶ ಗಿಟ್ಟಿಸಿಕೊಂಡಿರುವ ರಶ್ಮಿಕಾ ಶೂಟಿಂಗ್ ಗಾಗಿ ಮುಂಬೈಗೆ ತೆರಳಿದ್ದರು.
ಸ್ಯಾಂಡಲ್ ವುಡ್ ಕಿರಿಕ್ ಪಾರ್ಟಿಯಿಂದ ಪದಾರ್ಪಣೆ ಮಾಡಿದ ರಶ್ಮಿಕಾ ನಂತರ ತೆಲುಗು ಮತ್ತು ತಮಿಳು ಚಿತ್ರದಲ್ಲಿ ಬ್ಯೂಸಿಯಾದರು.