ಬೆತ್ತಲೆ ದೃಶ್ಯ ಚಿತ್ರೀಕರಣದ ವೇಳೆ ಇದ್ದ 15 ಪುರುಷರನ್ನೂ ನನ್ನ ಗಂಡನೆಂದೇ ಭಾವಿಸಿದ್ದೆ: ನಟಿ ಅಮಲಾ ಪೌಲ್
ಚನ್ನೈ (ಸೆ.16): ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ನಟಿ ಅಮಲಾ ಪೌಲ್ ಎಲ್ಲರಿಗೂ ಚಿರಪರಿಚಿತಳೇ. ಬೆರಳೆಣಿಕೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದರೂ ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. ನಮ್ಮ ದೇಶದಲ್ಲಿ ಸಿನಿಮಾದಲ್ಲಿ ಬೆತ್ತಲೆಯಾಗಿ ನಟಿಸಿದ ಕೆಲವೇ ಕೆಲವು ನಟಿಯರ ಪೈಕಿ ಅಮಲಾ ಪೌಲ್ ಕೂಡ ಒಬ್ಬರಾಗಿದ್ದಾರೆ. ಆದರೆ, ಬೆತ್ತಲೆ ದೃಶ್ಯ ಚಿತ್ರೀಕರಣದ ವೇಳೆ ಲಭ್ಯರಿದ್ದ 15 ಜನ ಪುರುಷರನ್ನು (ಲೈಟ್ ಮ್ಯಾನ್, ಕ್ಯಾಮರಾಮ್ಯಾನ್ ಹಾಗೂ ಇತರರು) ನನ್ನ ಗಂಡಂದಿರೆಂದುಕೊಂಡೇ ನಟನೆ ಮಾಡಿದ್ದೇನೆ ಎಂದು ನಟಿ ಅಮಲಾ ಪೌಲ್ ಹೇಳಿಕೊಂಡಿದ್ದಾರೆ.
ಕೇರಳ ಮೂಲದ ಅಮಲಾ, ನೀಲತಾಮರನ್ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್ನ ಮೈನಾ ಚಿತ್ರದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್, ವಿಕ್ರಮ್, ಸೂರ್ಯ, ಆರ್ಯ, ಜಯಂ ರವಿ, ಧನುಷ್ ಸೇರಿದಂತೆ ಕಾಲಿವುಡ್ ಸೂಪರ್ಸ್ಟಾರ್ಗಳ ಜೊತೆ ನಟಿಸಿದ್ದಾರೆ.
ಅಮಲಾಪೌಲ್ ನೇರವಾಗಿ ಮಾತನಾಡುವ ಮೂಲಕ ವಿವಾದಗಳಿಂದಲೂ ಅಮಲಾ ಸುದ್ದಿಯಾಗಿದ್ದಾರೆ. ಇದೀಗ ಅಮಲಾ ಅವರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿವೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಓಣಂ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ವಿಡಿಯೋ ಮಾಡಿ ಆಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ.
ಅಮಲಾ ಪೌಲ್ ಅವರು ಸಿನಿಮಾ ಮಾತ್ರವಲ್ಲದೆ, ವೈಯಕ್ತಿಕ ಜೀವನದಿಂದಲೂ ಬಹಳ ಸುದ್ದಿಯಾಗಿದ್ದರು. ನಿರ್ದೇಶಕ ವಿಜಯ್ ಜತೆಗಿನ ಮದುವೆ ಹಾಗೂ ಡಿವೋರ್ಸ್ ಬಹಳ ಚರ್ಚೆಯಾಯಿತು. ಅಲ್ಲದೆ, ಮಾಜಿ ಬಾಯ್ಫ್ರೆಂಡ್ ಜತೆಗಿನ ಲಿಪ್ಲಾಕ್ ಫೋಟೋಗಳು ವೈರಲ್ ಆಗಿದ್ದವು.
ಬೆತ್ತಲೆಯಾಗಿ ನಟಿಸಿದ ಕೆಲವೇ ಕೆಲವು ನಟಿಯರಲ್ಲಿ ಅಮಲಾ ಕೂಡ ಒಬ್ಬರು. ಆದೈ ಸಿನಿಮಾದಲ್ಲಿ ಅಮಲಾ ಮೈಚಳಿ ಬಿಟ್ಟ ನಟಿಸಿದ್ದಾರೆ. ಈ ಕ್ಷಣಗಳನ್ನು ಮತ್ತೆ ಸಂದರ್ಶನದಲ್ಲಿ ಅಮಲಾ ಮೆಲಕು ಹಾಕಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ನಟಿ ಅಮಲಾ ಪೌಲ್ ಎಲ್ಲರಿಗೂ ಚಿರಪರಿಚಿತಳೇ. ಬೆರಳೆಣಿಕೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದರೂ ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಆಡಿಜೀವಿಥಂ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಇದರಲ್ಲಿ ಪೃಥ್ವಿರಾಜ್ ಮತ್ತು ಅಮಲಾ ನಡುವೆ ಲಿಪ್ಲಾಕ್ ದೃಶ್ಯವಿದೆ. ನಿಜವಾಗಿಯೂ ಲಿಪ್ಲಾಕ್ ಮಾಡಿರುವಂತೆ ನೈಜವಾಗಿ ಅಭಿನಯಿಸಿದ್ದಾರೆ. ಅಲ್ಲದೆ, ಈ ಲಿಪ್ಲಾಕ್ ದೃಶ್ಯದ ಬಗ್ಗೆ ಅಮಲಾ ಬೋಲ್ಡ್ ಆಗಿಯೇ ಹೇಳಿಕೆ ನೀಡಿದ್ದರು.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಅಮಲಾ ಅವರು ಪ್ರಸ್ತುತ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರ್ ಅವರ ಆಡಿಜೀವಿಥಂ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಈ ಸಿನಿಮಾವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಬ್ಲಸ್ಸಿ ಅವರು ನಿರ್ದೇಶಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಸಿನಿಮಾದ ಕತೆಗೆ ಬೆತ್ತಲೆಯಾಗಿ ನಟಿಸುವುದು ಪೂರಕವಾಗಿದ್ದರೆ ನಾನು ನಟಿಸಲು ರೆಡಿ. ನಾನಿದನ್ನು ಈ ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ ಎಂದು ಅಮಲಾಪೌಲ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.